Karnataka Times
Trending Stories, Viral News, Gossips & Everything in Kannada

Ration Card: APL-BPL ರೇಷನ್ ಕಾರ್ಡ್ ಬಗ್ಗೆ ಬೆಳ್ಳಂಬೆಳಿಗ್ಗೆ ಸಿಹಿಸುದ್ದಿ ಕೊಟ್ಟ ರಾಜ್ಯ ಸರ್ಕಾರ

advertisement

ಇಂದು ರೇಷನ್ ಕಾರ್ಡ್ ಅನ್ನೋದು ಬಹು ಮುಖ್ಯ ದಾಖಲೆ ‌ಅನ್ನೋದು ಎಲ್ಲರಿಗೂ ತಿಳಿದೆ‌ ಇದೆ.ಇಂದು ರಾಜ್ಯ ಸರಕಾರದಿಂದ ಸಿಗುತ್ತಿರುವ ಗ್ಯಾರಂಟಿ ಯೋಜನೆಗಳಿಗೂ ಈ ರೇಷನ್ ಕಾರ್ಡ್ (Ration Card) ಅನ್ನೋದು ಬಹು ಅಗತ್ಯವಾಗಿ ಬೇಕಾಗಿದೆ‌. ಹಾಗಾಗಿ ಯಾವುದೇ ಸೌಲಭ್ಯ ಪಡೆಯುದಾದರೂ ಈ ದಾಖಲೇ ಇಂದು ಅತೀ ಅಗತ್ಯ ಎನಿಸಿದೆ.‌

ಆದರೆ ಈ ಕಾರ್ಡ್ ಇಲ್ಲದೆ ಇದ್ದವರು ಸರಕಾರಿ ಸೌಲಭ್ಯ ಗಳಿಂದ ವಂಚಿತ ರಾಗಿದ್ದು‌ ಹೊಸ ಕಾರ್ಡ್ ಅರ್ಜಿ ಸಲ್ಲಿಕೆಗೆ‌ ಕಾಯುತ್ತಿದರು. ಕೊನೆಗೂ ಸರಕಾರ ಕೂಡ ಅವಕಾಶ ಮಾಡಿ‌ಕೊಟ್ಟಿದೆ.ಎಪ್ರಿಲ್ ತಿಂಗಳಿನಲ್ಲಿ ಅರ್ಜಿ ಸಲ್ಲಿಕೆ ಮಾಡಲು ಅವಧಿ ನಿಗದಿ ಸಹ ಮಾಡಿದ್ದು ಇದೀಗ ಈ ಬಗ್ಗೆ ಆಪ್ಡೆಟ್ ಮಾಹಿತಿ ‌ನೀಡಿದೆ.

ಮತ್ತೆ ಅವಕಾಶ?

 

Image Source: Deccan Herald

 

ಹೊಸ ರೇಷನ್ ಕಾರ್ಡ್ (Ration Card) ಗೆ‌ ಇನ್ನು ಕೂಡ ಅರ್ಜಿ‌ ಸಲ್ಲಿಕೆ ಮಾಡಿಲ್ಲ ಎಂದಾದರೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಮತ್ತೆ ಸಿಹಿಸುದ್ದಿ ನೀಡಿದ್ದು, ಜೂನ್ ಮೊದಲ ವಾರದಲ್ಲಿ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ನೀಡಿದೆ. ಹಾಗಾಗಿ ಬಾಕಿ ಇದ್ದವರು ಮತ್ತೆ ಅರ್ಜಿ ಹಾಕಬಹುದಾಗಿದೆ.

advertisement

ದಾಖಲೆಗಳು:

  • Identity Card
  • Aadhaar Card
  • Driving License
  • Photo
  • Mobile no
  • Self-declared certificate etc.

ಅರ್ಜಿ ಸಲ್ಲಿಕೆ ಹೇಗೆ?

ಮೊದಲಿಗೆ ನೀವು ಆಹಾರ ಇಲಾಖೆಯ ಲಿಂಕ್ https://ahara.kar.nic.in/ ಇಲ್ಲಿಗೆ ಭೇಟಿ ನೀಡಿ ಲಾಗಿನ್ ಆಗಿ, ನಂತರದಲ್ಲಿ Select ಕೊಟ್ಟು ಅಲ್ಲಿ ಕೇಳಲಾದ ಮಾಹಿತಿಯನ್ನು , ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ‌ ಅಪ್‌ ಲೋಡ್ ಮಾಡಿ. ಆನ್ ಲೈನ್ ಮೂಲಕ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಹಣ ಪಾವತಿ‌ಸಬೇಕಿಲ್ಲ. ಆದ್ರೇ ಪಡಿತರ ಚೀಟಿ (Ration Card) ಬಂದ ನಂತರದಲ್ಲಿ ಸಂಬಂಧ ಪಟ್ಟಂತ ಅಧಿಕಾರಿಯಿಂದ ಪಡೆಯಲು ರೂ.100 ಪಾವತಿಸಬೇಕಾಗುತ್ತದೆ.

ಇವರು ಮಾತ್ರ ಅರ್ಹರು:

ಹೊಸ ಪಡಿತರ ಚೀಟಿ (New Ration Card) ಅರ್ಜಿ ಸಲ್ಲಿಸುದಾದರೆ ಕೆಲವೊಂದು ಷರತ್ತುಗಳು ಕೂಡ ಇದೆ. ವ್ಯಕ್ತಿಯು ‌ ಕರ್ನಾಟಕದ ಖಾಯಂ ನಿವಾಸಿಯಾಗಿದ್ದು ಕರ್ನಾಟಕ ದಲ್ಲಿ ವಾಸಿಸುತ್ತಿದ್ದರೆ ಅರ್ಜಿ ಹಾಕಬಹುದು. ಅದೇ ರೀತಿ‌ ಈಗಾಗಲೇ ಪಡಿತರ ಚೀಟಿ ಹೊಂದಿಲ್ಲ, ಹೊಸ ಕಾರ್ಡ್ ಮಾಡಿಸಬೇಕು ಎಂದವರು ಅರ್ಜಿ ಸಲ್ಲಿಸಬಹುದು.‌ ಹೊಸದಾಗಿ ಮದುವೆಯಾದ ದಂಪತಿಗಳು ಅರ್ಜಿ ಹಾಕಬಹುದು.

advertisement

Leave A Reply

Your email address will not be published.