Karnataka Times
Trending Stories, Viral News, Gossips & Everything in Kannada

Post Office Scheme: ತಿಂಗಳಿಗೆ ಕೇವಲ 12,500 ರೂಪಾಯಿ ಹೂಡಿಕೆ ಮಾಡಿದ್ರೆ ಸಿಗಲಿದೆ 66 ಲಕ್ಷ ರೂಪಾಯಿ! ಇಲ್ಲಿದೆ ಅದ್ಭುತ ಯೋಜನೆ

advertisement

ಇಂದು ಹೆಚ್ಚಿನ ಜನರು ಪೋಸ್ಟ್ ಆಫೀಸ್ (Post Office) ಖಾತೆಗಳನ್ನು ತೆರೆಯುತ್ತಾರೆ. ಯಾಕಂದ್ರೆ ಇಲ್ಲಿ ಸಿಗುವ ಲಾಭ ಹೆಚ್ಚು. ಸುರಕ್ಷಿತ ಹೂಡಿಕೆ ಯೊಂದಿಗೆ ಹೆಚ್ಚಿನ ಬಡ್ಡಿಯನ್ನು ನೀವು ಪಡೆಯಬಹುದು. ಅದರ ಜೊತೆ ಇದ್ದ ಕನಿಷ್ಠ ‌ಭಾಗವಾದರೂ ಹೂಡಿಕೆ ಮಾಡಲು ಅವಕಾಶವೂ ಇದೆ. ಇತ್ತೀಚೆಗೆ, ಹಣಕಾಸು ಸಚಿವಾಲಯವು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (Post Office Monthly Income Scheme) ಯಲ್ಲಿ ಹೂಡಿಕೆ ಮಿತಿಯನ್ನು ಹೆಚ್ಚು ಮಾಡಿದೆ ಎಂದು ಈಗಾಗಲೇ ಸೂಚನೆ ನೀಡಿದೆ.

ಪೋಸ್ಟ್ ಆಫೀಸ್ PPF ಇಷ್ಟು ಮೊತ್ತ ಪಡೆಯಬಹುದು:

 

 

ಯಾವುದೇ ಭಾರತೀಯ ಪ್ರಜೆ ಈ ಯೋಜನೆಯ (Post Office Scheme) ಮೂಲಕ ಹೂಡಿಕೆ ಮಾಡಲು ಅವಕಾಶ ಇದ್ದು ಹೆಚ್ಚಿನ ಬಡ್ಡಿ ಮೊತ್ತವನ್ನು ಇದರಲ್ಲಿ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಶೇ.7.1ರಷ್ಟು ಬಡ್ಡಿ ನೀಡಲಾಗುತ್ತಿದ್ದು ಪಿಪಿಎಫ್ ಯೋಜನೆ (PPF Scheme) ಯಲ್ಲಿ ಕನಿಷ್ಠ ಮೊತ್ತ ರೂ 500 ನೊಂದಿಗೆ ಪ್ರಾರಂಭ ಮಾಡಬಹುದು. ನೀವು ಪ್ರತಿ ವರ್ಷ 1.5 ಲಕ್ಷ ರೂಪಾಯಿ ಮೊತ್ತವನ್ನು 15 ವರ್ಷಗಳ ಕಾಲ ಹೂಡಿಕೆ ಮಾಡಿದರೆ, ನಿಮ್ಮ ಒಟ್ಟು ಹೂಡಿಕೆಯು 22,50,000 ರೂ ಆಗಿರುತ್ತದೆ, ಆದರೆ 7.1 ಶೇಕಡಾ ಬಡ್ಡಿಯೊಂದಿಗೆ, 40,68,209 ರೂ ಪಡೆಯಬಹುದು. ಅದೇ ರೀತಿ 7.1 ರಷ್ಟು ಬಡ್ಡಿ ಮೊತ್ತ ದೊಂದಿಗೆ ಮೆಚ್ಯೂರಿಟಿಯಲ್ಲಿ ಒಟ್ಟು 66,58,288 ರೂಪಾಯಿ ಹಣ ಪಡೆಯಬಹುದು.

ವಿಸ್ತರಣೆ ಮಾಡುವ ಅವಕಾಶ ಇದೆ:

advertisement

ಕೇಂದ್ರ ಸರ್ಕಾರದ ಜನಪ್ರಿಯ ಹೂಡಿಕೆಗಳಲ್ಲಿ ಒಂದಾದ ಸಾರ್ವಜನಿಕ ಭವಿಷ್ಯ ನಿಧಿ (PPF) ಯು ಬಹಳ ಉಪಯುಕ್ತವಾಗಿದ್ದು, ಈ ಪಿಪಿಎಫ್ ಯೋಜನೆ ಮೂಲಕ ನೀವು ನಿಮ್ಮ ಹಣವನ್ನು 15 ವರ್ಷಗಳವರೆಗೆ ಹೂಡಿಕೆ ಮಾಡಲು ಅವಕಾಶ ಇದ್ದು ಇದನ್ನು ನೀವು 5 ವರ್ಷಗಳವರೆಗೆ ವಿಸ್ತರಣೆ ಮಾಡಲು ಅವಕಾಶ ಕೂಡ ಇದೆ.

ಒಂದು ಖಾತೆ ತೆರೆಯಲು ಅವಕಾಶ:

ಈ ಯೋಜನೆ ಮೂಲಕ ಖಾತೆದಾರರಿಗೆ ಕೇವಲ ಒಂದು PPF Account ತೆರೆಯಲು ಅವಕಾಶವಿದ್ದು ನೀವು ಅದನ್ನು ಖಾತೆ ತೆರೆದ ಸಮಯದಿಂದ ಕನಿಷ್ಠ ಐದು ವರ್ಷಗಳನ್ನು ಪೂರ್ಣ ಗೊಳಿಸ ಬೇಕಿರುವುದು ಕಡ್ಡಾಯ. ನೀವು ಪೋಸ್ಟ್ ಆಫೀಸ್ (Post Office) ಅಥವಾ ಬ್ಯಾಂಕ್‌ನಲ್ಲಿ PPF ಖಾತೆ ತೆರೆದಿದ್ದರೆ, ನೀವು ಈ ಖಾತೆಯನ್ನು ಬೇರೆಲ್ಲಿಯೂ ತೆರೆಯಲು ಅವಕಾಶ ಇರುವುದಿಲ್ಲ.

ವಿನಾಯಿತಿ ಇದೆ:

ಅದೇ ರೀತಿ ಸಾರ್ವಜನಿಕ ಭವಿಷ್ಯ ನಿಧಿ ಅಥವಾ ಪಿಪಿಎಫ್ ಯೋಜನೆಯ ಮೂಲಕ ಠೇವಣಿ ಮಾಡುದಾದ್ರೆ ಆದಾಯ ತೆರಿಗೆ ಕಾಯಿದೆಯ ಮೂಲಕ ತೆರಿಗೆ ವಿನಾಯಿತಿಗೆ ಕ್ಲೈಮ್ ಮಾಡಲು ಅವಕಾಶ ಕೂಡ ಇದೆ.ಅದೇ ರೀತಿ ನೀವು ಪ್ರತಿದಿನಕ್ಕೆ 417 ರೂ. ಹೂಡಿಕೆ ಮಾಡಿದ್ರೆ ತಿಂಗಳಿಗೆ 12,500 ರೂ. ಹೂಡಿಕೆ ಮಾಡಬಹುದು.ಅದು 15 ವರ್ಷಗಳ ನಂತರ 22.50 ಲಕ್ಷ ರೂ. ದೊರೆಯುತ್ತದೆ. ಒಟ್ಟಿನಲ್ಲಿ ಹಲವು ರೀತಿಯ ಸೌಲಭ್ಯ ಗಳು ಇದರಲ್ಲಿದ್ದು ಇಲ್ಲಿ ಹೂಡಿಕೆಗೆ ಉತ್ತಮ ಆಯ್ಕೆ ಎನ್ನಬಹುದು.

advertisement

Leave A Reply

Your email address will not be published.