Karnataka Times
Trending Stories, Viral News, Gossips & Everything in Kannada

UPI Transactions: ದೇಶಾದ್ಯಂತ ಹಲವಾರು ವರ್ಷಗಳಿಂದ ಗೂಗಲ್ ಪೇ ಹಾಗು ಫೋನ್ ಪೇ ಬಳಸುತ್ತಿರುವವರಿಗೆ ಹೊಸ ಸೂಚನೆ!

advertisement

Change Your UPI PIN: ಭಾರತ ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಆನ್ಲೈನ್ ಪೇಮೆಂಟ್ ಮಾಡುವಂತಹ ಪ್ರಕ್ರಿಯೆ ಹೆಚ್ಚಾಗುತ್ತಿದೆ. UPI ಅಪ್ಲಿಕೇಶನ್ ಗಳಾಗಿರುವಂತಹ ಫೋನ್ ಪೇ ಗೂಗಲ್ ಪೇ(PhonePe and Google Pay)   ನಂತಹ ಅಪ್ಲಿಕೇಶನ್ಗಳ ಮೂಲಕ ಚಿಕ್ಕ ವ್ಯಾಪರಸ್ತರಿಂದ ಹಿಡಿದು ದೊಡ್ಡ ಉದ್ಯಮಗಳವರೆಗೂ ಕೂಡ ಪ್ರತಿಯೊಬ್ಬರು ಇದೇ ರೀತಿಯಲ್ಲಿ ಹಣವನ್ನ ಟ್ರಾನ್ಸ್ಫರ್ ಮಾಡುತ್ತಾರೆ. ಪ್ರತಿಯೊಂದು ಕಡೆಗಳಲ್ಲಿ ಕೂಡ ಇಂತಹ ಅಪ್ಲಿಕೇಶನ್ಗಳ ಬಳಕೆ ಹಣವನ್ನು ವರ್ಗಾವಣೆ ಮಾಡುವುದಕ್ಕೆ ಹೆಚ್ಚಾಗಿದೆ. ಪ್ರತಿಯೊಬ್ಬರು ಕೂಡ ಫೋನ್ ಪೇ ಗೂಗಲ್ ಪೇ ಗಳಂತಹ ಅಪ್ಲಿಕೇಶನ್ಗಳನ್ನು ಹಣವನ್ನು ವರ್ಗಾವಣೆ ಮಾಡುವುದಕ್ಕೆ ಬಳಸುತ್ತಿದ್ದಾರೆ.

ಆದರೆ ಯುಪಿಐ ಅಪ್ಲಿಕೇಶನ್ ಗಳನ್ನು ಬಳಸುವ ಸಂದರ್ಭದಲ್ಲಿ ಆನ್ಲೈನ್ ಫ್ರಾಡ್ ಗಳಿಂದ ನೀವು ನಿಮ್ಮನ್ನ ರಕ್ಷಿಸಿಕೊಳ್ಳಬೇಕಾಗಿರುತ್ತದೆ ಅನ್ನೋದನ್ನ ಕೂಡ ತಲೆಯಲ್ಲಿ ಇಟ್ಟುಕೊಳ್ಳಬೇಕಾಗುತ್ತೆ. ಒಂದು ಚಿಕ್ಕ ನಿರ್ಲಕ್ಷದಿಂದಾಗಿ ನಿಮ್ಮ ಇಡೀ ಬ್ಯಾಂಕ್ ಅಕೌಂಟ್ ಖಾಲಿಯಾಗಬಹುದಾದಂತಹ ಸಾಧ್ಯತೆ ಕೂಡ ಇರುತ್ತದೆ. UPI PIN ಬಳಕೆನ ನೀವು ಸ್ವಲ್ಪ ಹುಷಾರಾಗಿ ಮಾಡಬೇಕಾಗಿರುತ್ತದೆ. ಒಂದು ವೇಳೆ ನೀವು ಒಂದೇ ಪಿನ್ ಅನ್ನು ಸಾಕಷ್ಟು ದೀರ್ಘಕಾಲದವರಿಗೆ ಬಳಸುತ್ತಾ ಇದ್ರೆ ಅದರಿಂದಾಗಿ ನಿಮ್ಮ ಖಾತೆಯ ಹಣ ಕಳವಾಗುವಂತಹ ಸಾಧ್ಯತೆ ಕೂಡ ಇರುತ್ತದೆ ಹೀಗಾಗಿ ಆಗಾಗ ನಿಮ್ಮ ಪಿನ್ ನಂಬರ್ ಅನ್ನು ಬದಲಾಯಿಸುತ್ತಿರಬೇಕು ಎಂಬುದಾಗಿ ಹೇಳಲಾಗುತ್ತದೆ.

You can now transfer up to ₹5 lakh via UPI at hospitals
Image Source: Hindustan Times

advertisement

Gpay ಪಿನ್ ಅನ್ನು ಬದಲು ಮಾಡುವಂತಹ ವಿಧಾನ

* ಗೂಗಲ್ ಪೇ ಅನ್ನು ಓಪನ್ ಮಾಡಿ ನಿಮ್ಮ ಪ್ರೊಫೈಲ್ ಪಿಚ್ಚರ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ. ಇದಾದ ನಂತರ ನಿಮ್ಮ ಬ್ಯಾಂಕ್ ಅಕೌಂಟ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
* ಹೊಸ ಪೇಜ್ ಓಪನ್ ಆದ ಮೇಲೆ ಮೇಲೆ ಕಾಣಿಸುವಂತಹ ಮೂರು ಡಾಟ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ. ಅಲ್ಲಿ ನಿಮಗೆ ಚೇಂಜ್ ಯುಪಿಐ ಪಿನ್ ಎನ್ನುವಂತಹ ಆಪ್ಷನ್ ಕಾಣಿಸಿಕೊಳ್ಳುತ್ತದೆ.
* ಈಗ ಇರುವಂತಹ ಪಿನ್ ಅನ್ನು ಮೊದಲಿಗೆ ನಮೂದಿಸಿ. ನಂತರ ಹೊಸ ಪಿನ್ ಅನ್ನು ನಮೂದಿಸಿ ನಂತರ ಮತ್ತೊಮ್ಮೆ ಕನ್ಫರ್ಮೇಶನ್ ಮಾಡಿಕೊಳ್ಳಲು ಎರಡನೇ ಬಾರಿ ಕೂಡ ಹೊಸ ಪಿನ್ ಅನ್ನು ನಮೂದಿಸಬೇಕಾಗಿರುತ್ತದೆ.
* ಈ ಮೂಲಕ ನಿಮ್ಮ ಪಾಸ್ವರ್ಡ್ ಅನ್ನು ಬದಲು ಮಾಡಿದಂತಾಗುತ್ತದೆ.

ಫೋನ್ ಪೇ ಪಿನ್ ಬದಲು ಮಾಡುವ ವಿಧಾನ

* ಫೋನ್ ಪೇ ಅನ್ನು ಓಪನ್ ಮಾಡಿ ಪ್ರೊಫೈಲ್ ಪಿಕ್ಚರ್ ಮೇಲೆ ಕ್ಲಿಕ್ ಮಾಡಿದ ನಂತರ, Payment Method Section ನ ಬಲಭಾಗದಲ್ಲಿ ಸ್ಕ್ರೋಲ್ ಮಾಡಿ.
* ಅಲ್ಲಿ ನಿಮಗೆ ಪಿನ್ ರಿಸೆಟ್ ಮಾಡುವಂತಹ ಆಪ್ಷನ್ ಕಾಣಿಸುತ್ತದೆ ಹಾಗೂ ಬ್ಯಾಂಕ್ ಅಕೌಂಟ್ ಅಥವಾ ಡೆಬಿಟ್ ಕಾರ್ಡ್ ಡೀಟೇಲ್ಸ್ ತುಂಬಬೇಕಾಗುತ್ತದೆ.
* ಇದಾದ ನಂತರ ನಿಮ್ಮ ಮೊಬೈಲ್ ನಂಬರಿಗೆ ಓಟಿಪಿ ಬರುತ್ತದೆ ಅದನ್ನು ಸಬ್ಮಿಟ್ ಮಾಡಬೇಕಾಗಿರುತ್ತದೆ.
* ಇದಾದ ನಂತರ ಹೊಸ ಪಿನ್ ನಂಬರ್ ಅನ್ನು ನಾಲ್ಕರಿಂದ ಆರು ಸಂಖ್ಯೆಗಳ ನಡುವೆ ಆಯ್ಕೆ ಮಾಡಿ ಅದನ್ನು ಎರಡು ಬಾರಿ ಸಬ್ಮಿಟ್ ಮಾಡಿದ ನಂತರ ನೀವು ನಿಮ್ಮ ಹೊಸ ಪಿನ್ ಅನ್ನು ಫೋನ್ ಪೇ ನಲ್ಲಿ ಬದಲಾಯಿಸಿದಂತಾಗುತ್ತದೆ.

advertisement

Leave A Reply

Your email address will not be published.