Karnataka Times
Trending Stories, Viral News, Gossips & Everything in Kannada

TRAI New Rules: ಫೋನ್ ಕರೆ ಸ್ವೀಕರಿಸುವವರಿಗೆ ಇನ್ಮೇಲೆ ಗುಡ್ ನ್ಯೂಸ್! ನಿಯಮ ಬದಲಿಸಿದ ಭಾರತ ಸರ್ಕಾರ

advertisement

TRAI New Rules: ನಮ್ಮ ಮೊಬೈಲ್ ನಲ್ಲಿ ಸೇವ್ ಇಲ್ಲದ ನಂಬರ್ ನಿಂದ ಕರೆ ಬಂದರೆ ಅದು ಎಲ್ಲಿನ ಕರೆ? ಯಾರು ಮಾಡಿದ್ದು? ಎಂಬ ಯಾವ ಅರಿವು ನಮಗೆ ಇರಲಾರದು. ಹಾಗಾಗಿ ಇದು ಯಾರು ಎಂದು ಪತ್ತೆ ಮಾಡುವ ಸಲುವಾಗಿ ಥರ್ಡ್ ಪಾರ್ಟಿ ಅಪ್ಲಿಕೇಶನ್(Third Party Application) ಅನ್ನು (ಟ್ರು ಕಾಲರ್ ಇತರೆ) ಬಳಸುತ್ತಾರೆ. ಆಗ ನಮ್ಮ ಮೊಬೈಲ್ ನಲ್ಲಿ ನಂಬರ್ ಸೇವ್ ಇಲ್ಲದಿದ್ದರು ಯಾರು ನಮಗೆ ಕರೆ ಮಾಡಿದ್ದು ಎಂದು ಥರ್ಡ್ ಪಾರ್ಟಿ ಅಪ್ಲಿಕೇಶನ್ ಮೂಲಕ ಸುಲಭವಾಗಿ ತಿಳಿಯಬಹುದು. ಹಾಗಿದ್ದರೂ ಇದರ ಬಳಕೆ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ ಹಾಗಾಗಿ ಈ ಮಾಹಿತಿ ನಿಮಗೆ ಬಹಳ ಅನುಕೂಲ ಆಗಲಿದೆ.

ಸಮಸ್ಯೆ ಏನು?

ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸಿದರೆ ಸುಲಭಕ್ಕೆ ಕರೆ ಮಾಡಿದ್ದವರ ಪರಿಚಯ ನಮಗಾದರೂ ನಮ್ಮ ವೈಯಕ್ತಿಕ ಡಾಟಾ ಮಾಹಿತಿ ಎಲ್ಲ ಸೂರಿಕೆ ಆಗುತ್ತದೆ ಎಂಬ ಭಯ ಕೂಡ ಇದ್ದೇ ಇದೆ. ಇದೇ ಕಾರಣಕ್ಕೆ ಹಣ, ಖಾಸಗಿ ಮಾಹಿತಿ ಸೋರಿಕೆ ಆಗುತ್ತದೆ ಎಂದು ಭಯ ಪಡುವವರು ತುಂಬಾ ಜನರು ಇದ್ದಾರೆ. ಈ ಬಗ್ಗೆ ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು (TRAI) ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಹತ್ವದ ಆದೇಶ ಹೊರಡಿಸಿದೆ ಹಾಗಾದರೆ ಆ ಆದೇಶದಲ್ಲಿ ಏನಿದೆ ಎಂಬ ಇತ್ಯಾದಿ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ.

TRAI
Image Source: Mint

ಬದಲಿ ವ್ಯವಸ್ಥೆ ಜಾರಿ

advertisement

ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು (TRAI) ತಿಳಿಸಿದ್ದ ಆದೇಶದಲ್ಲಿ ಇನ್ನು ಮುಂದೆ ಫೋನ್ ನಲ್ಲಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಸುವ ಪ್ರಕ್ರಿಯೆ ಹಂತ ಬದಲಾಗಲಿದೆ ಎಂಬ ಮಹತ್ವದ ಮಾಹಿತಿ ಹರಿದಾಡುತ್ತಿದೆ. ಅದರ ಪ್ರಕಾರ ಇನ್ನು ಮುಂದೆ ಅಪರಿಚಿತ ವರ್ಗದವರು ಕರೆ ಮಾಡಿದ್ದಾಗ ನಾವು ಅದನ್ನು ಅಪ್ಲಿಕೇಶನ್ ಓಪನ್ ಮಾಡಿ ಸರ್ಚ್ ಮಾಡುವ ಅಗತ್ಯ ಇಲ್ಲ ಈ ವ್ಯವಸ್ಥೆ ಬದಲಾಗುತ್ತದೆ. ಅಂದರೆ ನೀವು ಟ್ರೂ ಕಾಲರ್ ಬಳಕೆ ದಾರರು ಎಂದಿಟ್ಟುಕೊಳ್ಳಿ ಆಗ ನಿಮಗೆ ಅಪರಿಚಿತ ಕರೆ ಬಂದಾಗ ಖಾಲಿ ಸಂಖ್ಯೆ ಮಾತ್ರ ಕಾಣುತ್ತಿತ್ತು ಆದರೆ ಇನ್ನು ಮುಂದೆ ಇದಕ್ಕೆ ಬದಲಿ ವ್ಯವಸ್ಥೆ ಬರಲಿದೆ.

ಆದೇಶದಲ್ಲಿ ಏನಿದೆ?

ಅಪರಿಚಿತ ಕರೆ ಎತ್ತುವುದೊ ಅಥವಾ ಬೇಡವೊ ಎಂಬ ಚಿಂತೆ ನಿಮಗೆ ಇನ್ನು ಮುಂದೆ ಇರಲಾರದು. ಥರ್ಡ್ ಪಾರ್ಟಿ ಅಪ್ಲೀಕೇಶನ್ ನಲ್ಲಿಯೇ ಕೆಲವು ಅಗತ್ಯ ಸಂಗತಿ ಬದಲಾಗಲಿಸೆ. ಅಂದರೆ ಅಪರಿಚಿತ ಕರೆ ಬಂದಾಗ ಅದನ್ನು ನೀವು ಎತ್ತುವ ಮುಂಚೆ ನಿಮಗೆ ಹೆಸರು ಗೋಚರ ಆಗಲಿದೆ. ಕಾಲಿಂಗ್ ಸ್ಕ್ರೀನ್ ಮೇಲೆ ಪೂರ್ತಿ ಹೆಸರು ಕಾಣಲಿದೆ. ಆರಂಭಿಕ ಹಂತದಲ್ಲಿ ಈ ಒಂದು ವ್ಯವಸ್ಥೆಯನ್ನು ಉತ್ತರ ಭಾರತದ ಕೆಲ ರಾಜ್ಯದಲ್ಲಿ ಜಾರಿಗೆ ತಂದು ಯಶಸ್ವಿಯಾದ ಬಳಿಕ ದೇಶದ ಎಲ್ಲ ಭಾಗಕ್ಕೆ ಜಾರಿಗೆ ತರಲಾಗುವುದು.

ಹರಿಯಾಣದಲ್ಲಿ ಪ್ರಯೋಗ

ನೀವು ಅಪರಿಚಿತ ಕರೆ ನೋಡಲು ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಕೆ ಮಾಡಲೇ ಬೇಕು ಎಂಬ ವಿಧಾನ ಬದಲಾಯಿಸಲು TRAI ನಿರ್ಧರಿಸಿದೆ. ಅಂದರೆ ನೀವು ಅಪ್ಲಿಕೇಶನ್ ಇಲ್ಲದೆ ಕೂಡ ನಿಮ್ಮ ಮೊಬೈಲ್ ನಲ್ಲಿ ಕರೆ ಬಂದ ಕೂಡಲೇ ಹೆಸರು ಕಾಣುವಂತೆ ಮಾಡಲು ಚಿಂತಿಸಿದ್ದು ಮೊದಲ ಹಂತದಲ್ಲಿ ಹರಿಯಾಣದಲ್ಲಿ ಟೆಸ್ಟಿಂಗ್ ಸರ್ಕಲ್ ನಂತೆ ಪ್ರಯೋಗ ಆಗಲಿದೆ. ಅದೇ ರೀತಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಬಳಕೆದಾರರಿಗೆ ಕೂಡ ಕೆಲವೊಂದು ವಿಚಾರಕ್ಕೆ ಅನುಮತಿ ಕೇಳಲಾಗಿದ್ದು ಅದನ್ನು ಓದಿದ ನಂತರವೇ allow ನೀಡಬೇಕು ಎಂದು TRAI ಆದೇಶಿಸಿದೆ.

advertisement

Leave A Reply

Your email address will not be published.