Karnataka Times
Trending Stories, Viral News, Gossips & Everything in Kannada

Post Office: 5 ವರ್ಷಗಳ ಕಾಲ ಪೋಸ್ಟ್ ಆಫೀಸಿನಲ್ಲಿ 60 ಸಾವಿರ ರೂ ಇಟ್ಟರೆ ಎಷ್ಟು ಬಡ್ಡಿ ಸಿಗಲಿದೆ ಗೊತ್ತಾ?

advertisement

ಪೋಸ್ಟ್ ಆಫೀಸ್ ತನ್ನ ಗ್ರಾಹಕರ ಉಳಿತಾಯವನ್ನು ಉತ್ತೇಜಿಸುವ ಸಲುವಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಲೇ ಇರುತ್ತಾರೆ, ಅದರ ಹೂಡಿಕೆದಾರರ ವಲಯದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (Post Office Monthly Income Scheme)ಯ ಬಡ್ಡಿ ದರದಲ್ಲಿ ಪ್ರತಿ ವರ್ಷವೂ ವ್ಯಾಪಕ ಬದಲಾವಣೆಗಳು ಉಂಟಾಗಲಿದ್ದು, ಇಲ್ಲಿ 60,000 ಹಣವನ್ನು ಐದು ವರ್ಷಗಳ ಕಾಲ ಹೂಡಿಕೆ ಮಾಡಿದರೆ, ನಮ್ಮ ಹೂಡಿಕೆಯ ಆಧಾರದ ಮೇಲೆ ಎಷ್ಟು ಬಡ್ಡಿ ದರವನ್ನು ನಿಗದಿಪಡಿಸುತ್ತಾರೆ. ಇದರಿಂದ ಮೆಚುರಿಟಿ ಪಿರಿಯಡ್ (Maturity Period) ನಲ್ಲಿ ನಾವು ಪಡೆಯುವ ಲಾಭವೆಷ್ಟು ಎಂಬ ಮಾಹಿತಿಯನ್ನು ತಿಳಿಸಲಿದ್ದೇವೆ.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ ಷರತ್ತುಗಳು:

 

Image Source: Asianet News

 

  1. Post Office MIS ನಲ್ಲಿ ಹೂಡಿಕೆದಾರರು ಐದು ವರ್ಷಗಳ ಕಾಲ ತಮ್ಮ ಹಣವನ್ನು ಹೂಡಿಕೆ ಮಾಡಬಹುದು. ಅಂದರೆ ನಿಮ್ಮ ಹೂಡಿಕೆಯ ಮೆಚುರಿಟಿ ಪಿರಿಯಡ್ (Maturity Period) ಐದು ವರ್ಷಗಳಿರುತ್ತದೆ, ಈ ಅವಧಿಯವರೆಗೂ ನಿಮ್ಮ ಹಣಕ್ಕೆ ಸಂಪೂರ್ಣ ಸುರಕ್ಷತೆಯನ್ನು ಒದಗಿಸುತ್ತಾರೆ.
  2. ಹೂಡಿಕೆದಾರರು ಒಂಟಿ ಅಥವಾ ಜಂಟಿಯಾಗಿ ಖಾತೆ (Single or Joint Account) ಯನ್ನು ತೆರೆದು ಹಣವನ್ನು ಇನ್ವೆಸ್ಟ್ ಮಾಡಬಹುದು.
  3. ಒಂಟಿ ಖಾತೆಯಲ್ಲಿ ಹೂಡಿಕೆ ಮಾಡುವವರ ಗರಿಷ್ಠ ಮಿತಿಯು (Maximum Limit) ಒಂಬತ್ತು ಲಕ್ಷ ಅದರಂತೆ ಜಂಟಿಯಾಗಿ ಹೂಡಿಕೆ ಮಾಡಲು ನಿರ್ಧರಿಸಿದರೆ ನಿಮ್ಮ ಹೂಡಿಕೆ ಗರಿಷ್ಠ ಮಿತಿಯು 15 ಲಕ್ಷ.
  4. ಹೂಡಿಕೆದಾರರು ಕನಿಷ್ಠ 1000 ರೂಪಾಯಿ ಹಣವನ್ನು ಪೋಸ್ಟ್ ಆಫೀಸ್ ಮಾಸಿಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
  5. ಈ ಯೋಜನೆಯ ಅಡಿ ನಿಮ್ಮ ಹಣಕ್ಕೆ 7.4% ಬಡ್ಡಿ ದರವನ್ನು ನೀಡಲಾಗುತ್ತದೆ.
  6. ಅನಿವಾರ್ಯ ಪರಿಸ್ಥಿತಿಯಿಂದಾಗಿ ಮೆಚುರಿಟಿ ಪಿರಿಯಡ್ಗೂ ಮುನ್ನ ನಿಮ್ಮ ಹೂಡಿಕೆ ಹಣವನ್ನು ಒಂದರಿಂದ ಮೂರು ವರ್ಷಗಳ ಒಳಗೆ ತೆರೆದರೆ ನಿಮ್ಮ ಹೂಡಿಕೆಯ 2% ಮೊತ್ತವನ್ನು ಕಡಿತಗೊಳಿಸಲಾಗುವುದು.

ಪೋಸ್ಟ್ ಆಫೀಸ್ನಲ್ಲಿ MIS ತೆರೆಯುವುದು ಹೇಗೆ?

ನಿಮ್ಮ ಹೂಡಿಕೆಗೆ ಪ್ರತಿ ತಿಂಗಳು ನಿಗದಿತ ಆದಾಯ ದೊರಕುವಂತಹ ಈ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯನ್ನು ತೆರೆಯಲು ನಿರ್ಧರಿಸಿದರೆ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಶಾಖೆಗೆ (Post Office) ಭೇಟಿ ನೀಡಿ, ಜಂಟಿ ಅಥವಾ ಒಂಟಿಯಾಗಿ ಖಾತೆಯನ್ನು ತೆರೆದು ಹಣವನ್ನು ಹೂಡಿಕೆ ಮಾಡಬಹುದು. ನೀವೇನಾದರೂ ಒಂಟಿಯಾಗಿ ಹಣವನ್ನು ಹೂಡಿಕೆ ಮಾಡಲು ಬಯಸಿದರೆ ನಿಮ್ಮ ಗರಿಷ್ಠ ಮಿತಿಯು 9 ಲಕ್ಷಕ್ಕೆ ನಿಗದಿಪಡಿಸಲಾಗಿರುತ್ತದೆ.

advertisement

ಕನಿಷ್ಠ ಒಂದು ಸಾವಿರ ರೂಪಾಯಿ ಹಣವನ್ನು ಹೂಡಿಕೆ ಮಾಡುವ ಮೂಲಕ ಯೋಜನೆಯನ್ನು ಪ್ರಾರಂಭಿಸಬಹುದು ಹಾಗೂ ಜಂಟಿಯಾಗಿ ಖಾತೆ (Joint Account) ತೆರೆದರೆ ಗರಿಷ್ಠ 15 ಲಕ್ಷ ಹಾಗೂ ಕನಿಷ್ಠ ಒಂದು ಸಾವಿರ ರೂಪಾಯಿ ಹಣದಿಂದ ಯೋಜನೆಯನ್ನು ಪಡೆಯಬಹುದು, 10 ವರ್ಷದ ಮಕ್ಕಳು ಕೂಡ ತಮ್ಮ ಪೋಷಕರೊಂದಿಗೆ ಪೋಸ್ಟ್ ಆಫೀಸ್ನಲ್ಲಿ MIS ಖಾತೆ ತೆರೆಯಬಹುದು.

ಬೇಕಾಗುವ ದಾಖಲಾತಿಗಳು:

Post Office MIS ನಲ್ಲಿ ಹೂಡಿಕೆ ಮಾಡಲು ನಿಮ್ಮ ಬಳಿ ಆಧಾರ್ ಕಾರ್ಡ್, ಪಾಸ್ಪೋರ್ಟ್ ಸೈಜ್ ಫೋಟೋ ಹಾಗೂ ಪಾನ್ ಕಾರ್ಡ್ (PAN Card) ಕಡ್ಡಾಯವಾಗಿರಬೇಕು. ಅದರಂತೆ 18 ವರ್ಷ ಕೆಳಪಟ್ಟ ಮಕ್ಕಳ ಹೆಸರಿನಲ್ಲಿ ಈ ಯೋಜನೆ ಪಡೆಯಲು ಪೋಷಕರ ದಾಖಲಾತಿಗಳೊಂದಿಗೆ ಮಗುವಿನ ಆಧಾರ್ ಕಾರ್ಡ್, ಜನನ ಪ್ರಮಾಣ ಪತ್ರ (Birth certificate) ಬೇಕಾಗುತ್ತದೆ.

60 ಸಾವಿರ ಹೂಡಿಕೆ ಮಾಡಿದ್ರೆ 22 ಸಾವಿರ ಲಾಭ!

 

Image Source: DNA India

 

ಪೋಸ್ಟ್ ಆಫೀಸ್ನಲ್ಲಿ (Post Office) ಐದು ವರ್ಷದ ಮಾಸಿಕ ಆದಾಯ ಯೋಜನೆಯನ್ನು ಖರೀದಿಸಿ 60,000 ಹಣವನ್ನು ಹೂಡಿಕೆ ಮಾಡಿದರೆ ಮೆಚುರಿಟಿ ಪಿರಿಯಡ್ (Maturity Period) ನಲ್ಲಿ ನಿಮ್ಮ ಹಣಕ್ಕೆ 7.4% ಬಡ್ಡಿ ದರದ ಮೇಲೆ ಬರೋಬ್ಬರಿ 22,200 ಹಣವನ್ನು ನೀಡಲಾಗುತ್ತದೆ. ಅಂದರೆ ಪ್ರತಿ ತಿಂಗಳು ನಿಮ್ಮ ಹೂಡಿಕೆಗೆ 370 ರೂ ಆದಾಯವನ್ನು ನೀಡುವರು ಇದರಿಂದ ಹಣವನ್ನು ಹಿಂಪಡೆಯುವಾಗ ನಿಮ್ಮ ಮೊತ್ತ ₹82,200 (60,000 ಹೂಡಿಕೆ+22,200 ಬಡ್ಡಿ)ಗಳಾಗಿರುತ್ತದೆ.

advertisement

Leave A Reply

Your email address will not be published.