Karnataka Times
Trending Stories, Viral News, Gossips & Everything in Kannada

BPL Card: BPL ಕಾರ್ಡ್ ಇರುವವರಿಗೆ ಸರ್ಕಾರದಿಂದ ಮತ್ತೊಂದು ಉಚಿತ ಯೋಜನೆ ಲಭ್ಯ, ಕೂಡಲೇ ಪಡೆಯಿರಿ.

advertisement

ಆರೋಗ್ಯವೇ ಭಾಗ್ಯ ಎಂಬ ಗಾದೆ ಮಾತಿನಂತೆ ಮನುಷ್ಯ ಆರೋಗ್ಯ ವಾಗಿದ್ದರೆ ಮಾತ್ರ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ. ಹಾಗಾಗಿ ಆರೋಗ್ಯವಂತರಾಗಿ ದೇಹವನ್ನು ರಕ್ಷಿಸಿ ಕೊಳ್ಳುವುದು ಸಹ ಮುಖ್ಯವಾಗುತ್ತದೆ. ಆದ್ರೆ ಇಂದು ಆರೋಗ್ಯ ಯಾವಾಗ ಕೆಡುತ್ತದೆ ಎಂದು ಹೇಳಲಾಗದು.ಇದಕ್ಕಾಗಿ ಬಡವರ್ಗದ ಜನತೆಗೆ ಸಹಾಯಕ ವಾಗಲೆಂದು ಆಯುಷ್ಮಾನ್ ಕಾರ್ಡ್ (Ayushman Card) ಜಾರಿಗೆ ತರಲಾಗಿದೆ.‌ ಈಗಾಗಲೇ ಈ ಯೋಜನೆಯ ಸದುಪಯೋಗ ವನ್ನು ಹಲವಷ್ಟು ಜನರು ಬಳಸಿಕೊಂಡಿದ್ದಾರೆ.

ಯಾರಿಗೆ ಈ ಸೌಲಭ್ಯ?

ಸರ್ಕಾರಿ ಆರೋಗ್ಯ ವಿಮಾ ಯೋಜನೆ (Government Health Insurance Scheme) ಯ ಮೂಲಕ ಆಯುಷ್ಮಾನ್ ಕಾರ್ಡ್ (Ayushman Card) ಅನ್ನು ಬಡ ವರ್ಗ ಮತ್ತು ಅಗತ್ಯವಿರುವ ಜನರಿಗೆ ಈ ಸೌಲಭ್ಯ ಒದಗಿಸಲಾಗುತ್ತದೆ. ಅದೇ ರೀತಿ ಬಿಪಿಎಲ್ ಕಾರ್ಡ್ (BPL Card) ಹೊಂದಿದ್ದರೆ ಮಾತ್ರ ನೀವು ಈ ಯೋಜನೆಯ ಸೌಲಭ್ಯ ಪಡೆಯಲು ಅರ್ಹರಾಗುತ್ತೀರಿ.

 

ಉಚಿತ ಆರೋಗ್ಯ ಸೇವೆ:

advertisement

ಈ ಯೋಜನೆಯ ಮೂಲಕ ರೂ 5 ಲಕ್ಷ ರೂ.ಗಳವರೆಗೆ ಉಚಿತ ಆರೋಗ್ಯ ವಿಮೆಯ (Free Health Insurance) ಪ್ರಯೋಜನವನ್ನು ಪಡೆಯಲು ಅರ್ಹರಾಗುತ್ತೀರಿ. ಈ ಕಾರ್ಡ್ ಹೊಂದಿದ್ದರೆ ಕಾರ್ಡ್ ದಾರರು ಉಚಿತ ಚಿಕಿತ್ಸೆ ಪಡೆಯಬಹುದು.ಚಿಕಿತ್ಸೆಯ ಸಮಯದಲ್ಲಿ ಎಲ್ಲ‌ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಆಸ್ಪತ್ರೆಯಲ್ಲಿ ದಾಖಲಾಗುವ ಮೂರು ದಿನದ ಮುಂಚಿನ ಖರ್ಚು‌ ಮತ್ತು ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆದ 15 ದಿನಗಳವರೆಗಿನ ಖರ್ಚು ವೆಚ್ಚವು ಈ ಯೋಜನೆಯಲ್ಲಿ ಇರುತ್ತದೆ.

ನೋಂದಣಿ ‌ಮಾಡಿ

ಆಯುಷ್ಮಾನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡುದಾದ್ರೆ ನೀವು https://bis.pmjay.gov.in. ಈ ಲಿಂಕ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.ಅದೇ ರೀತಿ ಗ್ರಾಮ-1 ಕೇಂದ್ರ‌ ಅಥವಾ ನಾಗರೀಕ ಸೇವಾ ಆಯುಷ್ಮಾನ್‌ ಭಾರತ್ ಪ್ರಧಾನ ಮಂತ್ರಿ ಜನಾರೋಗ್ಯ ಮೂಲಕ ನೊಂದಾಯಿಸಿ ಪಡೆಯಬಹುದಾಗಿರುತ್ತದೆ.

ಈ ದಾಖಲೆ ಬೇಕು:

  • Aadhaar Card
  • PAN Card
  • Mubile Number, Address
  • Caste Certificate
  • Income Certificate ಇತ್ಯಾದಿ.

ಈ ಯೋಜನೆಯ ಒಟ್ಟು ಅನುದಾನದಲ್ಲಿ ರಾಜ್ಯ ಸರ್ಕಾರವು ಶೇ 66 ರಷ್ಟು ನೀಡುತ್ತಿದ್ದರೆ, ಕೇಂದ್ರ ಸರ್ಕಾರವು 34% ನೀಡಲಿದೆ. ಒಟ್ಟಿನಲ್ಲಿ ಬಡವರ್ಗದ ಜನತೆಗೆ ಈ ಯೋಜನೆ ಬಹಳಷ್ಟು ಸಹಕಾರಿಯಾಗಲಿದೆ.

advertisement

Leave A Reply

Your email address will not be published.