Karnataka Times
Trending Stories, Viral News, Gossips & Everything in Kannada

KSRTC: ಶಕ್ತಿ ಯೋಜನೆ ಮೂಲಕ ಉಚಿತ ಬಸ್ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಬೆಳ್ಳಂಬೆಳಿಗ್ಗೆ ಗುಡ್ ನ್ಯೂಸ್

advertisement

Karnataka State Road Transport Corporation: ಈಗಾಗಲೇ ರಾಜ್ಯ ಸರ್ಕಾರ ಕೆಎಸ್ಆರ್ಟಿಸಿ(KSRTC)  ನಿಗಮದ ಮೂಲಕ ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ವ್ಯವಸ್ಥೆಯನ್ನು(Karnataka Shakti Scheme) ಸರ್ಕಾರ ಮಾಡಿಕೊಟ್ಟಿರೋದು ತಿಳಿದಿದೆ. ಅದೇ ರೀತಿಯಲ್ಲಿ ಈಗ ವಾಯು ಕರ್ನಾಟಕ ಸಾರಿಗೆ ನಿಗಮ ಆದಾಯವನ್ನು ಹೆಚ್ಚಿಸುವುದಕ್ಕಾಗಿ ಇನ್ನಷ್ಟು ಹೆಚ್ಚಿನ ಟ್ರಿಪ್ ಪ್ಯಾಕೇಜ್ ಗಳನ್ನು ಜಾರಿಗೆ ತಂದಿದೆ. ನಾನ್ ಸ್ಲಿಪ್ಪರ್ ಸೇವೆಯನ್ನು ಕೂಡ ಪ್ರಾಣಿಕರಿಗಾಗಿ ಒದಗಿಸುತ್ತಿದೆ. ಹಾಗಿದ್ರೆ ಬನ್ನಿ ಹೊಸದಾಗಿ ಪರಿಚಯಿಸಿರುವಂತಹ ಟ್ರಿಪ್ ಪ್ಯಾಕೇಜ್ ಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳೋಣ.

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಪರಿಚಯಿಸಿರುವ ಹೊಸ ಟ್ರಿಪ್ ಪ್ಯಾಕೇಜ್ ಗಳ ವಿವರ

ಹುಬ್ಬಳ್ಳಿಯಿಂದ ಶಿರಡಿಗೆ

ಪಲ್ಲಕ್ಕಿ ಹೆಸರಿನಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಹುಬ್ಬಳ್ಳಿಯಿಂದ ಶಿರಡಿಗೆ ಬಸ್ ವ್ಯವಸ್ಥೆಯನ್ನು ಪ್ರಾರಂಭಿಸಿದೆ. ರಾತ್ರಿ 8ಗಂಟೆಗೆ ಹುಬ್ಬಳ್ಳಿಯಿಂದ ಹೊರಡುವಂತಹ ಈ ಬಸ್ ಬೆಳಗ್ಗೆ 8:45 ಕ್ಕೆ ಶಿರಡಿಗೆ ತಲುಪಲಿದ್ದು ಇದು ನಾನ್ ಎಸಿ ಸ್ಲೀಪರ್ ಬಸ್ ಆಗಿದೆ. ಇದಾದ ನಂತರ ರಾತ್ರಿ ಎಂಟು ಗಂಟೆಯಿಂದ ಶಿರಡಿ ಇಂದ ಹೊರಟು ಬೆಳಗ್ಗೆ 8:45 ಕ್ಕೆ ಹುಬ್ಬಳ್ಳಿಯನ್ನು ತಲುಪಲಿದೆ. ಧಾರವಾಡ ಬೆಳಗಾವಿ ಪುಣೆ ಹಾಗೂ ಅಹಮದ್ನಗರ ರೂಟ್ನಲ್ಲಿ ಹೋಗುವಂತಹ ಈ ಬಸ್ ನಲ್ಲಿ ಪ್ರಯಾಣಿಸುವುದಕ್ಕೆ ಒಬ್ಬರಿಗೆ 1,300 ಟಿಕೆಟ್ ಬೆಲೆಯಾಗಿದೆ.

Ksrtc ugadi buses
Image Source: Business Standard

ಬೆಳಗಾವಿಯಿಂದ ಲಾತೂರು

ರಾತ್ರಿ ಬೆಳಗಾವಿಯಿಂದ ಎಂಟು ಗಂಟೆಗೆ ಬಸ್ ಹೊರಟ್ರೆ ಬೆಳಿಗ್ಗೆ ಲಾತೂರ್ ತಲುಪೋದಕ್ಕೆ 6.20 ಸಮಯ ಆಗುತ್ತದೆ. ನಂತರ ಅಲ್ಲಿಂದ ರಾತ್ರಿ 7.30 ಕ್ಕೆ ಹೊರಟು ಬೆಳಗ್ಗೆ 5:30ಕ್ಕೆ ಮತ್ತೆ ಬೆಳಗಾವಿ ತಲುಪುತ್ತದೆ. ಈ ನಡುವೆ ಲೋಕಾಪುರ ಜಮಖಂಡಿ ವಿಜಯಪುರ ಸೋಲಾಪುರ ತುಳಜಾಪುರ ರೂಟ್ನಲ್ಲಿ ಈ ಬಸ್ ಹೋಗುತ್ತದ್ ಹಾಗೂ ಈ ಬಸ್ಸಿನಲ್ಲಿ ಪ್ರಯಾಣಿಸೋದಕ್ಕೆ ಪ್ರತಿಯೊಬ್ಬರಿಗೆ ಟಿಕೆಟ್ ಬೆಲೆ 924 ಆಗಿದೆ.

advertisement

ರಾಮದುರ್ಗದಿಂದ ಬೆಂಗಳೂರು

ನಾನ್ ಎಸಿ ಸ್ಲಿಪರ್ ಬಸ್ ಅನ್ನು ಇದಕ್ಕಾಗಿ ಸಿದ್ಧಪಡಿಸಲಾಗಿದ್ದು ರಾಮದುರ್ಗದಿಂದ ಇದು ರಾತ್ರಿ ಎಂಟು ಗಂಟೆಗೆ ಹೊರಟು ಬೆಳಿಗ್ಗೆ ಬೆಂಗಳೂರಿಗೆ 7.10ಕ್ಕೆ ತಲುಪಲಿದೆ. ಅದೇ ರಾತ್ರಿ 9:15ಕ್ಕೆ ಬೆಂಗಳೂರಿಂದ ಹೊರಟು ಬೆಳಿಗ್ಗೆ ಬೆಳಗಾವಿಗೆ ಸೇರಲಿದ್ದು ಇಲ್ಲಿ ಟಿಕೆಟ್ ಬೆಲೆ ರೂ.1070 ಆಗಿದೆ. ಈ ಬಸ್ ಹೋಗುವಾಗ ನರಗುಂದ, ನವಲಗುಂದ, ಹುಬ್ಬಳ್ಳಿ ಹಾವೇರಿ ರಾಣೇಬೆನ್ನೂರು ಮಾರ್ಗದಲ್ಲಿ ಚಲಿಸಲಿದೆ.

Image Source: Vijay Karnataka

ಮುರುಡೇಶ್ವರದಿಂದ ಬೆಂಗಳೂರು

ವಾಯುವ್ಯ ಕರ್ನಾಟಕ ಸಾರಿಗೆಯ ಬಸ್ ಮುರುಡೇಶ್ವರದಿಂದ ರಾತ್ರಿ 9:15ಕ್ಕೆ ಹೊರಡಲಿದೆ ಹಾಗೂ ಬೆಂಗಳೂರಿಗೆ 6.30ಕ್ಕೆ ತಲುಪಲಿದೆ. ರಾತ್ರಿ 9:15 ಕ್ಕೆ ಹೊರಟು ಬೆಳಗ್ಗೆ ಆರು ಮೂವತ್ತಕ್ಕೆ ಮುರುಡೇಶ್ವರವನ್ನ ತಲುಪಲಿದೆ. ಈ ನಡುವೆ ಬೈಂದೂರು ಭಟ್ಕಳ ಕೊಲ್ಲೂರು ಹಾಗೂ ನಗರ ಮತ್ತು ಹೊಸನಗರದ ಮಾರ್ಗವಾಗಿ ಸಾಗಲಿದೆ. ಈ ಬಸ್ಸಿನಲ್ಲಿ ಹೋಗುವುದಕ್ಕೆ 1018 ರೂಪಾಯಿಗಳ ಟಿಕೆಟ್ ಅನ್ನು ಖರೀದಿ ಮಾಡಬೇಕಾಗಿರುತ್ತದೆ.

ಬೀಳಗಿಯಿಂದ ಬೆಂಗಳೂರು

ರಾತ್ರಿ 8 ಗಂಟೆಗೆ ಬೀಳಗಿಯಿಂದ ಬಸ್ ಹೊರಟು ಬೆಂಗಳೂರಿಗೆ ಆರು ಗಂಟೆಗೆ ಬೆಳಗೆ ತಲುಪಲಿದೆ. ರಾತ್ರಿ 10:00 ಯಿಂದ ಬೆಂಗಳೂರಿನಿಂದ ಹೊರಟು ಬೆಳಿಗ್ಗೆ 7:45 ಕ್ಕೆ ಬೀಳಗಿಗೆ ತಲುಪಲಿದೆ. 897ಗಳಲ್ಲಿ ಈ ಪ್ರಯಾಣವನ್ನು ಪೂರೈಸಬಹುದಾಗಿದ್ದು ಈ ಮೇಲೆ ಹೇಳಿರುವಂತಹ ಪ್ಯಾಕೇಜ್ ಗಳನ್ನು ಈಗ ಹೊಸದಾಗಿ ಜಾರಿಗೆ ತಂದಿರೋದು.

advertisement

Leave A Reply

Your email address will not be published.