Karnataka Times
Trending Stories, Viral News, Gossips & Everything in Kannada

BPL Ration Card: ಹೊಸ BPL ರೇಷನ್ ಕಾರ್ಡ್ ಗೆ ಮತ್ತೆ ಬಂತು ನಿಯಮಾವಳಿ! ಈ ಅರ್ಹತೆ ಇದ್ದವರಿಗೆ ಮಾತ್ರ

advertisement

ಇಂದು ಬಡವರ್ಗದ ಜನತೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರಕಾರ ಹಲವು ರೀತಿಯ ಯೋಜನೆಯನ್ನು ಹಮ್ಮಿಕೊಳ್ಳುತ್ತಲೆ ಇದೆ. ಅದರಲ್ಲಿ ಮುಖ್ಯವಾಗಿ ಬಡವರ್ಗದ ಜನತೆಗೆ ನೀಡುವ ಪಡಿತರ ಕಾರ್ಡ್ ಕೂಡ ಒಂದಾಗಿದೆ. ಬಡ ವರ್ಗದ ಜನತೆಗೆ ಸುಲಭವಾಗಿ ಆಹಾರ ಧಾನ್ಯ ಗಳು ಸಿಗುವಂತೆ ಆಗಬೇಕು ಎಂದು ಆಹಾರ ಇಲಾಖೆಯು ಉಚಿತವಾಗಿ ಪಡಿತರ ವಿತರಣೆ ಮಾಡುತ್ತಿದೆ.

ಈ ಸೌಲಭ್ಯ ಸಿಗಲು ರೇಷನ್ ಕಾರ್ಡ್ (Ration Card) ಕೂಡ ಅಗತ್ಯ ವಾಗಿ ಬೇಕಿದ್ದು ಈ ಕಾರ್ಡ್ ಅನ್ನು ಜನರ ಆದಾಯ ಅರ್ಹತೆ ಮೇರೆಗೆ ವಿಂಗಡಣೆ‌ಮಾಡಲಾಗಿದೆ. ಈ ಕಾರ್ಡ್ ಅನ್ನು ಎಪಿಎಲ್,ಬಿಪಿಎಲ್, ಅಂತ್ಯೋದಯ ಎಂದು ಮೂರು ವಿಧಗಳಾಗಿ ವಿಂಗಡಣೆ ಮಾಡಿದ್ದು ಇಂದು ಹೆಚ್ಚಿನ ಜನರು ಬಿಪಿಎಲ್ ಕಾರ್ಡ್ (BPL Ration Card) ಪಡೆಯಲು ಅರ್ಜಿ ಸಲ್ಲಿಕೆ ಮಾಡಿದ್ದಾರೆ.

ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಕೆ:

 

Image Source: Deccan Herald

 

ಈಗ ಸರಕಾರವು ಹೊಸ ಪಡಿತರ ಚೀಟಿ (Ration Card) ಪಡೆಯಲು ಅರ್ಜಿ ಆಹ್ವಾನ ಮಾಡಿದೆ. ಈಗಾಗಲೇ ಸರಕಾರ ಎಪ್ರಿಲ್ ಒಂದರಿಂದ ಅವಕಾಶ ನೀಡಿದ್ದು ಹೆಚ್ಚಿನ ಜನರು ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಅದರೆ ಹೊಸ ಬಿಪಿಎಲ್ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವ ಮೊದಲು ಅರ್ಹತೆ ಯನ್ನು ನೀವು ತಿಳಿದುಕೊಂಡಿರಬೇಕು.ನೀವು ಆ ಷರತ್ತುಗಳನ್ನು ಕಟ್ಟುನಿಟ್ಟಾಗಿ ಫಾಲೋ ಮಾಡಿದ್ದಲ್ಲಿ ನಿಮಗೆ ಹೊಸ ಕಾರ್ಡ್ ಸಿಗಲಿದೆ.

ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಇವರು ಅರ್ಹರು:

 

advertisement

Image Source: DNA India

 

  • ಹೊಸ ರೇಷನ್ ಕಾರ್ಡ್ ಪಡೆಯಲು ಅರ್ಜಿ ಸಲ್ಲಿಕೆ ಮಾಡುವವರು ಕರ್ನಾಟಕದ ಖಾಯಂ ನಿವಾಸಿ ಯಾಗಿದ್ದರೆ ಕರ್ನಾಟಕ ದಲ್ಲಿ ವಾಸ ಮಾಡುತ್ತಿದ್ದರೆ ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದು.
  • ಇನ್ನು ಈಗಾಗಲೇ ಪಡಿತರ ಚೀಟಿ ಹೊಂದಿದ್ದರೆ, ರೇಷನ್ ಪಡೆಯುತ್ತಿದ್ದರೆ ಅರ್ಜಿ ಸಲ್ಲಿಕೆ ಮಾಡುವಂತಿಲ್ಲ.
  • ಹೊಸದಾಗಿ ಮದುವೆಯಾದ ದಂಪತಿಗಳು ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಬಹುದು.

ದಾಖಲೆಗಳು:

  • Voter ID
  • Aadhaar Card
  • Age Certificate
  • Self-declared Certificate
  • Photo
  • Mobile no

ಬಿಪಿಎಲ್ ಕಾರ್ಡ್ ಗೆ ನಿಯಮ:

ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ 12,000 ರೂಪಾಯಿಗಿಂತಲೂ ಕಡಿಮೆ ಆದಾಯ ಹೊಂದಿರುವವರು ಬಿಪಿಎಲ್‌ ಕಾರ್ಡ್‌ (BPL Ration Card) ಪಡೆಯಬಹುದು‌. ಅದೇ ರೀತಿ ಪಟ್ಟಣ ಪ್ರದೇಶದಲ್ಲಿ ವಾರ್ಷಿಕ 17,000 ರೂಪಾಯಿಗಿಂತೂ ಕಡಿಮೆ ಆದಾಯ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಹೊಸ ರೇಷನ್ ಕಾರ್ಡ್ ಗೆ ನೀವು https://ahara.kar.nic.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಹಾಕಬಹುದು

advertisement

Leave A Reply

Your email address will not be published.