Karnataka Times
Trending Stories, Viral News, Gossips & Everything in Kannada

CM Siddaramaiah: ಜನರ ಸಮಸ್ಯೆಗಳನ್ನು ಬಗೆಹರಿಸಲು ರಾಜ್ಯ ಸರ್ಕಾರದ ಹೊಸ ತಂತ್ರ

advertisement

ದಿನ ನಿತ್ಯದ ಬೆಲೆ ಏರಿಕೆ ಇಂದಾಗಿ ಈಗಾಗಲೇ ಜನರು ಬೇಸೆತ್ತು‌ಹೋಗಿದ್ದಾರೆ. ಅದರಲ್ಲೂ ಮದ್ಯಮ ವರ್ಗದ ಕುಟುಂಬ ಬದುಕು ನಿರ್ವಹಣೆ ಮಾಡಲು ಬಹಳ ಕಷ್ಟ‌. ಈಗಾಗಲೇ ರಾಜ್ಯ ಸರಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡ ವರ್ಗದ ಜನತೆಗೆ ಸಹಾಯ ಮಾಡುತ್ತಿದೆ. ಅದೇ ರೀತಿ ಇದೀಗ ಸ್ಥಳೀಯ ವಾದ ಸಮಸ್ಯೆ ನಿವಾರಿಸಿಕೊಳ್ಳಲು ಹೊಸ ಕ್ರಮ ‌ಕೈಗೊಂಡಿದೆ.

ಗ್ಯಾರಂಟಿ ಸೌಲಭ್ಯ ಬಡವರ ಯೋಜನೆ:

ಗ್ಯಾರಂಟಿ ಯೋಜನೆ ಐದು ವರ್ಷಗಳ ಕಾಲ ಯಾವುದೇ ಅಡೆ ತಡೆ ಇಲ್ಲದೆ ಮುಂದುವರೆಯಲಿದೆ, ಗ್ಯಾರಂಟಿ ಯೋಜನೆ ಬಡವರ ಸೌಲಭ್ಯ ವಾಗಿದ್ದು ಮದ್ಯವರ್ತಿಗಳಿಲ್ಲದೆ ಪ್ರತಿ ಮನೆಗೆ ತಲುಪಿಸುವ ಒಳ್ಳೆಯ ಯೋಜನೆ ಆಗಿದ್ದು ಹಲವರಿಗೆ ಈ ಯೋಜನೆ ಸಿಕ್ಕಿಲ್ಲ. ವಂಚಿತರಾದವರಿಗೆ ಈ ಯೋಜನೆ ಸೌಲಭ್ಯ ಶೀಘ್ರವಾಗಿ ದೊರೆಯಲಿದೆ. ಚುನಾವಣೆ ಗೆದ್ದ ನಂತರದಿಂದ ಗ್ಯಾರಂಟಿ ಯೋಜನೆಗಳು ಪ್ರಗತಿಯಲ್ಲಿದೆ. ಹಾಗಾಗಿ ಬಡ ವರ್ಗ ಅಭಿವೃದ್ಧಿ ಯಾಗಲು ಇನ್ನು ಮುಂದಕ್ಕೆಯು ಹಲವು ಕ್ರಮ ಕೈಗೊಳ್ಳಲುತ್ತೇವೆ ಎಂದು ಸಿದ್ದರಾಮಯ್ಯ (CM Siddaramaiah) ಈಗಾಗಲೆ ತಿಳಿಸಿದ್ದಾರೆ.

advertisement

ಟ್ವಿಟರ್ ಖಾತೆಗೆ ಟ್ಯಾಗ್ ಮಾಡಬಹುದು:

ಸಾರ್ವಜನಿಕರ ಸಮಸ್ಯೆ ನಿವಾರಣೆ ಗಾಗಿ ರಾಜ್ಯ ಸರಕಾರ ಇದೀಗ ಹೊಸ ಕ್ರಮವನ್ನು ಕೈಗೊಂಡಿದೆ. ನಿಮ್ಮ ಸಮಸ್ಯೆ ಇದ್ದಲ್ಲಿ ರಾಜ್ಯ ಸರ್ಕಾರದ ಗಮನಕ್ಕೆ ತರಲು Office of the OSD to CM Karnataka (@osd_cmkarnataka) ಈ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಬಹುದು ಎಂದು ರಾಜ್ಯ ಸರಕಾರ ತಿಳಿಸಿದ್ದಾರೆ.

ಈ ಬಗ್ಗೆ ಸುತ್ತೋಲೆ:

ಹೌದು ಈ ಬಗ್ಗೆ ರಾಜ್ಯ ಸರಕಾರ ಪ್ರಕಟಣೆ ಹೊರಡಿಸಲು ಮುಖ್ಯ ‌ಕಾರಣ ಕೂಡ ಇದ್ದು ಹಾವೇರಿ ಜಿಲ್ಲೆಯಲ್ಲೊಬ್ಬ ವ್ಯಕ್ತಿಯು ತನ್ನ ತಾಯಿಗೆ ಅನ್ನ ಹಾಕಲು ಸಾಧ್ಯವಾಗದೇ ಇರೋ ಕಾರಣ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬ ಚರ್ಚೆಗಳು ಹರಿದಾಡುತ್ತಿದೆ. ಹೀಗಾಗಿ ರಾಜ್ಯ ಸರಕಾರ ಈ ಬಗ್ಗೆ ಪರಿಶೀಲನೆ ಕೂಡ ಮಾಡಿದೆ.ಆದ್ರೆ ಆ ಕುಟುಂಬ ಬಿಪಿಎಲ್ ಕಾರ್ಡ್ (BPL Card) ಹೊಂದಿದ್ದು ಪ್ರತಿ ತಿಂಗಳು ಉಚಿತವಾಗಿ ಅಕ್ಕಿ ಅನ್ನಭಾಗ್ಯ ಹಣ, ಮಾತ್ರವಲ್ಲದೇ, ಗೃಹ ಲಕ್ಷ್ಮೀ (Gruha Lakshmi), ಗೃಹ ಜ್ಯೋತಿ (Gruha Jyothi) ಯೋಜನೆಯ ಫಲಾನುಭವಿಯಾಗಿರುತ್ತಾರೆ. ಆದರೆ ಇಂತಹ‌ ಸ್ಥಳೀಯವಾದ ಸಮಸ್ಯೆ ಏನಾದ್ರೂ ಇದ್ದರೆ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿ ನಿಮ್ಮ ಸಮಸ್ಯೆ ಪರಿಹಾರ ಮಾಡಿಕೊಳ್ಳಿ ಎಂದು ಸರ್ಕಾರ ಆದೇಶ ನೀಡಿದೆ.

advertisement

Leave A Reply

Your email address will not be published.