Karnataka Times
Trending Stories, Viral News, Gossips & Everything in Kannada

Maruti Swift: ಮಾರುತಿ Swift ಕಾರನ್ನು ಖರೀದಿಸಲು ಬಯಸುವವರಿಗೆ ಸಿಹಿಸುದ್ದಿ ! ಐತಿಹಾಸಿಕ ತಿರುವು

advertisement

ಸದ್ಯಕ್ಕೆ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ Maruti Swift ಕಾರಿನ ನಾಲ್ಕನೇ ಜನರೇಶನ್ ಅಂದರೆ ಹೊಸ ವರ್ಷ ಕಾರಿನ ಲಾಂಚ್ ಪ್ರಕ್ರಿಯೆ ಇನ್ನೇನು ಕೆಲವೇ ದಿನಗಳಲ್ಲಿ ನಡೆಯಲಿದೆ. ಇನ್ನು ಇದರ ಕ್ರಾಸ್ ಟೆಸ್ಟಿಂಗ್ ಅನ್ನು ಜಪಾನ್ NCP ಮಾಡಿದೆ. ನಾಲ್ಕು ಸೇಫ್ಟಿ ರೇಟಿಂಗ್ ಅಂಕಗಳನ್ನು ಪಡೆದುಕೊಂಡಿರುವಂತಹ ಈ ಕಾರು ಕೊಲಿಷನ್ ಸೇಫ್ಟಿ ಪರ್ಫಾರ್ಮೆನ್ಸ್ ನಲ್ಲಿ 81 ಪ್ರತಿಶತ ಅಂಕಗಳನ್ನು ಪಡೆದುಕೊಂಡಿದೆ.

ಅತ್ಯಂತ ಸುರಕ್ಷಿತ ಕಾರು Maruti Swift:

ಕ್ರಾಶ್ ಟೆಸ್ಟ್ ರಿಪೋರ್ಟ್ ಬಂದ ನಂತರ ಈ ಕಾರು ಅತ್ಯಂತ ಸುರಕ್ಷಿತ ಕಾರುಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಪರಿಗಣಿಸಬಹುದಾಗಿದೆ. ಆಕ್ಸಿಡೆಂಟ್ ಎಮರ್ಜೆನ್ಸಿ ಕಾಲ್ ವಿಚಾರದಲ್ಲಿ ಕೂಡ ಈ ಕಾರು 99 ರಿಂದ 100% ಅಂಕಗಳನ್ನು ಪಡೆದುಕೊಂಡಿದೆ. ಒಟ್ಟಾರೆಯಾಗಿ ಈ ಎಲ್ಲಾ ಟೆಸ್ಟಿಂಗ್ ನಲ್ಲಿ Maruti Swift ಕಾರಿಗೆ 197ರಲ್ಲಿ 177.80 ಅಂಕಗಳು ಸಿಕ್ಕಿವೆ. ಈ ಮೂಲಕವೇ ಈ ಕಾರಿನ ಪರ್ಫಾರ್ಮೆನ್ಸ್ ಜೊತೆಗೆ ಸೇಫ್ಟಿ ಕ್ರಮಗಳು ಕೂಡ ಸಾಕಷ್ಟು ಸಮಾಧಾನಕರವಾಗಿದೆ ಎಂಬುದಾಗಿ ಹೇಳಬಹುದಾಗಿದೆ.

 

Image Source: Moneycontrol

 

ADAS ಸೂಟ್ ಜೊತೆಗೆ ಹೊಸ Maruti Swift ಕಾರ್ ಅನ್ನು ಪ್ರಸ್ತುತಪಡಿಸಲಾಗುತ್ತಿದೆ. ಅಡಾಪ್ಟಿವ್ ಹೈ ಭೀಮ್ ಅಸಿಸ್ಟ್, ಕ್ರೂಸ್ ಕಂಟ್ರೋಲ್, ಲೇನ್ ಕೀಪ್ ಸಪೋರ್ಟಿಂಗ್, ಡ್ರೈವರ್ ಮಾನಿಟರಿಂಗ್ ಸಿಸ್ಟಮ್, ಟ್ರಾಫಿಕ್ ಅಲರ್ಟ್ ಸೇರಿದಂತೆ 360 ಡಿಗ್ರಿ ಕ್ಯಾಮೆರಾವನ್ನು ಕೂಡ ಈ ಕಾರಿನಲ್ಲಿ ಅಳವಡಿಸಿರುವುದನ್ನು ನೀವು ಕಾಣಬಹುದಾಗಿದೆ.

advertisement

ಈ ಎಲ್ಲಾ ವಿಶೇಷತೆಗಳು ಕೂಡ ಈ ಕಾರನ್ನು ಕೇವಲ ಸುರಕ್ಷತೆಯ ವಿಚಾರದಲ್ಲಿ ಮಾತ್ರವಲ್ಲದೆ ಬೇರೆ ಅಡ್ವಾನ್ಸ್ ಟೆಕ್ನಾಲಜಿಯ ವಿಚಾರದಲ್ಲಿ ಕೂಡ ಗ್ರಾಹಕರಿಗೆ ಬೇಕಾಗಿರುವಂತಹ ಸೌಲಭ್ಯಗಳನ್ನು ನೀಡುತ್ತಿದೆ ಎಂಬುದಾಗಿ ತಿಳಿಯುವಂತೆ ಮಾಡಿದೆ.

Maruti Swift ಹೊಸ ಜನರೇಷನ್ ಕಾರಿನಲ್ಲಿ ಇರಲಿದೆ ಬದಲಾವಣೆ:

 

Image Source: CarWale

 

ಹೊಸ Maruti Swift ಕಾರ್ ಅನ್ನು ಆಟೋಮೊಬೈಲ್ ಇಂಡಸ್ಟ್ರಿಯ ಮೂಲಗಳ ಪ್ರಕಾರ ಮೇ 2ನೇ ವಾರದಲ್ಲಿ ಲಾಂಚ್ ಮಾಡಬಹುದಾದ ಸಾಧ್ಯತೆ ಇದೆ ಎಂಬುದಾಗಿ ತಿಳಿದುಬಂದಿದೆ. ಭಾರತದಲ್ಲಿ ಲಾಂಚ್ ಆಗುವ ಸಂದರ್ಭದಲ್ಲಿ ಈ ಸ್ವಿಫ್ಟ್ ಕಾರ್ ಸಾಕಷ್ಟು ಬದಲಾವಣೆಗಳ ಜೊತೆಗೆ ಭಾರತದ ರೋಡಿಗೆ ಇಡಿಯಲಿದೆ ಎಂಬುದಾಗಿ ತಿಳಿದು ಬಂದಿದೆ.

ಸ್ಟ್ರಾಂಗ್ ಹೈಬ್ರಿಡ್ ಇಂಜಿನ್ ಆಪ್ಷನ್ ಕೂಡ ನೀಡುವುದು ಅನುಮಾನವೇ ಸರಿ ಎಂಬುದಾಗಿ ತಿಳಿಯುತ್ತದೆ. ಇನ್ನು ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಗಳನ್ನು ನಾವು ಲಾಂಚ್ ಆದ ನಂತರವಷ್ಟೇ ತಿಳಿದುಕೊಳ್ಳಬೇಕಾಗಿದೆ. ಆದರೆ ಬೆಲೆಯ ಬಗ್ಗೆ ಹೇಳುವುದಾದರೆ ಇದು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾದರೆ ಏಳರಿಂದ 11 ಲಕ್ಷ ರೂಪಾಯಿಗಳ ನಡುವಿನ ಎಕ್ಸ್ ಶೋರೂಮ್ ಬೆಲೆಯಲ್ಲಿ ಇದು ಮಾರಾಟಕ್ಕೆ ಬರಬಹುದಾಗಿದೆ.

advertisement

Leave A Reply

Your email address will not be published.