Karnataka Times
Trending Stories, Viral News, Gossips & Everything in Kannada

Property Rules: ಆಸ್ತಿ ಖರೀದಿ ಅಥವಾ ಮಾರಾಟ ಮಾಡುವುದಕ್ಕೆ ಹೊಸ ನಿಯಮ! ರಾಜ್ಯ ಸರ್ಕಾರ ಘೋಷಣೆ.

advertisement

Property Rules: ಇಂದು ಹೂಡಿಕೆ ಅಂತ ಬಂದಾಗ ಹೆಚ್ಚಿನ ಜನರು ಆದ್ಯತೆ ತೋರುವುದು ಆಸ್ತಿ ಖರೀದಿಗೆ ಎಂಬುದು ತಿಳಿದೆ ಇದೆ.ಯಾಕಂದರೆ ಇಂದು ಆಸ್ತಿ ಗೆ ಹೆಚ್ಚು ಬೇಡಿಕೆ ಮತ್ತು ಮೌಲ್ಯ ಇದೆ.ಅದರಲ್ಲೂ ‌ನಗರ ಪ್ರದೇಶದಲ್ಲಿ ಸ್ವಲ್ಪ ಜಾಗಕ್ಕೂ ಬಹಳಷ್ಟು ಬೇಡಿಕೆ ಇದ್ದು ಹೆಚ್ಚಿನ ಜನರು ಖರೀದಿ ಮಾಡಲು ಆಸಕ್ತಿ ವಹಿಸುತ್ತಾರೆ.‌ಆದರೆ ಆಸ್ತಿ ಖರೀದಿ ಮಾಡುವ ಮುನ್ನ ಕೆಲವೊಂದು ನಿಯಮದ ಬಗ್ಗೆಯು ನಾವು ತಿಳಿದುಕೊಂಡಿರಬೇಕು.ಇಂದು ಆಸ್ತಿ ಖರೀದಿ ಮಾರಾಟದ ಮೋಸ ವಂಚನೆ ಗೊಳಿಸುವ ಪ್ರಕರಣಗಳು ಹೆಚ್ಚಾಗಿದ್ದು ಈ ಬಗ್ಗೆ ನೀವು ತಿಳಿದುಕೊಂಡಿರಬೇಕು.

ವಂಚನೆ ಪ್ರಕರಣ ಹೆಚ್ಚಳ

ಇಂದು ಸುಳ್ಳು ದಾಖಲೆಗಳನ್ನು‌ನೀಡಿ ಆಸ್ತಿ ಮಾರಾಟ ಮಾಡುವ ಸಂಖ್ಯೆ ಬಹಳಷ್ಟು ಹೆಚ್ಚಳವಾಗಿದೆ.ಹಾಗಾಗಿ ‌ಇತ್ತೀಚಿಗೆ ಆಸ್ತಿ ವಿಚಾರ ವಾಗಿ ಹೈಕೋರ್ಟ್‌ ಮೆಟ್ಟಿಲೇರಿದ್ದ ಪ್ರಕರಣ ದಲ್ಲಿ ಆಸ್ತಿ ಮಾರಾಟದಲ್ಲಿ ಆಗಿರುವ ಮೋಸದ ಬಗ್ಗೆ ಆಲಿಸಿರುವ ಹೈಕೋರ್ಟ್‌ ಈ ಬಗ್ಗೆ ವಂಚನೆ ಆಗಬಾರದು ಎನ್ನುವ ಕಾರಣಕ್ಕೆ ಈ ನಿಯಮ ಜಾರಿಗೆ ತಂದಿದೆ.

Property Rights of Women in India and Maintenance
Image Source: Business Today

ಕಡ್ಡಾಯವಾಗಿ ಸಲ್ಲಿಸಬೇಕು

advertisement

ಆಸ್ತಿಯ ಖರೀದಿ ಸಂದರ್ಭದಲ್ಲಿ ಆಸ್ತಿಯ ರಿಜಿಸ್ಟ್ರೇಷನ್ ಅನ್ನೋದು ಬಹಳ ಮುಖ್ಯವಾಗುತ್ತದೆ. ಅದರ ಜೊತೆ ಆಸ್ತಿಯನ್ನು ಮಾರಾಟ ಮಾಡುವ ಹಾಗೂ ಆಸ್ತಿ ಪಡೆದುಕೊಳ್ಳುವಾಗ ಪರಸ್ವರ ಇಬ್ಬರು ವ್ಯಕ್ತಿಗಳು‌ ತಮ್ಮ ಆಧಾರ್ ಕಾರ್ಡ್ ಮೂಲಕ ವೈಯಕ್ತಿಕ
ಯಕ್ತಿಕ ಗುರುತನ್ನು ಸಾಬೀತು ಮಾಡಬೇಕು.ಆಸ್ತಿ ಮಾರಾಟ ಮತ್ತು ಖರೀದಿಯಲ್ಲಿ ವಂಚನೆಯನ್ನು ತಪ್ಪಿಸುವ ನಿಟ್ಟಿನಲ್ಲಿ‌ ಆಧಾ‌ರ್ ಪರಿಶೀಲನೆಯನ್ನು‌ ಇಂದು ಕಡ್ಡಾಯ ಕೂಡ ಮಾಡಲಾಗಿದೆ.

ಈ ಬಗ್ಗೆ ತಿಳಿದುಕೊಳ್ಳಿ

ನೀವು ಆಸ್ತಿ ಖರೀದಿ ಮಾಡುವ ಸಂದರ್ಭದಲ್ಲಿ ಕೆಲವೊಂದು‌ ವಿಚಾರಗಳ ಬಗ್ಗೆ ಗಮನ ವಹಿಸಬೇಕು.ಆಸ್ತಿಯ ಮೇಲೆ ಅಧಿಕಾರ ಇಲ್ಲದೆ ಇರುವ ವ್ಯಕ್ತಿ ಯಾವುದೇ ಕಾರಣಕ್ಕೂ ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ.ಇನ್ನು ಆ ಅಸ್ತಿಯು‌ ತನ್ನದೇ ಎಂದು ತಿಳಿಯ ಪಡಿಸಲು ಕೆಲವು ದಾಖಲೆಗಳು‌ಕೂಡ ಅಗತ್ಯವಾಗಿ ಬೇಕು.

Property Rules
Image Source: Goodreturns

ಪರಿಶೀಲನೆ ಮಾಡಿ

ಆಸ್ತಿಯ ನೊಂದಣಿ ಪತ್ರ ಮತ್ತು ದಾಖಲೆ ಪತ್ರ Occupancy Certificate ಮುಖ್ಯವಾಗಿ ಬೇಕು.ಆಸ್ತಿ ಖರೀದಿ ಮುನ್ನ ನೀವು ಸಾಲ ಪತ್ರವನ್ನು ಮುಖ್ಯವಾಗಿ ಪರಿಶೀಲನೆ ಮಾಡಿ.‌ ಆಸ್ತಿಯ ಮೇಲೆ ಸಾಲವಿದೆ ಅಥವಾ ಇಲ್ಲವೇ ಎಂಬುದನ್ನು ನೀವು ಪರಿಶೀಲಿಸಬೇಕು. ‌ಅದೇ ರೀತಿ ಆಸ್ತಿಯ ಮೇಲೆ ಯಾವುದಾದ್ರೂ ಆಕ್ಷೇಪಣೆ ಇದೆಯೇ ಎಂಬುದನ್ನು ಸಹ‌ ತಿಳಿದುಕೊಳ್ಳಿ. ಇನ್ನು‌ತೆರಿಗೆ‌ ಬಿಲ್ ಗಳನ್ನು ಕೂಡ ನೀವು ಸರಿಯಾಗಿ ಪರಿಶೀಲನೆ ಮಾಡಿ.

advertisement

Leave A Reply

Your email address will not be published.