Karnataka Times
Trending Stories, Viral News, Gossips & Everything in Kannada

Loan: ಮನೆ, ವಾಹನ, ಶಿಕ್ಷಣ ಇಂತಹ ಉದ್ದೇಶಕ್ಕೆ ಸಾಲ ಮಾಡಿದ್ದ ಮೊತ್ತ ಖಾಲಿಯಾದರೆ ಟೆನ್ಷನ್ ಬೇಡ! ಭರ್ಜರಿ ಸಿಹಿಸುದ್ದಿ

advertisement

ಮನೆ ಕಟ್ಟುವುದು ಅನೇಕ ಜನರ ಕನಸ್ಸು ಎಂದು ಹೇಳಬಹುದು. ಈ ಕನಸ್ಸು ನನಸಾಗಿಸಲು ಹಣಕಾಸಿನದ್ದೇ ಒಂದು ದೊಡ್ಡ ಸಮಸ್ಯೆ ಆಗಿರುತ್ತದೆ. ಹಾಗಾಗಿ ಆರ್ಥಿಕ ಸಂಕಷ್ಟ ಪರಿಹರಣೆಗಾಗಿ ಲೋನ್ ಮಾಡಿದ್ದವರು ಬಳಿಕ ಮನೆ ಪೂರ್ತಿ ಆಗುವ ಮೊದಲೇ ಹಣ ಎಲ್ಲ ಖರ್ಚಾಗಿ ಅತ್ತ ಪೂರ್ತಿ ಮನೆಕಟ್ಟಲು ಆಗದೆ ಇತ್ತ ಲೋನ್ (Loan) ಮೊತ್ತ ಕೂಡ ಖಾಲಿಯಾಗಿ ಮುಂದೇನು ಎಂಬ ಚಿಂತೆಯಲ್ಲಿ ಇದ್ದವರಿಗೆ ನಾವಿಂದು ನೀಡುವ ಮಾಹಿತಿ ಬಹಳ ಸಹಕಾರಿ ಆಗಲಿದೆ ಎಂದು ಹೇಳಬಹುದು.

ಮನೆಗಾಗಿ ಲೋನ್ ಮಾಡಿದ್ದರೆ ಆ ಸಾಲದ ಮೊತ್ತ ನಿಮ್ಮ ಅರ್ಧ ಮನೆಕಟ್ಟುವ ವೇಳೆಗಾಗಲೇ ಖಾಲಿ ಆಗಿ ಹೋಗಲಿದೆ. ಅಂತಹ ಸಂಕಷ್ಟ ಸಮಯದಲ್ಲಿ ನೆರವಾಗಲಿರುವುದೇ ಟಾಪ್ ಅಪ್ ಸಾಲ ಎನ್ನಬಹುದು. ಈ ಟಾಪ್ ಅಪ್ ಸಾಲ ಯಾಕಾಗಿ ಪಡೆಯುತ್ತಾರೆ?, ಇದು ನಿಮಗೆ ಹೇಗೆ ನೆರವಾಗಲಿದೆ ಇದನ್ನು ಪಡೆಯುವ ಕ್ರಮ ಹೇಗೆ ಎಂಬ ಅನೇಕ ಅಂಶದ ಬಗ್ಗೆ ಉಪಯುಕ್ತ ಮಾಹಿತಿ ನಿಮಗೆ ಈ ಲೇಖನದ ಮೂಲಕ ನಾವಿಂದು ತಿಳಿಸಲಿದ್ದೇವೆ.

ಯಾಕಾಗಿ ಈ ಸಾಲ ಸಿಗುತ್ತೆ?

ಟಾಪ್ ಅಪ್ ಲೋನ್ ಇದರ ಹೆಸರೇ ಸೂಚಿಸುವಂತೆ ಸಾಲದ ಮೇಲೆ ಮರು ಸಾಲ ಪಡೆಯುವ ಯೋಜನೆ ಇದು ಎಂದು ಹೇಳಬಹುದು. ಟಾಪ್ ಅಪ್ ಲೋನ್ ಎಂದರೆ ಈಗಾಗಲೇ ಅಸ್ತಿತ್ವದಲ್ಲಿರುವ ಸಾಲಕ್ಕೆ ಅಂದರೆ ಮನೆ, ವಾಹನ, ಸ್ವ ಉದ್ಯಮ ಇವೆಲ್ಲಕ್ಕೆ ಈಗಾಗಲೇ ಸಾಲ ಮಾಡಿದ್ದರೆ ಅದರ ಮೇಲೆ ಹೆಚ್ಚುವರಿ ಮೊತ್ತವನ್ನು ನೀಡುವುದಾಗಿದೆ. ನೀವು ಈಗಾಗಲೇ ಸಾಲ ಪಡೆದಿದ್ದು ಮಾಡಬೇಕಾದ ಕಾರ್ಯ ಮಾಡಲು ಬಾಕಿ ಇದ್ದಾಗ ಆಪದ್ಭಾಂದವನಂತೆ ನೆರವಾಗುವ ಸಾಲ ಎಂದು ಹೇಳಬಹುದು.

Image Source: Mint

advertisement

ಅನೇಕ ವಿಧ ಇದೆ

ಈ ಟಾಪ್ ಅಪ್ ಲೋನ್ ನಲ್ಲಿಯೂ ಅನೇಕ ಪ್ರಕಾರಗಳು ಇವೆ‌. ಮನೆ ಅರ್ಧಕ್ಕೆ ನಿಂತರೆ ಹೆಚ್ಚುವರಿ ಸಾಲ ಕೊಡುವ ಉದ್ದೇಶಕ್ಕೆ ಹೋಮ್ ಲೋನ್ ಟಾಪ್ ಅಪ್, ವೈಯಕ್ತಿಕ ಉದ್ದೇಶಕ್ಕೆ ಅಂದರೆ ಸ್ವ ಉದ್ಯೋಗ ಶಿಕ್ಷಣ ಸಾಲ ಪಡೆದಿದ್ದರೆ ಅವುಗಳಿಗಾಗಿ ಪರ್ಸನಲ್ ಲೋನ್ ಟಾಪ್ ಅಪ್ ಇರಲಿದೆ. ಅದೇ ರೀತಿ ವಾಹನ ಖರೀದಿ ಮಾಡಿದ್ದ ಸಾಲಕ್ಕೆ ಹೆಚ್ಚುವರಿ ಸಾಲ ಪಡೆಯಲು ವೆಹಿಕಲ್ ಲೋನ್ ಟಾಪ್ ಅಪ್ ಎಂದು ಇರಲಿದೆ. ಇಂತಹ ಟಾಪ್ ಅಪ್ ಮೇಲಿನ ಬಡ್ಡಿದರವು ಆಯಾ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕ್ ನ ನೀತಿ ನಿರ್ಬಂಧಕ್ಕೆ ಅನುಗುಣವಾಗಿ ಬದಲಾವಣೆ ಆಗಲಿದೆ.

Image Source: Tata Capital

ಯಾರಿಗೆ ಸಿಗಲಿದೆ?

ಈ ಲೋನ್ ಗಾಗಿ ಕೂಡ ಅಪ್ಲೈ ಮಾಡಬೇಕಿದ್ದು ಈಗಾಗಲೇ ಪಡೆದವರ ಮರುಪಾವತಿ ಮಾಹಿತಿ ಹೆಚ್ಚು ಸ್ಪಷ್ಟವಾಗಿ ಇರಬೇಕು. ಟಾಪ್ ಅಪ್ ಲೋನ್ ಅನ್ನು ಅನುಮೋದಿಸುವ ಮೊದಲು ಸಾಲಗಾರನ ಮರುಪಾವತಿ ಇತಿಹಾಸ, ಆದಾಯ ಸ್ಥಿರತೆ, ಕ್ರೆಡಿಟ್ ಸ್ಕೋರ್ ಎಲ್ಲವೂ ಉತ್ತಮವಾಗಿ ಇರಬೇಕು. ಇದರಲ್ಲಿ ಅಸ್ತಿತ್ವದಲ್ಲಿ ಇರುವ ಸಾಲದ ಮೊತ್ತ, ಗರಿಷ್ಠ ಸಾಲದ ಮೊತ್ತ ಸಾಲಗಾರನ ಮರುಪಾವತಿ ಸಾಮರ್ಥ್ಯ ಆಧಾರದ ಮೇಲೆ ಟಾಪ್ ಅಪ್ ಲೋನ್ ಸಿಗಲಿದೆ.

advertisement

Leave A Reply

Your email address will not be published.