Karnataka Times
Trending Stories, Viral News, Gossips & Everything in Kannada

Pahani: ನಿಮ್ಮ ಪಹಣಿ ಪತ್ರದಲ್ಲಿ ಯಲ್ಲಿ ಸಾಲ ಅಥವಾ ಋಣ ಎಂದು ಬಂದಿದ್ದರೆ ಹೊಸ ಸೂಚನೆ

advertisement

ಒಂದು ಆಸ್ತಿ ವೈಯಕ್ತಿಕ ಆಗಿರಲಿ ಅಥವಾ ಪಿತ್ರಾರ್ಜಿತ ಆಸ್ತಿ (Inherited Property) ಆಗಿರಲಿ ಅದರ ಮೇಲೆ ಸಾಲ (Loan) ಪಡೆಯಬೇಕಾದರೆ ಅಥವಾ ಆ ಒಂದು ಜಾಗವನ್ನು ನೀವು ಮಾರಬೇಕು ಎಂದು ಬಯಸಿದರೆ ಆಗ ನಿಮಗೆ ಆ ಒಂದು ಜಾಗವೂ ಈಗಾಗಲೇ ಋಣ ಮುಕ್ತವಾಗಿದೆಯೇ ಎಂದು ನೋಡಲಾಗುವುದು. ಹಾಗಾಗಿ ಇಂತಹ ಸಾಲದಿಂದ ನಿಮ್ಮ ಆಸ್ತಿ ಋಣ ಮುಕ್ತ ಆಗಿದ್ದೂ ಪಹಣಿಯಲ್ಲಿ ಇನ್ನೂ ಕೂಡ ಈ ಅಂಶ ಸಾಬೀತು ಆಗಿಲ್ಲ ಎಂದರೆ ಅದನ್ನು ನೀವು ಹೇಗೆ ಸರಿಪಡಿಸಿಕೊಳ್ಳಬೇಕು ಎಂಬುದನ್ನು ನಾವು ಇಂದು ನಿಮಗೆ ತಿಳಿಸಲಿದ್ದೇವೆ.

ನೀವು ಈ ಹಿಂದೆ ಸಾಲ (Loan) ಪಡೆದಿದ್ದರೆ ಅದನ್ನು ನೀವು ವಾಪಾಸ್ಸು ನೀಡಿದ್ದರೆ ಮಾತ್ರವೇ ನಿಮ್ಮ ಜಮೀನು ಋಣ ಮುಕ್ತ ವಾಗಲಿದೆ. ಹಾಗಾಗಿ ನೀವು ಮೊದಲು ಸಾಲದ ಮೊತ್ತ ವಾಪಾಸ್ಸು ನೀಡಿದ್ದೀರೆ ಅಥವಾ ಇಲ್ಲ ಎಂಬುದನ್ನು ಖಾತರಿ ಪಡಿಸಿಕೊಳ್ಳಿ. ನೀವು ಸಾಲದ ಮೊತ್ತ ವಾಪಾಸ್ಸು ಕಟ್ಟಿದ ಮೇಲೆ ರಶೀದಿಯನ್ನು ನೀವು ಪಡೆಯಬೇಕು. ಹೀಗೆ ಅನೇಕ ಹಂತ ದಾಟಿದ್ದ ಬಳಿಕ ನಿಮ್ಮ ಜಮೀನು ಋಣಮುಕ್ತ ಎಂದು ಅನಿಸಿಕೊಳ್ಳಲಿದೆ.

ಈ ಪ್ರಕ್ರಿಯೆ ನಡೆದಿರಬೇಕು:

ರಶೀದಿಯನ್ನು ಪಡೆದಿದ್ದರೆ ಆ ಒಂದು ರಶೀದಿಯಲ್ಲಿ ಸಾಲ ಇಲ್ಲ ಎಂಬುದರ ಪ್ರಮಾಣ ಪತ್ರ ಬರೆದಿರಬೇಕು. ಅದನ್ನು No Due Certificate ಪಡೆದಿರಬೇಕು. ಅದರ ಜೊತೆಗೆ ಚಾಲ್ತಿ ವರ್ಷದ ಪಹಣಿ ಪತ್ರ (Pahani) ಮತ್ತು ಆಧಾರ್ ಕಾರ್ಡ್ (Aadhaar Card) ಅನ್ನು ಪಡೆದಿರಬೇಕು. ಅದರ ಜೊತೆಗೆ ಹಳೆ ಸಾಲ ಮರುಪಾವತಿ ಆದ ಬಗ್ಗೆ ಸರಳ ಅರ್ಜಿಯನ್ನು ನೀವು ಭರ್ತಿ ಮಾಡಬೇಕು. ಈ ಎಲ್ಲ ದಾಖಲೆ ಸಮೇತ ಅರ್ಜಿಯನ್ನು ನೀವು ತಾಲೂಕು ಭೂಮಿ ಕೇಂದ್ರಕ್ಕೆ ನೀಡಬೇಕು.

advertisement

ಎರಡು ವಿಧಾನ ಇದೆ:

 

Image Source: IndiaFilings

 

ಪಹಣಿಯಲ್ಲಿ (Pahani) ಇರುವ ಸಾಲವನ್ನು ಋಣ ಮುಕ್ತಾಯ ಮಾಡಲು ಎರಡು ವಿಧಾನ ಇದೆ. ರೈತರು ಒಂದು ಲಕ್ಷಕ್ಕಿಂತ ಕಡಿಮೆ ಸಾಲ (Loan) ಹೊಂದಿದ್ದರೆ ಪಹಣಿಯಲ್ಲಿ ಇರುವ ಋಣ ಮುಕ್ತಾಯ ಆಗಲಿದೆ. ಆದರೆ ಒಂದು ಲಕ್ಷಕ್ಕಿಂತ ಅಧಿಕ ಸಾಲವನ್ನು ವಾರ್ಡ್ ಗೇಜ್ ಮೂಲಕ ಪಡೆದಿದ್ದರೆ ಅದರ ಸಾಲ ತೆಗೆಯುವ ಕ್ರಮ ಬೇರೆ ರೀತಿಯಾಗಿ ಇರಲಿದೆ. ಅದಕ್ಕಾಗಿ ನೀವು ನಾಡಕಚೇರಿಯಲ್ಲಿ ಕೂಡ ಪಹಣಿ ಪತ್ರ ಋಣ ಸಂದಾಯ ಆಗಿದೆ ಎಂಬ ಸರ್ಟಿಫಿಕೇಟ್ ಪಡೆದು ಭೂಮಿಯಲ್ಲಿ ಅರ್ಜಿ ಹಾಕಬೇಕು.

ಎಷ್ಟು ದಿನ ಬೇಕಾಗಲಿದೆ?

ನೀವು ದಾಖಲೆ ಸಮೇತ ಭೂಮಿ ಕೇಂದ್ರಕ್ಕೆ ಅರ್ಜಿ ಸಲ್ಲಿಸಿದ್ದ ಬಳಿಕ 30 ದಿನದ ಒಳಗೆ ಋಣ ಮುಕ್ತ ಪಹಣಿಯನ್ನು ಮಾಡಬೇಕು. ಆಗ ಜಮೀನಿನ ಮೇಲಿನ ಸಾಲ ಮುಕ್ತಾಯ ಆಗಲಿದೆ. ದಾಖಲೆಗಳನ್ನು ಭೂಮಿ ಕೇಂದ್ರಕ್ಕೆ ನೀಡಿದ್ದರಿಂದ ನಿಮ್ಮ ಪಹಣಿ ಋಣ ಮುಕ್ತಾಯವಾಗಲಿದೆ. ಹೀಗೆ ನಿಮ್ಮ ಜಮೀನು ಅಥವಾ ಭೂಮಿಯನ್ನು ಋಣ ಮುಕ್ತಾಯ ಕೂಡ ಮಾಡಬಹುದು.

advertisement

Leave A Reply

Your email address will not be published.