Karnataka Times
Trending Stories, Viral News, Gossips & Everything in Kannada

HSRP Number Plate: ಇದುವರೆಗೂ HSRP ನಂಬರ್ ಪ್ಲೇಟ್ ಬುಕ್ ಮಾಡದವರಿಗೆ ಸಿಹಿಸುದ್ದಿ! ದಂಡದ ವಿಚಾರದಲ್ಲಿ ಟ್ವಿಸ್ಟ್

advertisement

ಈಗಾಗಲೇ ರಾಜ್ಯದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ HSRP ನಂಬರ್ ಪ್ಲೇಟ್ಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎನ್ನುವಂತಹ ನಿಯಮವನ್ನು ಜಾರಿಗೆ ತಂದಿದ್ದು ಮೇ 31 ಒಳಗೆ ಇದನ್ನು ಮಾಡಿಸಿಕೊಳ್ಳಬೇಕು ಎಂಬುದಾಗಿ ಕೊನೆಯ ದಿನಾಂಕದ ಗಡುವನ್ನು ಕೂಡ ಸರ್ಕಾರ ಪ್ರಕಟಿಸಿದೆ. ಸದ್ಯಕ್ಕೆ ಇದರ ಗಡುವನ್ನು ಮುಂದುವರಿಸುವಂತಹ ಸಾಧ್ಯತೆ ಅನುಮಾನವೇ ಸರಿ ಯಾಕಂದ್ರೆ ಜೂನ್ ತಿಂಗಳವರೆಗೂ ಕೂಡ ಚುನಾವಣೆ ನೀತಿ ಸಂಹಿತೆ ಇರುವುದರಿಂದಾಗಿ ಸರ್ಕಾರ ಯಾವುದೇ ರೀತಿಯ ನಿಯಮಗಳನ್ನು ಜಾರಿಗೆ ತರುವ ಹಾಗಿಲ್ಲ. ಜೂನ್ ನಾಲ್ಕರ ನಂತರ ಈ ವಿಚಾರದ ಬಗ್ಗೆ ಕರ್ನಾಟಕ ಸರ್ಕಾರ ಬೇರೆ ರೀತಿ ನಿರ್ಧಾರ ತೆಗೆದುಕೊಂಡರು ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ ಯಾಕೆಂದರೆ HSRP Number Plate ಅನ್ನು ಹೆಚ್ಚಿನ ಜನರು ಅಳವಡಿಸಲು ಎಂಬುದಾಗಿ ತಿಳಿದು ಬಂದಿದೆ.

ಮಾಹಿತಿ ಪ್ರಕಾರ 55 ಲಕ್ಷಕ್ಕೆ ಸರಿಹೊಂದುವ ರೀತಿಯಲ್ಲಿ ಕರ್ನಾಟಕ ರಾಜ್ಯದಲ್ಲಿ HSRP Number Plate ಅನ್ನು ಅಳವಡಿಸಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಇದಕ್ಕಿಂತ ಎರಡು ಪಟ್ಟು ಹೆಚ್ಚಿನ ನಂಬರ್ ಪ್ಲೇಟ್ಗಳು ಇನ್ನೂ ಕೂಡ ಅಳವಡಿಸಿಕೊಳ್ಳುವುದು ಬಾಕಿ ಇದೆ ಎಂಬುದಾಗಿ ತಿಳಿದು ಬಂದಿದೆ. ಮೇ 7 ರಂದು 14 ಲೋಕಸಭಾ ಕ್ಷೇತ್ರದಲ್ಲಿ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು ಇದಾದ ನಂತರ ನಂಬರ್ ಪ್ಲೇಟ್ ಅಳವಡಿಕೆ ಸಂಖ್ಯೆ ಹೆಚ್ಚಾಗಬಹುದು ಎಂಬುದಾಗಿ ನಿರೀಕ್ಷಿಸಲಾಗಿದೆ. ಚುನಾವಣೆ ಮುಗಿದ ನಂತರ ಮತ್ತೆ ಇದು ವಿಸ್ತರಣೆ ಆಗುವ ಸಾಧ್ಯತೆ ಇದೆ ಎಂಬುದಾಗಿ ಸುದ್ದಿ ಇದೆ.

HSRP Number Plate ಅಳವಡಿಕೆಯಲ್ಲಿ ಕನ್ನಡಿಗರಿಗೆ ಸಿಗಬಹುದಾ ಗುಡ್ ನ್ಯೂಸ್?

 

advertisement

Image Source: Paytm

 

ತಿಳಿದು ಬಂದಿರುವ ಮಾಹಿತಿಗಳ ಪ್ರಕಾರ ಈಗಾಗಲೇ ಆಗಿರುವಂತಹ ನಂಬರ್ ಪ್ಲೇಟ್ ಅಳವಡಿಕೆಗಳಿಗಿಂತ ದುಪ್ಪಟ್ಟು ಸಂಖ್ಯೆಯಲ್ಲಿ HSRP ನಂಬರ್ ಪ್ಲೇಟ್ಗಳನ್ನು (HSRP Number Plate) ಅಳವಡಿಸುವುದು ಬಾಕಿ ಇರುವ ಕಾರಣದಿಂದಾಗಿ ಮೇ 31ಕ್ಕೆ ಇಟ್ಟಿರುವಂತಹ ಗಡುವನ್ನು ಆಗಸ್ಟ್ ತಿಂಗಳಿಗೆ ಮುಂದುವರಿಸುವ ಸಾಧ್ಯತೆ ಇರಬಹುದು ಎಂಬುದಾಗಿ ತಿಳಿದು ಬಂದಿದೆ. myhsrp.com ವೆಬ್ ಸೈಟ್‌ಗೆ ಹೋಗುವ ಮೂಲಕ ನೀವು ಅಲ್ಲಿ ರಿಜಿಸ್ಟರ್ ಮಾಡಿಕೊಂಡು ನಂಬರ್ ಪ್ಲೇಟ್ ಅನ್ನು ಪಡೆದುಕೊಳ್ಳಬಹುದಾಗಿದ್ದು ಆದಷ್ಟು ಮೇ 31ರ ಒಳಗೆ ಈ ಪ್ರಕ್ರಿಯೆಯನ್ನು ಪೂರೈಸುವ ಮೂಲಕ ಜವಾಬ್ದಾರಿಯುತ ನಾಗರಿಕನ ಜವಾಬ್ದಾರಿಯನ್ನು ಪೂರೈಸಿ.

 

Image Source: Times of India

 

ಒಂದು ವೇಳೆ ನಿಗದಿತ ಸಮಯದ ನಂತರ ಕೂಡ ನೀವು ನಂಬರ್ ಪ್ಲೇಟ್ ಹಾಕಿಕೊಳ್ಳದೆ ಹೋದಲ್ಲಿ ಮೊದಲು ಹಿಡಿದಲ್ಲಿ 1000 ರೂಪಾಯಿ ಹಾಗೂ ಎರಡನೇ ಬಾರಿ ಹಿಡಿದಲ್ಲಿ ರೂ.2000ಗಳ ಶುಲ್ಕವನ್ನು ಕಟ್ಟಬೇಕಾಗುತ್ತದೆ ಎಂಬುದಾಗಿ ತಿಳಿದುಬಂದಿದೆ. ಹೀಗಾಗಿ ಈ ದೊಡ್ಡ ಮಟ್ಟದ ಹಣವನ್ನು ಶುಲ್ಕ ರೂಪದಲ್ಲಿ ಕಟ್ಟುವುದಕ್ಕಿಂತ ನಿಮ್ಮ ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡು ಈ ದಂಡದಿಂದ ತಪ್ಪಿಸಿಕೊಳ್ಳಿ.

advertisement

Leave A Reply

Your email address will not be published.