Karnataka Times
Trending Stories, Viral News, Gossips & Everything in Kannada

Pahani: ನಿಮ್ಮ ಜಮೀನಿನ ಪಹಣಿಗೆ ಆಧಾರ್ ಲಿಂಕ್ ಬಗ್ಗೆ ಸರಕಾರದ ಹೊಸ ಆದೇಶ! ಮಾಡದಿದ್ದರೆ ಈ ಸೌಲಭ್ಯ ಕಟ್

advertisement

ಇಂದು ಆಧಾರ್ ಕಾರ್ಡ್ ಎಂಬುದು ಪ್ರತಿಯೊಬ್ಬರಿಗೂ ಬಹು ಮುಖ್ಯ ದಾಖಲೆ ಯಾಗಿದೆ. ಹೌದು ಸರಕಾರದ ಯಾವುದೇ ಸೌಲಭ್ಯ ನಮಗೆ ಕ್ಲಿಪ್ತ ಸಮಯಕ್ಕೆ ಸಿಗಬೇಕಾ ದರೆ ನಮ್ಮ ಆಧಾರ್ ಮಾಹಿತಿಗಳು ಸರಿ‌ ಇರಬೇಕು.‌ ಇತ್ತಿಚೆಗೆ ಆಧಾರ್ ಕಾರ್ಡ್ (Aadhaar Card) ಗೆ ಪ್ಯಾನ್ ಕಾರ್ಡ್ (PAN Card), ಮೊಬೈಲ್ ನಂಬರ್ (Mobile Number), ಬ್ಯಾಂಕ್ ಪಾಸ್ ಬುಕ್ (Bank Pass Book), ರೇಷನ್ ಕಾರ್ಡ್ (Ration Card) ಇತ್ಯಾದಿಗಳಿಗೆ ಆಧಾರ್ ಲಿಂಕ್ ಮಾಡುವುದು ಸಹ ಕಡ್ಡಾಯ ವಾಗಿದೆ. ಇದೀಗ ರೈತರ ಮುಖ್ಯ ದಾಖಲೆಯಾದ‌ ಪಹಣಿ (Pahani)ಗೂ ಆಧಾರ್ ಲಿಂಕ್ ಕಡ್ಡಾಯ ಮಾಡಿದೆ.

Pahani-Aadhaar Link ಯಾಕಾಗಿ ಕಡ್ಡಾಯ?

ಜಾಗದ ಪಹಣಿ (Land Pahani) ಯನ್ನು ಆಧಾರ್ ಕಾರ್ಡ್‌ (Aadhaar Card) ನೊಂದಿಗೆ ಲಿಂಕ್ ಮಾಡುವುದರಿಂದ ಸರಕಾರದಿಂದ ಸಿಗುವ ಎಲ್ಲಾ ಯೋಜನೆಗಳ ಸೌಲಭ್ಯ ಗಳು ಕೂಡ ರೈತರಿಗೆ ಸರಿಯಾದ ಸಮಯದಲ್ಲಿ ದೊರಕುತ್ತದೆ. ಅದೇ ರೀತಿ ಸುಳ್ಳು ಮಾಹಿತಿ ಯನ್ನು ನೀಡಿ‌ ಸರಕಾರದ ಸೌಲಭ್ಯ ಪಡೆದುಕೊಂಡರು ಕೂಡ ಮಾಹಿತಿ‌ ಸಿಗಲಿದೆ. ಹಾಗಾಗಿ ನಿಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳನ್ನು ಭೇಟಿ ಮಾಡುವ ಮೂಲಕ‌ ಆಧಾರ್ ಕಾರ್ಡ್ (Aadhaar Card) ಮತ್ತು ಪಹಣಿ (Land Pahani) ನೀಡುವ ಮೂಲಕ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸಲು ಕೂಡ ಅವಕಾಶ ಇದೆ

ಕಡ್ಡಾಯ ಮಾಡಲಾಗಿದೆ:

 

advertisement

Image Source: easemywatch

 

ಒಂದು ಎಕರೆ ಮತ್ತು ಒಂದು ಎಕರೆಗಿಂತ ಹೆಚ್ಚು ಜಮೀನು ಹೊಂದಿದ್ದರೆ ಎಲ್ಲಾ ರೈತರು ಕೂಡ ಜಮೀನಿನ‌ ದಾಖಲೆಗಳಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯ ವಾಗಿದೆ. ಜಮೀನು ಯಾರ ಹೆಸರಿನಲ್ಲಿದೆಯೋ ಅವರ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿ ಸಬೇಕಾಗುತ್ತದೆ. ಇನ್ನು ನಿಗದಿತ ಅವಧಿಯೊಳಗೆ ಆರ್‌ಟಿಸಿ (RTC) ದಾಖಲೆಗೆ ಆಧಾರ್‌ ಸಂಖ್ಯೆ ಜೋಡಿಸುವ ಕುರಿತಂತೆ ಸರಕಾರ ಆದೇಶ ಕೂಡ ಹೊರಡಿಸಿದೆ. ಒಂದು ವೇಳೆ ಮಾಡದಿದ್ದರೆ ಹಲವಾರು ಸರ್ಕಾರಿ ಸೌಲಭ್ಯಗಳು, ಯೋಜನೆಗಳು ಹಾಗೂ ಸರ್ಕಾರದ ನೆರವು ಇನ್ನಿತರ ಸಹಾಯಧನಗಳು ನೇರವಾಗಿ ಸಿಗುವುದರ ಮೇಲೆ ಕಡಿವಾಣ ಹಾಕುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ

ಪಹಣಿಗೆ (Pahani) ಆಧಾರ್ ಲಿಂಕ್ ಮಾಡುವ ವಿಧಾನ:

 

Image Source: IndiaFilings

 

ನೀವು https://landrecords.karnataka.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನಂತರದಲಲ್ಲಿ‌ Captcha Code ನ್ನು ನಮೂದಿ ಸುವ ಆಪ್ಚನ್ ಇರಲಿದ್ದು ಅದನ್ನು ಟೈಪ್ ಮಾಡಿ, ತದ ನಂತರ Send OTP ಮೇಲೆ ಕ್ಲಿಕ್ ಮಾಡಿ. OTP ಯನ್ನು ಹಾಕಿ, ನಂತರ ನಿಮ್ಮ ಹೆಸರು, ವಿಳಾಸ ಹಾಕಿ, ತದನಂತರದಲ್ಲಿ‌ ಆಧಾರ್ ಗಾಗಿ ನನ್ನ ಒಪ್ಪಿಗೆಯನ್ನು ನೀಡುತ್ತೇನೆ ಎಂಬ ಆಪ್ಚನ್ ಮೇಲೆ ಕ್ಲಿಕ್ ಮಾಡಿ. Verify ಮಾಡಿ, ಹೀಗೆ ಮಾಡಿದರೆ ನಿಮ್ಮ ಪಹಣಿಗೆ ಆಧಾರ್ ಲಿಂಕ್ ಆಗಿದೆ ಎಂದರ್ಥ.

advertisement

Leave A Reply

Your email address will not be published.