Karnataka Times
Trending Stories, Viral News, Gossips & Everything in Kannada

Mukesh Ambani: ಸ್ವಂತ ಜಾಗ ಅಥವಾ ಮನೆ ಇದ್ದವರಿಗೆ ಅಂಬಾನಿ ಕಡೆಯಿಂದ ಸಿಹಿಸುದ್ದಿ! ಭಾರತೀಯರಿಗೆ ಗಿಫ್ಟ್

advertisement

ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಸಿಮ್ ಕಂಪೆನಿಗಳಿಗೂ ನೆಟ್ವರ್ಕ್ ಸಮಸ್ಯೆ ಕಾಡುತ್ತಲೇ ಇದೆ. ಮೊಬೈಲ್ ನಲ್ಲಿ ಸಿಮ್ ಗಳು ಅದೆಷ್ಟು ವಿಧವಾದ ಪ್ರಿಪೇಯ್ಡ್ ಸೇವಾ ಯೋಜನೆ ಪರಿಚಯಿಸಿದರೂ ಸರಿಯಾದ ನೆಟ್ವರ್ಕ್ ಇಲ್ಲದೆ ಹೋದರೆ ಅಂತಹ ಸಿಮ್ ಅನ್ನು ಬಳಕೆ ಮಾಡಲು ಜನರು ಕೂಡ ಹಿಂದೇಟು ಹಾಕುತ್ತಾರೆ. ಜಿಯೋ ಸಿಮ್ (Jio Sim) ಬಳಕೆದಾರರಿಗೆ ತನ್ನ ವ್ಯಾಪ್ತಿ ವಿಸ್ತರಣೆ ಮಾಡುವ ಉದ್ದೇಶದಿಂದ ಸಾರ್ವಜನಿಕರ ಜೊತೆ ಜಿಯೋ ಟವರ್ (Jio Tower) ಗಾಗಿ ಕಂಪೆನಿ ಟೈ ಅಪ್ ಆಗುತ್ತಿದೆ. ಹೀಗಾಗಿ ನಿಮ್ಮ ಖಾಲಿ ಭೂಮಿಯಲ್ಲಿ ಜಿಯೋ ಟವರ್ ಹಾಕಿದರೆ ನಿಮಗೆ ಉತ್ತಮ ಆದಾಯ ಸಿಗಲಿದೆ.

ಅಗ್ರಿಮೆಂಟ್ ಇರಲಿದೆ:

ಜಿಯೋ ಕಂಪೆನಿಯ ಪ್ರಕ್ರಿಯೆ ಬಹಳ ಸುಲಭವಾಗಿ ಇದೆ ಎನ್ನಬಹುದು. ಜಿಯೊ ಕಂಪೆನಿಯ ಟವರ್ (Jio Tower) ಹಾಕಿಸಲು ಯಾವುದೇ ರೀತಿ ಮಧ್ಯಮ ವರ್ತಿಗಳ ಪಾಲುದಾರಿಕೆ ಅಗತ್ಯ ಇಲ್ಲ ಅದೇ ರೀತಿ ನಾವು ಕೂಡ ಯಾವುದೇ ತರದ ಶುಲ್ಕ ಪಾವತಿ ಮಾಡುವ ಅಗತ್ಯ ಕೂಡ ಇರದು. ಮೊದಲಿಗೆ ಆನ್ಲೈನ್ ಅಪ್ಲಿಕೇಶನ್ ಫಿಲಪ್ ಮಾಡಬೇಕು ಅದು ಸಬ್ಮಿಟ್ ಆದ ಬಳಿಕ ಜಿಯೋ ಕಂಪೆನಿಯಿಂದ ಲೀಗಲ್ ಅಗ್ರಿಮೆಂಟ್ ಮಾಡಿಕೊಡಲಾಗುತ್ತದೆ.

 

Image Source: Gadget Lite

 

advertisement

ಪ್ರಕ್ರಿಯೆ ಹೇಗಿದೆ?

ಜಿಯೋ (Jio) ಕಂಪೆನಿಯ ಟವರ್ ಗೆ ನೀವು ಆನ್ಲೈನ್ ಅಪ್ಲಿಕೇಶನ್ ಹಾಕಿದ್ದರೆ ಅದು ರಿಜಿಸ್ಟ್ರೇಶನ್ ಆಗಲು ನಿಮ್ಮ ಜಮೀನಿನ ಸಂಪೂರ್ಣ ವಿವರಣೆ ಹೊಂದಿರಬೇಕು. ಅದಕ್ಕಾಗಿ ಹಕ್ಕುಪತ್ರ, ಪಹಣಿ, ಬ್ಯಾಂಕ್ ಪಾಸ್ ಬುಕ್, ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಕೂಡ ಅಗತ್ಯವಾಗಿದೆ. ಅದಕ್ಕೂ ಮೂದಲು ನೀವು ಪ್ಲೇ ಸ್ಟೋರ್ ನಿಂದ ಜಿಯೋ ಕಂಪೆನಿಯ My Jio App ಅನ್ನು ಡೌನ್‌ಲೋಡ್ ಮಾಡಬೇಕು. ಮೊಬೈಲ್ ಸಂಖ್ಯೆ ಹಾಕಿ OTP ಜನರೇಟ್ ಮಾಡಬೇಕು. ಅದರಲ್ಲಿ (Partner with Jio) ಪಾರ್ಟನರ್ ವಿತ್ ಜಿಯೋ ಎಂದು ಬರಲಿದೆ. ಅದರ ಮೇಲೆ ಕ್ಲಿಕ್ ಮಾಡಿ.

ಅದಾದ ಬಳಿಕ ನೀವು ಜಮೀನು ಅಥವಾ ಖಾಲಿ ಭೂಮಿಯಲ್ಲಿ ಮೊಬೈಲ್ ಟವರ್ ಅನ್ನು ಹಾಕುತ್ತಿದ್ದೀರಾ ಅಥವಾ ನಿಮ್ಮ ಬಿಲ್ಡಿಂಗ್ ಮೇಲೆ ಟವರ್ ಹಾಕುತ್ತಿದ್ದೀರಾ ಎಂದು ಕೇಳಲಿದೆ. ಅದರಲ್ಲಿ ನಿಮಗೆ ಯಾವ ಜಾಗ ಹೊಂದಿದೆ ಎಂಬ ಆಧಾರದಲ್ಲಿ ಅದರ ಮೇಲೆ ಕ್ಲಿಕ್ ಮಾಡಬೇಕು ಬಳಿಕ ನಾವು ಇದ್ದ ಜಾಗದ ಲೋಕೇಶನ್ ಅದರಲ್ಲಿ ತೋರಿಸಲಾಗುವುದು. ಬಳಿಕ ಪಿನ್ ಕೋಡ್, ಪಾಪರ್ಟಿ ಡೀಟೆಲ್ಸ್, ಮೊಬೈಲ್ ಸಂಖ್ಯೆ ಎಲ್ಲವನ್ನು ಕೂಡ ನಮೋದಿಸಬೇಕು. ಬಳಿಕ ನಿಮ್ಮ ಜಾಗದ ವಿವರಣೆ ಕೂಡ ನೀವು ಭರ್ತಿ ಮಾಡಬೇಕು.

ಇವಿಷ್ಟು ಆದ ಬಳಿಕ Square Feet, Square Meter ಹಾಗೂ Acre ಎಂದು ಬರಲಿದೆ. ಅದರಲ್ಲಿ ಕ್ಲಿಕ್ ಮಾಡಿ ಆ ಬಳಿಕ Commercial, Agricultural, Residential, Industrial ಎಂಬ ಆಯ್ಕೆ ಬರಲಿದೆ.ಅದಾದ ಬಳಿಕ ಟವರ್ ಹಾಕುವ ಜಾಗಕ್ಕೆ ಖಾಸಗಿ ರಸ್ತೆ ಇದೆಯಾ ಅಥವಾ ಸರಕಾರಿ ರೋಡ್ ಇದೆಯಾ ಎಂಬುದನ್ನು ಕೂಡ ನೀವು ತಿಳಿಸಬೇಕು. ಈ ಎಲ್ಲ ಪ್ರಮುಖ ಪ್ರಕ್ರಿಯೆ ನಡೆದ ಬಳಿಕ Application Send Successfully ಎಂದು ಬರಲಿದೆ. ಬಳಿಕ ಕೆಲವೇ ದಿನದಲ್ಲಿ ಯಾವುದೆ ಚಾರ್ಜಸ್ ಇಲ್ಲದೆ ನೀವು ತಿಳಿಸಿದ್ದ ಜಾಗಕ್ಕೆ ಹಿಯೋ ಟವರ್ ಹಾಕಿಸಲಾಗುತ್ತದೆ.

ಇದಕ್ಕಾಗಿ ತಿಂಗಳಿಗೆ ಇಂತಿಷ್ಟು ಎಂದು ಹಣ ಬರಲಿದೆ ಹಾಗೂ ಅದನ್ನು ನೋಡಿಕೊಳ್ಳಲು ಒಬ್ಬರನ್ನು ನೇಮಕ ಕೂಡ ಮಾಡುತ್ತಾರೆ. ಹಣ ಎಷ್ಟು ಬರುತ್ತದೆ ಎಂದು ಹೇಳಲು ಆಗದು ದೊಡ್ಡ ಸಿಟಿ ಪ್ರದೇಶವಿದ್ದು ಹೆಚ್ಚು ಜನ ಜಿಯೋ ಸಿಮ್ ಬಳಕೆ ದಾರರು ಇದ್ದರೆ ಮಾಸಿಕ 20-30ಸಾವಿರದ ತನಕ ಆದಾಯ ಬರಲಿದೆ. ರಿಮೋಟ್ ಏರಿಯಾದಲ್ಲಿ ಆದಾಯ ಪ್ರಮಾಣ ಕೂಡ ಕಡಿಮೆ ಆಗಲಿದೆ.

advertisement

Leave A Reply

Your email address will not be published.