Karnataka Times
Trending Stories, Viral News, Gossips & Everything in Kannada

PM Kisan Yojana: ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಬಗ್ಗೆ ಬಿಗ್ ಅಪ್ಡೇಟ್

advertisement

ರೈತರಿಗಾಗಿ ಅವರ ಉದ್ದೇಶ ಈಡೇರಿಕೆಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಈ ಹಿಂದಿನಿಂದಲೇ ಅನೇಕ ಯೋಜನೆಯನ್ನು ಪರಿಚಯಿಸುತ್ತಲೇ ಬಂದಿದೆ. ಅಂತಹ ಯೋಜನೆಯ ಸಾಲಿನಲ್ಲಿ ಪಿಎಂ ಕಿಸಾನ್ ಯೋಜನೆಯು ಅಗ್ರ ಸ್ಥಾನವನ್ನು ಹೊಂದಿದೆ ಎಂದು ಹೇಳಬಹುದು. ಪಿಎಂ ಕಿಸಾನ್ ಯೋಜನೆ (PM Kisan Yojana) ಯ ಮೂಲಕ ಬಡವರ್ಗದ ರೈತರಿಗೆ ಹಣಕಾಸಿನ ನೆರವನ್ನು ನೀಡಲಾಗುತ್ತಿದ್ದು ಇದು ಬಹುತೇಕ ಜನರಿಗೆ ಬಹಳ ಖುಷಿಯನ್ನು ನೀಡಿದೆ. ಕಂತಿನ ಪ್ರಕಾರ ಈ ಹಣ ಮಂಜೂರಾಗುತ್ತಿದ್ದು ಈ ಬಾರಿಯ ಕಂತಿನ ಹಣದ ಬಗ್ಗೆ ಬಿಗ್ ಅಪ್ಡೇಟ್ ಮಾಹಿತಿ ಇಲ್ಲಿದೆ.

ಕೃಷಿ ಕ್ಷೇತ್ರಗಳ ಅಭಿವೃದ್ಧಿ ಆಗಬೇಕು ಎಂಬ ನೆಲೆಯಲ್ಲಿ ಸರಕಾರಗಳು ಈ ಪಿಎಂ ಕಿಸಾನ್ ಯೋಜನೆಯನ್ನು ಹೆಚ್ಚಾಗಿ ಬೆಂಬಲಿಸುತ್ತಾ ಬಂದಿದೆ. ರೈತರ ಅಗತ್ಯಗಳನ್ನು ಪೂರ್ತಿ ಮಟ್ಟದಲ್ಲಿ ಈ ಯೋಜನೆ ಮೂಲಕ ಪೂರೈಸಲು ಸಾಧ್ಯವಾಗದಿದ್ದರೂ ಕೂಡ ಭಾಗಶಃ ಆದರೂ ರೈತರಿಗೆ ಲಾಭ ಸಿಗುವಂತೆ ಮಾಡಬೇಕು ಎಂಬ ನಿಟ್ಟಿನಲ್ಲಿಈ ಪಿಎಂ ಕಿಸಾನ್ ಯೋಜನೆ (PM Kisan Yojana) ಯ ಮೂಲಕ ಕಂತಿನ ಹಣ ನೀಡಲು ಸರಕಾರ ಮುಂದಾಗಿದೆ. ಇದರ ಅಡಿಯಲ್ಲಿ ಅರ್ಹರಿಗೆ ಎರಡು ಸಾವಿರದಂತೆ ಮೂರು ಕಂತಿಗೆ ಒಟ್ಟು 6000 ಹಣ ಜಮೆ ಆಗಲಿದೆ.

ನೀವು ಅರ್ಹರೆ:

 

Image Source: Prabhat Khabar

 

ಪಿಎಂ ಕಿಸಾನ್ ಯೋಜನೆ (PM Kisan Yojana) ಗೆ ಅರ್ಜಿಯನ್ನು ಹಾಕಿದ್ದವರಿಗೆ ಅನೇಕರಿಗೆ ಇದುವರೆಗೆ ಒಂದು ಕಂತಿನ ಹಣ ಬಂದಿಲ್ಲ ಎಂದಿದ್ದು ಇದೆ. ಇದಕ್ಕೆ ಕಾರಣ ಏನು ಎಂಬ ಗೊಂದಲ ನಿಮಗೂ ಆಗಿರಬಹುದು. ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಹಣ ಬರದೇ ಇರಲು ಮುಖ್ಯ ಕಾರಣ ನಿಮ್ಮ ಅರ್ಜಿ ಸ್ವೀಕಾರ ಆಗದೆ ನೀವು ಅನರ್ಹರಾಗಿ ಇರುವ ಸಾಧ್ಯತೆ ಇದೆ. ನಕಲಿ ಫಲಾನುಭವಿಗಳು, EKYC ಮಾಡಿಸದೇ ಇರುವುದು, ಫ್ರೀಜ್ ಮಾಡಿಟ್ಟ ಬ್ಯಾಂಕ್ ಖಾತೆಗಳು, ಆಧಾರ್ ಕಾರ್ಡ್ ಸರಿಯಾಗಿಲ್ಲದಿದ್ದರೆ, ಬ್ಯಾಂಕ್ ಖಾತೆ ದೋಷ ಪೂರ್ಣವಾಗಿದ್ದರೆ ನೀವು ಫಲಾನುಭವಿಗಳಾಗಲು ಸಾಧ್ಯವಿಲ್ಲವಾಗಿದೆ. ಹಾಗಾಗಿ ನೀವು ಪಿಎಂ ಕಿಸಾನ್ ಯೋಜನೆಯಲ್ಲಿ ಅರ್ಹರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಅಥವಾ ಇಲ್ಲ ಎಂಬುದನ್ನು ಖಾತರಿ ಪಡಿಸಿಕೊಳ್ಳಿ.

advertisement

ಈ ವೆಬ್ಸೈಟ್ ನಲ್ಲಿ ಭೇಟಿ ನೀಡಿ:

ನೀವು ನಿಮ್ಮ ಹೆಸರು ಪಿಎಂ ಕಿಸಾನ್ ಯೋಜನೆ (PM Kisan Yojana) ಯ ಅಡಿಯಲ್ಲಿ ಬಂದಿದೆ ಅಥವಾ ಇಲ್ಲ ಎಂಬುದನ್ನು ಖಾತರಿ ಪಡಿಸಿಕೊಳ್ಳಲು https://pmkisan.gov.in ಅಧಿಕೃತ ವೆಬ್‌ಸೈಟ್‌ನಲ್ಲಿ ಭೇಟಿ ನೀಡಿ ಆ ಬಳಿಕ ಅದರಲ್ಲಿ ಫಲಾನುಭವಿಗಳ ಪಟ್ಟಿ ಮೇಲೆ ಕ್ಲಿಕ್ ಮಾಡಬೇಕು ಆ ಬಳಿಕ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಹೋಬಳಿ ಎಲ್ಲವನ್ನು ಮಾಹಿತಿ ಫೀಡ್ ಮಾಡಿದರೆ ಬಳಿಕ ಗೆಟ್ ರಿಪೋರ್ಟ್ (Get Report) ಎಂಬ ಆಯ್ಕೆ ಕಾಣಲಿದೆ ಅದರ ಮೇಲೆ ಕ್ಲಿಕ್ ಮಾಡಿದರೆ ಫಲಾನುಭವಿಗಳ ಪಟ್ಟಿ ನಿಮಗೆ ಸಿಗಲಿದೆ. ಅದರಲ್ಲಿ ನಿಮ್ಮ ಹೆಸರು ಚೆಕ್ ಮಾಡಿಕೊಳ್ಳಿ. ಹೆಸರು ಇದ್ದರೆ ಮಾತ್ರವೇ ಹಣ ಬರಲಿದೆ.

ಯಾವಾಗ ಬಿಡುಗಡೆ ಆಗುತ್ತದೆ?

 

Image Source: Jagran

 

ವರ್ಷದಲ್ಲಿ ಕಂತಿನ ಪ್ರಕಾರ ಮೂರು ಬಾರಿ ಈ ಹಣ ಬಿಡುಗಡೆ ಆಗಲಿದೆ. ಕೇಂದ್ರ ಸರಕಾರವು ಪಿಎಂ ಕಿಸಾನ್ ಯೋಜನೆಯ 16ನೇ ಕಂತಿನ ಯೋಜನೆಯ ಹಣವನ್ನು 2024ರ ಫೆಬ್ರವರಿ 28ರಂದು ಬಿಡುಗಡೆ ಮಾಡಿತ್ತು. ದೇಶದ ಸುಮಾರು 9 ಕೋಟಿ ರೈತರು ಇದರ ಲಾಭ ಪಡೆದಿದ್ದಾರೆ. ಇದುವರೆಗೆ 21ಸಾವಿರ ಕೋಟಿ ರೂಪಾಯಿ ರೈತರಿಗೆ ಈ ಯೋಜನೆ ಮೂಲಕ ಹಂಚಿಕೆ ಮಾಡಲಾಗಿದ್ದು ಇನ್ನು 17 ನೇ ಕಂತಿನ ಹಣವು ಮೇ ತಿಂಗಳ ಅಂತ್ಯದ ಒಳಗೆ ಬರುವ ಸಾಧ್ಯತೆ ಕೂಡ ಇದೆ.

advertisement

Leave A Reply

Your email address will not be published.