Karnataka Times
Trending Stories, Viral News, Gossips & Everything in Kannada

Banana Cultivation: ಈ ಸುಲಭ ವಿಧಾನವನ್ನು ಬಾಳೆ ಕೃಷಿಯಲ್ಲಿ ಬಳಸಿದರೆ 20 ಲಕ್ಷಕ್ಕೂ ಅಧಿಕ ಆದಾಯ ಗ್ಯಾರೆಂಟಿ

advertisement

ಬಾಳೆ ಹಣ್ಣು, ದಂಟು, ಹೂ, ಎಲೆ ಎಲ್ಲದಕ್ಕೂ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದ್ದೇ ಇದೆ. ಅದರಲ್ಲೂ ಹಬ್ಬ ಇತರ ಸಮಾರಂಭ ಸೇರಿದಂತೆ ಹೊಟೇಲ್ ನಲ್ಲಿ ನಿತ್ಯ ಊಟಕ್ಕೆ ಬಾಳೆ ಎಲೆ ಮತ್ತು ಹಣ್ಣಿಗೆ ಅಧಿಕ ಬೇಡಿಕೆ ಇದೆ. ಇಷ್ಟೆಲ್ಲ ಅಗತ್ಯತೆ ಬಾಳೆ ಸಸಿಯಿಂದ ಇರಬೇಕಾದರೆ ಅದನ್ನೇ ನಾವು ಕೃಷಿಯಾಗಿ ಅವಲಂಬನೆ ಮಾಡಿದರೆ ಲಾಭ ನಮ್ಮ ನಿರೀಕ್ಷೆಗೂ ಮೀರಿ ಸಿಗಲಿದೆ. ಬಾಳೆ ಕೃಷಿ (Banana Cultivation) ಮಾಡುವಾಗ ಯಾವೆಲ್ಲ ಅಂಶ ಪರಿಗಣಿಸಬೇಕು, ಎಲ್ಲಿ ಬಾಳೆ ತಳಿ ಸೂಕ್ತ ಎಂಬ ಅನೇಕ ಅಂಶದ ಬಗ್ಗೆ ನಾವಿಂದು ನಿಮಗೆ ಮಾಹಿತಿ ನೀಡುತ್ತೇವೆ.

ತಳಿ ಮತ್ತು ಮಣ್ಣಿನ ಆಯ್ಕೆ:

 

Image Source: Scroll.in

 

ಯಾವುದೇ ಕೃಷಿ ಆಗಿದ್ದರೂ ಯಾವ ತಳಿ ಹಾಗೂ ಯಾವ ಮಣ್ಣಿನಲ್ಲಿ ಕೃಷಿ ಮಾಡುತ್ತೇವೆ ಎಂಬುದು ಮುಖ್ಯವಾಗಲಿದೆ. ನೀವು ಏಲಕ್ಕಿ ಬಾಳೆ ಬೆಳೆಯುವುದಾದರೆ ಹದ ಮಣ್ಣು ಅಗತ್ಯ. ಹೀಗೆ ಬೇರೆ ಬೇರೆ ಬಾಳೆ ತಳಿಗೆ ಬೇರೆ ತರನಾಗಿ ಮಣ್ಣಿನ ಪೋಷಣೆ ನೀಡಬೇಕು ಈ ನೆಲೆಯಲ್ಲಿ ನಿಮ್ಮ ಭೂಮಿಯ ಫಲವತ್ತತ್ತೆ ಮೊದಲು ಪರೀಕ್ಷೆಗೆ ಒಳಪಡಿಸಿ ಬಳಿಕ ಕೃಷಿ (Banana Cultivation) ವಿಧಾನ ಅನುಸರಿಸಿದರೆ ಅಧಿಕ ಇಳುವರಿ ಸಿಗಲಿದೆ. ಅದೇ ರೀತಿ ಬಾಳೆ ಸಸಿಯನ್ನು ಅಂತರದಲ್ಲಿ ನೆಟ್ಟಾಗಲೂ ಅಧಿಕ ಪ್ರಯೋಜನೆ ಸಿಗಲಿದೆ. 6 ಅಡಿ ಅಗಲ ಹಾಗೂ 4 ಅಡಿ ಗಿಡದಿಂದ ಗಿಡಕ್ಕೆ ಅಂತರ ಇದ್ದರೆ ಉತ್ತಮ.

ಲಾಭ ಎಷ್ಟು ಸಿಗುತ್ತೆ:

advertisement

ಬಾಳೆ ಕೃಷಿ (Banana Cultivation) ಬಹಳ ಲಾಭ ನೀಡುವ ಕೃಷಿಗಳಲ್ಲಿ ಒಂದು ಎನ್ನಬಹುದು. ಮೊದಲ ಬಾರಿಗೆ ಸಸಿ ನೆಡುವಾಗ ನಿಮಗೆ ಖರ್ಚು ಹಾಗೂ ನಿರ್ವಹಣಾ ಕೆಲಸ ಅಧಿಕವಾಗಲಿದೆ. ಒಂದು ಎಕರೆಯಲ್ಲಿ 3000 ದಷ್ಟು ಗಿಡನೆಟ್ಟರೆ ಅದರಲ್ಲಿ 300 ಗಿಡ ಯಾವುದೇ ಕಾರಣಕ್ಕೆ ಫಸಲು ಬಂದಿಲ್ಲ ಎಂದಾದರೂ ಉಳಿದ ಫಸಲು ನಿಮಗೆ ಲಾಭ ನೀಡಲಿದೆ. 3 ಲಕ್ಷ ಖರ್ಚು ಹಿಡಿಯಲಿದ್ದು ವರ್ಷಕ್ಕೆ 20ಲಕ್ಷ ಲಾಭ ಸಿಗಲಿದೆ. ಹಾಗಾಗಿ ಖರ್ಚು ಕಳೆದರೂ 17 ಲಕ್ಷ ರೂಪಾಯಿಯನ್ನು ಇದರಿಂದ ಲಾಭ ಪಡೆಯಬಹುದು. ಅಷ್ಟು ಮಾತ್ರವಲ್ಲದೆ ಎಲೆ, ಮೊಗ್ಗು ಇವುಗಳಿಂದ ಕೂಡ ಲಾಭ ಪಡೆಯಬಹುದು.

ಪೋಷಣೆ ಹೇಗೆ:

 

Image Source: Kisanvedika

 

  • ಬಾಳೆ ಸಸಿ ನೆಡುವಾಗ ಅದಕ್ಕೆ ಅಧಿಕ ಪೋಷಣೆ ಮಾಡಬೇಕು.
  • ಹನಿ ನೀರಾವರಿ ಹೆಚ್ಚಾಗಿ ಬಳಸುತ್ತಾರೆ ಇದಕ್ಕಾಗಿ ಡ್ರಿಚಿಂಗ್ ಅನ್ನು ಅಳವಡಿಸಬಹುದು.
  • ಕೊಟ್ಟಿಗೆ ಗೊಬ್ಬರಕ್ಕೆ ಕೆಲ ಅಗತ್ಯ ಪೋಷಕಾಂಶ ಬೆರಸಿ ಬುಡಕ್ಕೆ ಸಿಂಪಡಣೆ ಮಾಡುವುದು ಬಹಳ ಉತ್ತಮ.
  • ಬಾಳೆ ಎಲೆ ಬೇಡವಾಗಿದ್ದರೆ ಅದು ಬಾಡಿ ಹೋಗಿದ್ದರೆ ಬುಡಕ್ಕೆ ಹಾಕಿದರೂ ಸಹ ಗೊಬ್ಬರದಂತೆ ಪೋಷಣೆ ನೀಡಲಿದೆ.
  • ಬಾಳೆ ಸಸಿಗಳು ಇರುವ ಕಡೆ ಆಗಾಗ ಸ್ವಚ್ಛತೆ ಮಾಡುವುದು ಸಹ ಮುಖ್ಯ ಇಲ್ಲವಾದರೆ ಅಕ್ಕ ಪಕ್ಕದಲ್ಲಿ ಬೇರೆ ಗಿಡಗಳು ಸ್ವಾಧೀನ ಪಡೆದು ಇವುಗಳು ಬೇಗ ಇಳುವರಿ ಕಡಿಮೆ ಮಾಡುವ ಸಾಧ್ಯತೆ ಇದೆ.

ಸಮಗ್ರ ಕೃಷಿ ಮಾಡಬಹುದು:

ನೀವು 50-100 ಗಿಡ ನೆಟ್ಟರೆ ಲಾಭಕ್ಕಿಂತ ನಷ್ಟವೇ ಅಧಿಕ ಆಗಲಿದೆ ಅದಕ್ಕಾಗಿ 3-5ಎಕರೆ ಬಾಳೆ ಗಿಡ ನೆಡಬೇಕು. ಇದು ನಿಮಗೆ ಖರ್ಚಿನ ಹೊರೆ ಆಗಲಾರದು. ಯಾಕೆಂದರೆ ಅದರ ಪೋಷಣೆಗೆ ನೀವು ತರುವ ತಂತ್ರಜ್ಞಾನಗಳ ಅಳವಡಿಗೆ, ಜೈವಿಕ ಗೊಬ್ಬರ ವಿತರಣೆಯಲ್ಲಿ ಬಾರಿ ದೊಡ್ಡ ಮಟ್ಟದ ವ್ಯತ್ಯಾಸ ಇರಲಾರದು‌. ಇದರಲ್ಲಿ ಸಮಗ್ರ ಕೃಷಿ ಮಾಡಿ ಇತರ ಬೆಳೆ ಕೂಡ ಮಾಡಬಹುದು ಆದರೆ ಬಾಳೆ ಗಿಡ ಸೂಕ್ಷ್ಮವಾಗಿರುವ ಕಾರಣ ಬಾಗಿ ಬೆಂಡಾಗದಂತೆ ನೋಡಿಕೊಳ್ಳುವುದು ಸಹ ಮುಖ್ಯ.

advertisement

Leave A Reply

Your email address will not be published.