Karnataka Times
Trending Stories, Viral News, Gossips & Everything in Kannada

PM Kisan Scheme: ಪಿಎಂ ಕಿಸಾನ್ ಯೋಜನೆಯ ಈ ಬಾರಿಯ ಕಂತಿನ ಹಣ ಯಾವಾಗ ಬರುತ್ತೆ ಎಂದು ಕಾದವರಿಗೆ ಇಲ್ಲಿದೆ ಗಿಫ್ಟ್

advertisement

ರಾಜ್ಯದಲ್ಲಿ ಕೃಷಿ ಸಂಬಂಧಿತ ಬೆಂಬಲ ತುಂಬಾ ಉತ್ತಮವಾಗೇ ಇದೆ, ಸಿಎಂ (CM) ಅವರಿಂದ ಅನೇಕ ಯೋಜನೆಗೆ ಚಾಲನೆ ದೊರೆಯುವ ಜೊತೆಗೆ ಪಿಎಂ ಕಿಸಾನ್ ಯೋಜನೆ (PM Kisan Scheme) ಕೂಡ ಬಡವರ್ಗದ ಮತ್ತು ಮಧ್ಯಮ ವರ್ಗದ ರೈತರಿಗೆ ಸಹಕಾರಿ ಆಗಿದೆ ಎಂದು ಹೇಳಬಹುದು. ಪಿಎಂ ಕಿಸಾನ್ ಯೋಜನೆಯ ಮೂಲಕ ಕಂತಿನಂತೆ ಹಣವು ರೈತರ ಖಾತೆಗೆ ಬರಲಿದ್ದು ಈಗಾಗಲೇ ಅನೇಕ ಕೃಷಿ ಇಲಾಖೆಗಳು ಈ ಬಗ್ಗೆ ಸರಕಾರದ ಯೋಜನೆ ಎಂಬ ತರನಾಗಿ ಬಡ ರೈತರಿಗೆ ಮಾಹಿತಿ ನೀಡಿದ್ದಾರೆ.

What is PM Kisan Scheme?

 

 

ಕೇಂದ್ರ ಸರಕಾರದ ನೇತೃತ್ವದಲ್ಲಿ ಬಡ ವರ್ಗದ ರೈತರ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ಆರ್ಥಿಕ ನೆರವು ನೀಡುವ ಯೋಜನೆ ಎಂದು ಇದನ್ನು ಹೇಳಬಹುದು. ಪಿಎಂ ಕಿಸಾನ್ ಯೋಜನೆ (PM Kisan Scheme) ಅಡಿಯಲ್ಲಿ ಕಂತಿನ ಪ್ರಕಾರ ರೈತರ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತದೆ. ಮೂರು ಕಂತಿನ ಆಧಾರದ ಮೇಲೆ 6 ಸಾವಿರ ರೂಪಾಯಿ ನೀಡಲಾಗುತ್ತಿದ್ದು  ಒಂದು ಕಂತಿನಲ್ಲಿ ಎರಡು ಸಾವಿರ ರೂಪಾಯಿಯಂತೆ ಹಂಚಿಕೆ ಮಾಡಲಾಗುತ್ತಿದೆ. 11 ಕೋಟಿಗೂ ಅಧಿಕ ಫಲಾನುಭವಿಗಳು ಇಲ್ಲಿ ಇದ್ದಾರೆ.

EKYC ಕಡ್ಡಾಯ:

advertisement

ಬಹುತೇಕ ಕ್ಷೇತ್ರದಲ್ಲಿ KYC ಕಡ್ಡಾಯ ಮಾಡಿದಂತೆ ಪಿಎಂ ಕಿಸಾನ್ ಯೋಜನೆ (PM Kisan Scheme) ಯಲ್ಲಿ ಕೂಡ KYCಯನ್ನು ಕಡ್ಡಾಯ ಮಾಡಲಾಗುತ್ತಿದೆ. ಅದೆ ರೀತಿ ಯಾರೆಲ್ಲ ತಮ್ಮ ಆಧಾರ್ ಕಾರ್ಡ್ (Aadhaar Card) ಅನ್ನು ಬ್ಯಾಂಕ್ ಜೊತೆಗೆ ಲಿಂಕ್ ಮಾಡಲಿಲ್ಲ ಅಂತವರನ್ನು ಯೋಜನೆಯ ಪಟ್ಟಿಯಿಂದ ಕೈ ಬಿಡುವ ನಿರ್ಧಾರಕ್ಕೂ ಬರಲಾಗಿದೆ. PM Kisan Yojana ಯ ಮೂಲಕ ಈಗಾಗಲೇ 15 ಕಂತಿನ ಹಣ ಜಮೆ ಮಾಡಲಾಗಿದ್ದು 16ನೇ ಕಂತಿನ ಹಣ ಜಮೆ ಮಾಡಿದೆ ಇನ್ನು 16 ನೇ ಕಂತು ಬರಲಿಲ್ಲ ಎಂದವರಿಗೆ ಮತ್ತೊಮ್ಮೆ ಅವಕಾಶ ನೀಡಲಾಗಿದ್ದು ಅಷ್ಟರ ಒಳಗೆ KYC ಮಾಡುವಂತೆ ಸೂಚಿಸಲಾಗಿದೆ.

ಈ ಕೆಲಸ ಮಾಡಿ:

ಪಿಎಂ ಕಿಸಾನ್ ಯೋಜನೆ (PM Kisan Yojana) ಅಡಿಯಲ್ಲಿ 16ನೇ ಕಂತಿನ ಹಣವು 28ರಂದು ಬಂದಿತ್ತು. ಹಾಗಾಗಿ ಈ ಹಿಂದೆ ಪಿಎಂ ಕಿಸಾನ್ ಯೋಜನೆಯ ಹಣ ಬಂದಿಲ್ಲ ಎಂದಾದರೆ ನೀವು ಕೆಲವೊಂದು ಕಡ್ಡಾಯ ಕ್ರಮ ಅನುಸರಿಸಬೇಕು.

  • ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ.
  • ನಿಮ್ಮ ಜಮೀನಿನ ದಾಖಲಾತಿಯನ್ನು ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡುವುದು.
  • ಹೆಸರು ಮಾಹಿತಿ ಆಧಾರ್ ಕಾರ್ಡ್ ನಲ್ಲಿ ಇದ್ದಂತೆ ಫೀಡಿಂಗ್ ಮಾಡಿರಬೇಕು.
  • EKYC ಸಲ್ಲಿಕೆ ಮಾಡುವುದು.
  • ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ಎಲ್ಲ ದಾಖಲಾತಿ ಸರಿಯಾಗಿ ಹಾಕುವುದು.

ಯಾವಾಗ ಹಣ ಜಮೆ:

ಒಟ್ಟಾರೆಯಾಗಿ ಈಗಾಗಲೇ 16 ಕಂತಿನ ಹಣ ಬಂದಿದ್ದು ಮುಂದಿನ ಖಾತೆ ಹಣ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದಾರೆ. ಪಿಎಂ ಕಿಸಾನ್ ಯೋಜನೆ (PM Kisan Yojana) ಯ 17 ನೇ ಕಂತಿನ ಹಣ ಚುನಾವಣೆ ಪೂರ್ವದಲ್ಲಿ ಬರುವ ಸಾಧ್ಯತೆ ಇದೆ. ಹೋಳಿ ಹಬ್ಬದ ಸಂದರ್ಭದಲ್ಲಿ ರೈತರಿಗೆ ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ ಜಮೆ ಆಗಲಿದೆ.

advertisement

Leave A Reply

Your email address will not be published.