Karnataka Times
Trending Stories, Viral News, Gossips & Everything in Kannada

Aadhaar Card: ಮಾರ್ಚ್ ಒಳಗೆ ಆಧಾರ್ ಅಪ್ಡೇಟ್‌ ಮಾಡಿಲ್ಲ ಅಂದ್ರೆ ಆಧಾರ್ ಕಾರ್ಡ್ ರದ್ದಾಗುತ್ತಾ?

advertisement

ಇಂದು ಆಧಾರ್ ಕಾರ್ಡ್ ಎಂಬುದು ಪ್ರತಿಯೊಬ್ಬರಿಗೂ ಬಹಳ ಮುಖ್ಯ.ಯಾಕಂದ್ರೆ ಒಂದು ಅರ್ಜಿ ಸಲ್ಲಿಕೆ ಮಾಡುದಾದ್ರೂ ಈ ಆಧಾರ್ ಕಾರ್ಡ್ ನಂಬರ್ (Aadhaar Card Number) ಕೇಳಿಯೇ ಕೇಳ್ತಾರೆ. ಹಾಗಾಗಿ ಸಣ್ಣ ಮಗುವಿನಿಂದ ಹಿಡಿದು ಹಿರಿಯರ ವರೆಗೂ ಈ ಆಧಾರ್ ಕಾರ್ಡ್ ಬಹಳ ಮುಖ್ಯ ವೆನಿಸಿದೆ. ವಿವಿಧ ಸರ್ಕಾರಿ ಯೋಜನೆಗಳು ಮತ್ತು ಸೇವೆಗಳಲ್ಲಿ ಕೂಡ ಆಧಾರ್ ಸಂಖ್ಯೆಯನ್ನು ಬಳಸಲಾಗುತ್ತದೆ. ಹಾಗಾಗಿ ಆಧಾರ್ ನ ಬಳಕೆ ಬಗ್ಗೆ ಹೆಚ್ಚಿನ ಜನರಿಗೆ ತಿಳಿದೆ ಇದೆ.

Aadhaar Card ನವೀಕರಣ ಮಾಡಬೇಕು:

ಇನ್ನೂ ನಿಮ್ಮ ಆಧಾರ್ ಕಾರ್ಡ್ (Aadhaar Card) ಅನ್ನು ನವೀಕರಣ ಮಾಡುವುದು ಸಹ ಅಷ್ಟೆ ಮುಖ್ಯವಾಗುತ್ತದೆ. ಆಧಾರ್ ಕಾರ್ಡ್‌ಗಳು 10 ವರ್ಷದ ಹಳೆಯದು ಎಂದಾದರೆ ಅದನ್ನು ನವೀಕರಿಸಬೇಕಾಗುತ್ತದೆ. ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರು ಕೂಡ ತಮ್ಮ ಬಯೋಮೆಟ್ರಿಕ್, ಹೆಸರು, ವಿಳಾಸ ಮಾಹಿತಿಯನ್ನು ನವೀಕರಿಸಬೇಕು ಎಂದು ಯುಐಡಿಎಐ (UIDAI) ಈಗಾಗಲೇ ತಿಳಿಸಿದೆ.

ಮಾರ್ಚ್ 14 ರ ಒಳಗೆ ಆಪ್ಡೆಡ್ ಮಾಡದೇ ಇದ್ದಲ್ಲಿ ರದ್ದಾಗುತ್ತಾ?

 

Image Source: Business League

 

advertisement

ಈಗಾಗಲೇ ನಿ‌ಮ್ಮ ಆಧಾರ್ ಕಾರ್ಡಿಗೆ ದಾಖಲೆಗಳನ್ನು ಜೋಡಣೆ ಮಾಡದಿದ್ದರೆ ನಿಮ್ಮ ಆಧಾರ್ ಕಾರ್ಡನ್ನು (Aadhaar Card) ರದ್ದು ಮಾಡಲಾಗುತ್ತದೆ ಎಂಬ ಮಾಹಿತಿ ವೈರಲ್ ಆಗುತ್ತಿದೆ. ಮಾರ್ಚ್ 14 ರ ಒಳಗೆ ಈ ಕೆಲಸ ಮಾಡದೆ ಇದ್ದಲ್ಲಿ ನಿಮ್ಮ ಆಧಾರ್ ನಿಷ್ಕ್ರಿಯವಾಗುತ್ತದೆ ಎನ್ನಲಾಗಿದೆ. ಆದರೆ ಈ ವಿಚಾರದ ಬಗ್ಗೆ ಸರಕಾರ ಮಾಹಿತಿ ನೀಡಿಲ್ಲ‌. ಉಚಿತವಾಗಿ ಆಧಾರ್ ಆಪ್ಡೆಡ್ ಮಾಡಲು ಮಾತ್ರ ಮಾರ್ಚ್ 14 ರ ವರೆಗೆ ಸಮಯ ಇದ್ದು ನಿಮ್ಮ ಆಧಾರ್ ಕಾರ್ಡ್‌ಗೆ ದಾಖಲೆ, ಮಾಹಿತಿ ಬದಲಾವಣೆ ಬಯಸಿದರೆ ಅದನ್ನು ಮಾರ್ಚ್ 14, 2024 ರವರೆಗೆ ಉಚಿತವಾಗಿ ಮಾಡಬಹುದು ಎಂಬ ಮಾಹಿತಿ ಯನ್ನು‌ಇಲಾಖೆ ನೀಡಿದೆ.

ಉಚಿತ ಆಪ್ಡೆಟ್ ಮಾಡಿ:

ಆಧಾರ್ ಆಪ್ಡೆಟ್ (Aadhaar Update) ಗಾಗಿ ನಿಮ್ಮ ದಾಖಲೆಗಳೊಂದಿಗೆ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಈ ಉಚಿತ ಅಪ್ಡೇಟ್ ಸೇವೆಯನ್ನು ನೀವು ಪಡೆಯಬಹುದಾಗಿದೆ.ಈ ನವೀಕರಣವನ್ನು ಆನ್‌ಲೈನ್ ಅಥವಾ ಆಧಾರ್ ಕೇಂದ್ರಗಳಿಗೆ ಭೇಟಿ ನೀಡುವ ಮೂಲಕ ನೀವು ಮಾಡಬಹುದಾಗಿದೆ.

ಆಧಾರ್ ನವೀಕರಣ ಯಾಕೆ?

 

Image Source: Navi

 

ಇಂದು ಆಧಾರ್ ಅನ್ನು ದುರುಪಯೋಗ ಮಾಡುವಂತಹ ಸಂಖ್ಯೆ ಹೆಚ್ಚಾಗಿದ್ದು ನಮ್ಮ ಆಧಾರ್ ಅನ್ನು ಯಾರದಾರೂ ಬಳಸಿಕೊಂಡಿದ್ದಲ್ಲಿ ನಾವು ಆಪ್ಡೆಡ್ ಮಾಡಿದ್ದಲ್ಲಿ ವಂಚನೆ ತಪ್ಪಿಸಬಹುದು. ಆದೇ ರೀತಿ ನಮ್ಮ ವಿಳಾಸ, ವಯಸ್ಸು ಇತ್ಯಾದಿ ‌ಬದಲಾವಣೆ ಕೂಡ ಮಾಡಬಹುದಾಗಿದ್ದು,  ಸರಿಯಾಗಿ ದಾಖಲೆ ಆಪ್ಡೆಡ್ ಮಾಡಬೇಕಾಗುತ್ತದೆ.

advertisement

Leave A Reply

Your email address will not be published.