Karnataka Times
Trending Stories, Viral News, Gossips & Everything in Kannada

PM Kisan: ರೈತರಿಗೆ ಸಿಹಿಸುದ್ದಿ, ಪಿಎಂ ಕಿಸಾನ್ ಮೊತ್ತ 8,000 ರೂಪಾಯಿಗೆ ಏರಿಕೆ!

advertisement

ರೈತರ ವ್ಯವಸಾಯಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ಧನಸಹಾಯ ಒದಗಿಸುವ ಪಿಎಂ ಕಿಸಾನ್ ಸಮ್ಮಾನ್ ನಿಧಿ  ಯೋಜನೆ (PM Kisan Samman Nidhi Scheme) ಯಲ್ಲಿ ಹಣದ ಮೊತ್ತ ಹೆಚ್ಚಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ವರ್ಷದ ಹಿಂದೆಯೇ ಈ ಬಗ್ಗೆ ವರದಿಗಳಿದ್ದವು.

ಈ ಮೊದಲು ವರ್ಷಕ್ಕೆ ಒಟ್ಟು 6,000 ರೂಗಳನ್ನು ಮೂರು ಕಂತುಗಳಲ್ಲಿ ಸರ್ಕಾರವು ಫಲಾನುಭವಿಗಳಿಗೆ ಒದಗಿಸುತ್ತಿತ್ತು .ಈ ಹಣವನ್ನು ಎಂಟು ಸಾವಿರ ರೂಗೆ ಹೆಚ್ಚಿಸಬಹುದು. ಈ ಎಂಟು ಸಾವಿರ ರೂ ಹಣವನ್ನು ನಾಲ್ಕು ಕಂತುಗಳಲ್ಲಿ ಕೊಡುವುದು ಸರ್ಕಾರದ ಚಿಂತನೆ ಆಗಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ವಾಹಿನಿಗಳಲ್ಲಿ ವರದಿಯಾಗಿದೆ. ಈ ವರದಿ ಪ್ರಕಾರ, ಲೋಕಸಭೆಗೆ ಮುನ್ನ ಸರ್ಕಾರದಿಂದ ಘೋಷಣೆ ಆಗುವ ಸಾಧ್ಯತೆ ಇದೆ.

PM Kisan ಯೋಜನೆಯ ಲಾಭಗಳೇನು?

 

 

ಪಿಎಂ-ಕಿಸಾನ್ ಯೋಜನೆ (PM Kisan Yojana) ಯು ದೇಶದ ಎಲ್ಲಾ ರೈತರ ಕುಟುಂಬಗಳಿಗೆ ಆದಾಯದ ಬೆಂಬಲವನ್ನು ಒದಗಿಸುವ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಪಿಎಂ ಗರೀಬ್ ಕಲ್ಯಾಣ್ (PM Garib Kalyan) ಅನ್ನ ಯೋಜನೆಯು ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಆಹಾರಧಾನ್ಯಗಳನ್ನು ಒದಗಿಸುವು ಯೋಜನೆಯಾಗಿದೆ.

ಯೋಜನೆಯ ಹಣ ಹೆಚ್ಚಿಸುತ್ತಿರುವ ಕಾರಣ:

advertisement

ಸರ್ಕಾರವು ಫೆಬ್ರವರಿ 2024 ಮತ್ತು ಮಾರ್ಚ್ 2024 ರ ನಡುವೆ ಪಿಎಂ ಕಿಸಾನ್ ಯೋಜನೆ (PM Kisan Yojana) ಯ 16ನೇ ಕಂತನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆಯನ್ನು ಒದಗಿಸಿಲ್ಲ. ಕೇಂದ್ರವು ನವೆಂಬರ್ 15, 2023 ರಂದು ಯೋಜನೆಯ 15 ನೇ ಕಂತನ್ನು ಬಿಡುಗಡೆ ಮಾಡಿತ್ತು.

 

 

ಈ ನಡುವೆ 2024 ರ ಮಧ್ಯಂತರ ಬಜೆಟ್‌ನಲ್ಲಿ ಬಡವರು, ರೈತರು, ಯುವಕರು ಮತ್ತು ಮಹಿಳೆಯರಿಗೆ ಹೆಚ್ಚುವರಿ ಬೆಂಬಲ ಕ್ರಮಗಳನ್ನು ಒದಗಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಮೂಲಗಳ ಪ್ರಕಾರ, ಸರ್ಕಾರಿ ಇಲಾಖೆಗಳು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಹಣಕಾಸಿನ ನೆರವನ್ನು ಹೆಚ್ಚಿಸುವ ಉದ್ದೇಶದಿಂದ ಯೋಜನೆಗಳನ್ನು ರೂಪಿಸುತ್ತಿವೆ.

ಫೆಬ್ರವರಿ 1 ರ ಬಜೆಟ್ ಪ್ರಧಾನವಾಗಿ ಮಧ್ಯಂತರ ಬಜೆಟ್ ಆಗಿರುವ ಕಾರಣ ಯಾವುದೇ ಪ್ರಮುಖ ಘೋಷಣೆಗಳನ್ನು ಹೊಂದಿರುವುದಿಲ್ಲ. ವೋಟ್ ಆನ್ ಅಕೌಂಟ್ ರೀತಿಯಲ್ಲಿ ಎಂದು ಹಣಕಾಸು ಸಚಿವರು ಇತ್ತೀಚಿನ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ರಾಜಸ್ತಾನದಲ್ಲಿ PM Kisan ಮೊತ್ತ 12,000 ರೂಪಾಯಿ!

ಈ ಹಿಂದೆ ರಾಜಸ್ಥಾನದಲ್ಲಿ ರಾಜಕೀಯ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪ್ರಧಾನ ಮಂತ್ರಿ ಕಿಸಾನ್ ಯೋಜನೆಗೆ ಅರ್ಜಿ ಸಲ್ಲಿಸಿರುವ ರಾಜಸ್ಥಾನದ ರೈತರಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ. ರಾಜ್ಯ ಸರ್ಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರಿಗೆ ವರ್ಷಕ್ಕೆ 12,000 ರೂಪಾಯಿ ನೀಡಲಿದೆ ಎಂದು ಪ್ರಧಾನಿ ಮೋದಿ ರಾಜಸ್ಥಾನದ ರೈತರಿಗೆ ತಿಳಿಸಿದ್ದಾರೆ.

advertisement

Leave A Reply

Your email address will not be published.