Karnataka Times
Trending Stories, Viral News, Gossips & Everything in Kannada

Banana Plantation: ಕಡಿಮೆ ಜಾಗದಲ್ಲಿ ಬಾಳೆ ಸಸಿ ನೆಟ್ಟು ಆದಾಯ ಗಳಿಸಲು ಈ ಕ್ರಮ ಅನುಸರಿಸಿ

advertisement

ಬಾಳೆ ಹಣ್ಣು (Banana) ತಿನ್ನಲು ತುಂಬಾ ರುಚಿಯಾಗಿ ಇರುತ್ತದೆ. ಇದನ್ನು ಜೀರ್ಣಕ್ರಿಯೆ ಉತ್ತಮವಾಗಲಿ ಎಂಬ ಕಾರಣಕ್ಕೆ ಸೇವಿಸುವ ವರ್ಗ ಒಂದು ಕಡೆಯಾದರೆ ಧಾರ್ಮಿಕ ಪೂಜಾ ಕಾರ್ಯಕ್ರಮಕ್ಕೆ ಬಳಸುವವರು ಇದ್ದಾರೆ. ಬಾಳೆ ಕೃಷಿ ಮಾಡಿ ಕೂಡ ಜನರು ಆದಾಯ ಪಡೆಯಬಹುದು. ಉದ್ಯೋಗದಲ್ಲಿದ್ದುಕೊಂಡು ಇನ್ನೊಂದು ಉಪಕಸುಬು ಅರಸುವವರಿಗೆ ನಾವು ಇಂದು ನೀಡುವ ಮಾಹಿತಿ ದೊಡ್ಡ ಮಟ್ಟದಲ್ಲಿ ಸಹಕಾರಿ ಆಗುತ್ತದೆ ಎನ್ನಬಹುದು.

ಯಾವುದೊ ಕಂಪೆನಿ ಕೆಲಸದಲ್ಲಿ ಇರುವ ಉದ್ಯೋಗಿಗಳಿಗೆ ಆದಾಯ ಸಾಕಾಗದು ಇದರ ಜೊತೆಗೆ ಉಪವೃತ್ತಿ ಒಂದನ್ನು ಮಾಡುವೆ ಎನ್ನುವವರು ಆನ್ಲೈನ್ ಕೆಲಸ ಹುಡುಕಾಟ ನಡೆಸುತ್ತಾರೆ. ಆನ್ಲೈನ್ ನಲ್ಲಿ ಸೂಕ್ತವಾದ ಕೆಲಸ ಸಿಗದೇ ಹೋದರೆ ಆಗ ಏನು ಮಾಡುವುದು ಎಂಬ ಚಿಂತೆಯಲ್ಲಿ ಇರುತ್ತಾರೆ. ಇಂತವರು ಬಾಳೆ ಗಿಡ ನೆಟ್ಟು ಅದರಿಂದ ಆದಾಯ ಪಡೆಯಬಹುದು. ಐಡಿಯಾ ಚೆನ್ನಾಗಿದೆ ಆದರೆ ಅಷ್ಟು ಜಾಗ ಇಲ್ಲ ಅನ್ನುವವರು ಕೂಡ ಚಿಂತೆ ಮಾಡದೇ ಮನೆಯಲ್ಲಿಯೇ ಪಾಟ್ (ಕುಂಡದಲ್ಲಿ) ನಲ್ಲಿ ಬಾಳೆ ಸಸಿಹಾಕಿ ಹಣ್ಣಿನ ಇಳುವರಿ (Banana Yield) ಪಡೆಯಬಹುದು.

ಹೀಗೆ ಮಾಡಿ?

 

Image Source: YT-Business Ideas English

 

advertisement

ಬೋನ್ಸೈ ಗಿಡ ನೆಡುವಂತೆ ಮನೆಯಲ್ಲಿಯೇ ಕುಂಡದಲ್ಲಿ ಬಾಳೆ ಸಸಿಯನ್ನು ನೆಡಬಹುದು. ಅದಕ್ಕಾಗಿ ಮೊದಲು ನೀವು ಯಾವ ತಳಿಯನ್ನು ನೆಡಬೇಕು ಎಂಬುದು ನಿಶ್ಚಯಿಸಿರಿ. ಅದಕ್ಕೆ ಬಾಳೆ ಗಿಡ ಗೆಡ್ಡೆ ಯನ್ನು‌ ಮಾರುಕಟ್ಟೆಯಿಂದ ಖರೀದಿ ಮಾಡಿ ಬಳಿಕ ಎರಡು ದಿನ ನೆನೆಸಿ ಇಡಬೇಕು. ಬಳಿಕ ಕುಂಡದಲ್ಲಿ ಮಣ್ಣು ತುಂಬಿ ಬಾಳೆಯ ಗೆಡ್ಡೆ ಬೀಜ ಅದಕ್ಕೆ ಹಾಕಬೇಕು. ಕಾಲು ಇಂಚಿನಂತೆ ಆಳದಲ್ಲಿ ಉತ್ತಮ ಗೊಬ್ಬರವನ್ನು ಸೇರಿಸಬೇಕು. ಇದು ಬೆಳೆಯಲು ಸಮಯ ಹಿಡಿಯಲಿದ್ದು ಅದಕ್ಕಾಗಿ ನೀವು ಕಾಯ ಬೇಕಾಗಲಿದೆ.

ನೀರಿನ ಪೋಷಣೆ ಬೇಕು:

 

Image Source: Filtersafe

 

ಬಾಳೆ ಗಿಡಗಳ ಪೋಷಣೆ ಮಾಡಲು ಸೂರ್ಯನ ಬೆಳಕು ಹೇರಳವಾಗಿ ಇರಬೇಕು. ಸಸಿಯನ್ನು ಕುಂಡದಲ್ಲಿ ನೆಟ್ಟ ಬಳಿಕ ಆ ಜಾಗ ಸೂರ್ಯನ ಬೆಳಕು ಯಥೇಚ್ಛವಾಗಿ ಬೀಳುತ್ತದೆ ಅಥವಾ ಇಲ್ಲ ಎಂಬುದನ್ನು ಖಾತರಿ ಪಡಿಸಿಕೊಳ್ಳಿ. ಈ ಬಾಳೆ ಸಸಿಗೆ ಸಾರಜನಕ ಸಮೃದ್ಧವಾಗಿರುವ ಗೊಬ್ಬರವನ್ನೇ ನೀಡಬೇಕು. ಸಸ್ಯವು ದೊಡ್ಡದಾಗಿ ಬೆಳೆಯುತ್ತಿದ್ದರೆ ಅದನ್ನು ಮಡಿಕೆ ಯಲ್ಲಿ ಇಟ್ಟು ಬೆಳೆಸಬಹುದು. ನಿಮ್ಮ ಮನೆ ತಾರಸಿ ಅಥವಾ ಗಾರ್ಡನ್ ನಲ್ಲಿ ಈ ರೀತಿ ಕುಂಡದಲ್ಲಿ ಬಾಳೆ ಸಸಿ ನೆಡಬಹುದು.

ಹನಿ ನೀರಾವರಿ ಹೆಚ್ಚಾಗಿ ಬಳಸುತ್ತಾರೆ ಇದಕ್ಕಾಗಿ ಡ್ರಿಚಿಂಗ್ ಅನ್ನು ಅಳವಡಿಸಬಹುದು. ಇವೆಲ್ಲ ಮಾಡಿ ನಿಮ್ಮ ಗಾರ್ಡನ್ ನಲ್ಲಿ 50-70 ಗಿಡ ನೆಡಬಹುದು. ಇದರಿಂದ ತಿಂಗಳಿಗೆ 9,000-11,000 ದ ವರೆಗೆ ನೀವು ಆದಾಯ ಪಡೆಯಬಹುದಾಗಿದೆ. ಬಾಳೆ ಹಣ್ಣು, ಎಲೆ, ಹೂವು ಎಲ್ಲ ಕೂಡ ಮಾರಾಟ ಮಾಡಿದರೆ ಆದಾಯ ಸಿಗಲಿದೆ ಎನ್ನಬಹುದು.

advertisement

Leave A Reply

Your email address will not be published.