Karnataka Times
Trending Stories, Viral News, Gossips & Everything in Kannada

Areca Farming: ಅಡಿಕೆ ಮರದಲ್ಲಿ ಕಾಳುಮೆಣಸಿನ ಬಳ್ಳಿ ಹಾಕಿದ್ದವರು ಕೂಡಲೇ ಗಮನಿಸಿ! ಈ ತಪ್ಪು ಮಾಡಿದ್ರೆ ಎರಡೂ ಬೆಳೆ ನಾಶ

advertisement

Method For Intercropping Pepper With Areca:  ಇತ್ತೀಚಿನ ದಿನಗಳಲ್ಲಿ ಭಾರತದ ಮಾರುಕಟ್ಟೆಯಲ್ಲಿ ಅಡಿಕೆ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಡಿಕೆ ಕೃಷಿಯ ಲಾಭ ಕೂಡ ರೈತರಿಗೆ ಒಳ್ಳೆಯ ರೀತಿಯಲ್ಲಿ ದೊರಕುತ್ತಿದೆ. ಅಡಿಕೆಗೆ ಉತ್ತಮ ಬೆಲೆ ಇರುವ ಕಾರಣದಿಂದಾಗಿ ಪ್ರತಿಯೊಬ್ಬರು ಕೂಡ ಅಡಿಕೆ ಕೃಷಿಯನ್ನು ನಂಬಿಕೊಂಡಿದ್ದಾರೆ. ಇನ್ನೂ ಇದರ ಜೊತೆಗೆ ಬಾಳೆ ಹಾಗೂ ಕಾಡು ಮೆಣಸಿನ ಕೃಷಿಯನ್ನು ಕೂಡ ರೈತರು ಪ್ರಾರಂಭ ಮಾಡಿದ್ದಾರೆ.

ವಿಶೇಷವಾಗಿ ಕಾಳುಮೆಣಸಿನ ಕೃಷಿಯನ್ನು ಇತ್ತೀಚಿನ ದಿನಗಳಲ್ಲಿ ಅಡಿಕೆಯ ಜೊತೆಗೆ ರೈತರ ಹೆಚ್ಚಾಗಿ ಪ್ರಾರಂಭ ಮಾಡಿದ್ದಾರೆ ಯಾಕೆಂದರೆ ಮಾರುಕಟ್ಟೆಯಲ್ಲಿ ಅಡಿಕೆಯ ರೀತಿಯಲ್ಲೇ ಕಾಳು ಮೆಣಸಿನ ಬೇಡಿಕೆ ಹಾಗೂ ಬೆಲೆ ಕೂಡ ಹೆಚ್ಚಾಗಿದೆ. ಆದರೆ ಎರಡನ್ನು ಒಟ್ಟಾಗಿಯೇ ಬೆಳೆಸುವ ಸಂದರ್ಭದಲ್ಲಿ ಕೆಲವೊಂದು ಪ್ರಮುಖ ವಿಚಾರಗಳನ್ನು ನೀವು ಗಮನಿಸದೇ ಹೋದಲ್ಲಿ ಎರಡು ಬೆಳೆ ಹಾಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಹೀಗಾಗಿ ಯಾವೆಲ್ಲ ಅಂಶಗಳನ್ನು ನೀವು ತಿಳಿದುಕೊಂಡಿರಬೇಕು ಅನ್ನೋದನ್ನ ತಿಳಿಯೋಣ ಬನ್ನಿ.

Image Source: Agri Farming

ಅಡಿಕೆ ಹಾಗೂ ಕಾಳುಮೆಣಸು ಒಟ್ಟಾಗಿ ಬೆಳೆಯುವ ಸಂದರ್ಭದಲ್ಲಿ ಈ ವಿಚಾರವನ್ನು ಪ್ರಮುಖವಾಗಿ ಗಮನಿಸಿ

advertisement

* ಸಾಮಾನ್ಯವಾಗಿ ಅಡಿಕೆಗೆ ಒಳ ತಾಕಬಾರದು ಎನ್ನುವ ಕಾರಣಕ್ಕಾಗಿ ರಾಸಾಯನಿಕವನ್ನು ಸಿಂಪಡಣೆ ಮಾಡುತ್ತಾರೆ, ಆ ಸಂದರ್ಭದಲ್ಲಿ ಕಾಳು ಮೆಣಸಿನ ಬಳ್ಳಿಗಳು ಹರಡದೆ ಇರುವಂತಹ ಸಾಧ್ಯತೆ ಇರುತ್ತದೆ. ರಾಸಾಯನಿಕ ಸಿಂಪಡಣೆ ಎನ್ನುವುದು ಈ ವಿಚಾರದಲ್ಲಿ ನಕಾರಾತ್ಮಕವಾಗಿ ಕಾಣಿಸಿಕೊಳ್ಳುತ್ತದೆ.
* ರಾಸಾಯನಿಕ ಬಳಸುವುದಕ್ಕಿಂತ ಹೆಚ್ಚಾಗಿ Dr Soil ಹಾಗೂ ಸಾವಯುವ ಗೊಬ್ಬರಗಳನ್ನು ಬಳಸಿಕೊಳ್ಳುವುದು ಉತ್ತಮ ಎಂಬುದಾಗಿ ಹೇಳುತ್ತಾರೆ.
* ಅಡಿಕೆ ತೋಟಗಳಿಗೆ ಹೆಚ್ಚಿನ ನೀರನ್ನು ಬಳಸಬಾರದು ಗಿಡವನದ ರೀತಿಯಲ್ಲಿ ನೀರನ್ನು ಸಿಂಪಡಣೆ ಮಾಡಿದರೆ ಸಾಕು. ಕರಿ ಮೆಣಸಿನ ನಾಟಿ ಮಾಡುವ ಸಂದರ್ಭದಲ್ಲಿ ಸಾವಯುವ ಗೊಬ್ಬರ ಒಳ್ಳೆಯ ಪರಿಣಾಮವನ್ನು ಬೀರುತ್ತದೆ.

ಇಳುವರಿ

ಅಡಿಕೆ ತೋಟದಲ್ಲಿ ಕಾಳು ಮೆಣಸಿನ ಗಿಡವನ್ನು ನೆಟ್ಟರೆ ಎರಡರಿಂದ ಮೂರು ಕೆಜಿ ಇಳುವರಿ ಆರಂಭದಲ್ಲಿ ಸಿಗಬಹುದು ಆದರೆ ಕ್ರಮೇಣ ಸಮಯ ಕಳೆದಂತೆ ಈ ಇಳುವರಿ ಎನ್ನುವುದು ಇನ್ನಷ್ಟು ಹೆಚ್ಚಾಗುತ್ತದೆ. ಹೆಚ್ಚಿನ ರಾಸಾಯನಿಕ ವಸ್ತುಗಳನ್ನು ಬಳಸಿ ಕೊಳ್ಳಬಾರದು ಎಂಬುದಾಗಿ ಕೃಷಿ ತಜ್ಞರು ಸಲಹೆ ನೀಡುತ್ತಾರೆ ಹೀಗಾಗಿ ಈ ವಿಚಾರದ ಬಗ್ಗೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ಗಮನವಹಿಸಬೇಕಾಗುತ್ತದೆ.

Image Source: PepperHub

ರಾಸಾಯನಿಕ ಮುಕ್ತ ಜೈವಿಕ ಕೃಷಿಯನ್ನು ಅಡಿಕೆ ಇಡುವವರಿಗೆ ನೀವು ಬಳಸಿಕೊಂಡರೆ ಇದರಿಂದ ಕೇವಲ ಅಡಿಕೆ ಕೃಷಿ ಮಾತ್ರವಲ್ಲದೆ ಕಾಳು ಮೆಣಸಿನ ಕೃಷಿ ಕೂಡ ಉತ್ತಮವಾಗಿ ಬೆಳೆಯುವ ಮೂಲಕ ಎರಡು ಬೆಳೆಯಿಂದಲೂ ನೀವು ಉತ್ತಮ ಆದಾಯವನ್ನು ಸಂಪಾದನೆ ಮಾಡಬಹುದಾಗಿದೆ ಹಾಗೂ ಹೆಚ್ಚಿನ ಇಳುವರಿಯನ್ನು ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ಇನ್ಮೇಲೆ ನೀವು ಕೂಡ ಈ ಬೆಳೆಯನ್ನು ನಿಮ್ಮ ತೋಟದಲ್ಲಿ ಬೆಳೆಯುವಂತಹ ಪ್ರಯತ್ನ ಮಾಡಿದ್ರೆ ಈ ಮೇಲೆ ಹೇಳಿರುವಂತಹ ಕ್ರಮಗಳನ್ನು ಅನುಸರಿಸುವ ಮೂಲಕ ಉತ್ತಮ ಇಳುವರಿಯನ್ನು ಪಡೆದುಕೊಳ್ಳಿ.

advertisement

Leave A Reply

Your email address will not be published.