Karnataka Times
Trending Stories, Viral News, Gossips & Everything in Kannada

BPL Card: ಅಕ್ರಮ ಬಿಪಿಎಲ್ ಕಾರ್ಡ್ ಹಾಗೂ ಅಕ್ರಮ ರೇಷನ್ ಪಡೆಯುವವರಿಗೆ ಈ ಶಿಕ್ಷೆ ಜಾರಿಗೆ ತಂದ ಸರ್ಕಾರ!

advertisement

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು ಹೆಚ್ಚಿನ ಜನರು ಇದರ ಬಳಕೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಎಪಿಎಲ್​ ಹಾಗೂ ಬಿಪಿಎಲ್ ಕಾರ್ಡ್​​ಗಳಿಗೆ ಭಾರೀ ಡಿಮ್ಯಾಂಡ್ ಬಂದಿದೆ. ಬಿಪಿಎಲ್‌ ಕಾರ್ಡ್ (BPL Card) ಇಂದು ಸರಕಾರದ ಯಾವುದೇ ಸೌಲಭ್ಯ ಗಳನ್ನು ಪಡೆಯಲು ಬಹಳ ಮುಖ್ಯವಾಗುತ್ತದೆ. ಇನ್ನು ಬಡತನ ರೇಖೆಗಿಂತ ಕೆಳಗಿನವರು ಮಾತ್ರ ಈ ಕಾರ್ಡ್ ಅನ್ನು ಪಡೆಯಲು ಅರ್ಹ ರಾಗುತ್ತಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಿಪಿಎಲ್‌ ಕಾರ್ಡ್‌ ವಿತರಣೆಗೆ ಅದರದೇ ಆದ ಒಂದಷ್ಟು ಪ್ರಾಥಮಿಕ ನಿಯಮಗಳನ್ನು ಕೂಡ ವಿಧಿಸಿದೆ.

ಸುಳ್ಳು ದಾಖಲೆ ಹೆಚ್ಚಳ:

 

 

ಇಂದು ಸರಕಾರದ ಕೆಲವೊಂದು ಸೌಲಭ್ಯ ಪಡೆಯಲು ಸುಳ್ಳು ಮಾಹಿತಿ ನೀಡಿ ಮೋಸ ಮಾಡಿರುವ ಪ್ರಕರಣಗಳು ಹೆಚ್ಚಾಗಿವೆ. ಹಾಗಾಗಿ ಸರಕಾರ ಹಲವು ರೀತಿಯ ಕ್ರಮ ಗಳನ್ನು ಕೈಗೊಂಡಿದೆ. ಸತತವಾಗಿ ಕಳೆದ 6 ತಿಂಗಳಿಂದ ರೇಷನ್‌ ಪಡೆಯದ ಬಳಕೆದಾರರ ಕಾರ್ಡ್ ಅನ್ನು ರದ್ದು ಮಾಡಲು ಸಹ ಸರಕಾರ ತಿರ್ಮಾನಿಸಿದೆ. ಕೆಲವು ಜನರು ಸರಕಾರಿ ಸೌಲಭ್ಯಗಳು, ಆರೋಗ್ಯ ಸಂಬಂಧಿ ಸೌಲಭ್ಯ ಪಡೆಯಲು ಮಾತ್ರ ಬಿಪಿಎಲ್‌ ಕಾರ್ಡ್‌ ಬಳಕೆ ಮಾಡಿದ್ದರೆ ಅವರ ಕಾರ್ಡ್ ರದ್ದು ಆಗುತ್ತದೆ.

ಈ ನಿಯಮ ಇದೆ:

advertisement

ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ 12,000 ರೂಪಾಯಿಗಿಂತಲೂ ಕಡಿಮೆ ಆದಾಯ ಇದ್ದವರು ಬಿಪಿಎಲ್‌ ಕಾರ್ಡ್‌ (BPL Card) ಗೆ ಅರ್ಜಿ ಸಲ್ಲಿಸಬಹುದು. ಅದೇ ರೀತಿ ನಗರ, ಪ್ರದೇಶದಲ್ಲಿ ವಾರ್ಷಿಕ 17,000 ರೂಪಾಯಿಗಿಂತೂ ಕಡಿಮೆ ಆದಾಯ ಹೊಂದಿರುವವರು ಅರ್ಜಿ ಸಲ್ಲಿಸಲು ಅವಕಾಶ ಇದೆ.

ಈ ನಿಯಮ ಪಾಲಿಸಬೇಕು:

  • ವಾರ್ಷಿಕ ಆದಾಯ ಅಂದಾಜು 1ಲಕ್ಷ, ಇಪ್ಪತ್ತು ಸಾವಿರಕ್ಕಿಂತ ಕಡಿಮೆ‌ಇರಬೇಕು.
  • ಸಾವಿರಕ್ಕೂ ಹೆಚ್ಚು ಅಡಿಯ ಪಕ್ಕಾ ಮನೆ
  • ಮೂರು ಹೆಕ್ಟೇರ್ ಗಿಂತ ಹೆಚ್ಚು‌ಒಣ ಭೂಮಿ ಇರಬಾರದು
  • ನಾಲ್ಕು ಚಕ್ರದ ವೈಟ್ ಬೋರ್ಡ್ ವಾಹನ ಇರಬಾರದು
  • ಸರಕಾರಿ ನೌಕರರು ಈ ಕಾರ್ಡ್ ಪಡೆಯುವಂತಿಲ್ಲ
  • ಸುಳ್ಳು ಮಾಹಿತಿ ,ದಾಖಲೆ ನೀಡಿ ಈ ಕಾರ್ಡ್‌ ಮಾಡುವಂತಿಲ್ಲ.

ಈ ದಾಖಲೆಗಳು ಬೇಕು

  • Aadhaar Card,
  • ಮನೆಯ ಎಲ್ಲ ಸದಸ್ಯರ ಆಧಾರ್‌ ಕಾರ್ಡ್‌ಗಳು,
  • Bank Pass Book,
  • ಆದಾಯ, ಜಾತಿ, ನಿವಾಸ ಪ್ರಮಾಣ ಪತ್ರ , ಮೊಬೈಲ್‌ ಸಂಖ್ಯೆ,

ಒಂದು ವೇಳೆ ಸುಳ್ಳು ಮಾಹಿತಿ ನೀಡಿ‌ ಕಾರ್ಡ್ ಮಾಡಿಸಿದ್ರೆ ಕಾನೂನಿನ ಅಡಿಯಲ್ಲಿ ದಂಡ ,ಶಿಕ್ಷೆ ಇರಲಿದೆ.

advertisement

Leave A Reply

Your email address will not be published.