Karnataka Times
Trending Stories, Viral News, Gossips & Everything in Kannada

Nirmala Sitharaman: ತೆರಿಗೆ ಕಟ್ಟುವವರಿಗೆ ಸಿಹಿಸುದ್ದಿ, 2024 ರ ಬಜೆಟ್ ನಲ್ಲಿ ಈ ದೊಡ್ಡ ಬದಲಾವಣೆ ಸಾಧ್ಯ!

advertisement

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಫೆಬ್ರವರಿ 1ರಂದು 2024ರ ಮಧ್ಯಂತರ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದು, ಜನತೆ ಈಗಾಗಲೇ ಈ ವರದಿ ಬಗ್ಗೆ ಕಾದು ಕುಳಿತಿದೆ. ಆದರೆ 10 ವರ್ಷಗಳಲ್ಲಿ ಆಗದ ಬದಲಾವಣೆ ಈ ವರ್ಷ ಸಂಭವಿಸಲಿದೆ ಎಂದು ತಜ್ಞರು ಈ ಬಗ್ಗೆ ಈಗಾಗಲೇ ಅಭಿಪ್ರಾಯ ಹಂಚಿ ಕೊಂಡಿದ್ದಾರೆ.

ನೇರ ತೆರಿಗೆ ಸಂಗ್ರಹ ಉತ್ತಮ

ಸರ್ಕಾರದ ನೇರ ತೆರಿಗೆ ಸಂಗ್ರಹ ಉತ್ತಮವಾಗಿದ್ದು ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಈಗಾಗಲೇ ಈ ಹಣಕಾಸು ವರ್ಷದಲ್ಲಿ ತೆರಿಗೆ ಸಂಗ್ರಹಣೆಯಲ್ಲಿ 17.01% ಹೆಚ್ಚಳವಾಗಿದ್ದು ಆಹಾರ ಪದಾರ್ಥಗಳ ಹಣದುಬ್ಬರದಲ್ಲೂ ಪ್ರಗತಿ ಸಾಧಿಸಿದೆ. ಅದೇ ರೀತಿ ಆಸ್ತಿ ತೆರಿಗೆ ಸೇರಿದಂತೆ ಎಲ್ಲ ರೀತಿಯ ಶುಲ್ಕ ಮತ್ತು ತೆರಿಗೆಗಳನ್ನು ಕಟ್ಟುನಿಟ್ಟಾಗಿ ಸಂಗ್ರಹಿಸಲು ತಿರ್ಮಾನ ಮಾಡಿರುವುದರಿಂದ ವರಮಾನದಲ್ಲಿ ಹೆಚ್ಚಳವಾಗುವ ಸಾಧ್ಯತೆಯು ಇದೆ.

ಸ್ಟ್ಯಾಂಡರ್ಡ್ ಡಿಡಕ್ಷನ್ ಹೆಚ್ಚಳ

ಸ್ಟ್ಯಾಂಡರ್ಡ್ ಡಿಡಕ್ಷನ್ (Statndard Deduction) ಅನ್ನು 50,000 ರೂ. ನಿಂದ 1 ಲಕ್ಷಕ್ಕೆ ಹೆಚ್ಚಿಸುವಂತೆ ಈಗಾಗಲೇ ಕೆಪಿಎಂಜಿ ಆಗ್ರಹಿಸಿದೆ. ಹಣದುಬ್ಬರ , ಬೆಲೆ ಏರಿಕೆ ಇಂದಾಗಿ ಕಡಿತವನ್ನು 1 ಲಕ್ಷ ರೂ.ಗೆ ಹೆಚ್ಚಿಸಬೇಕು. ಸದ್ಯ ಇದರ ಮಿತಿ 50000 ಇದ್ದು ಇದನ್ನು 1 ಲಕ್ಷಕ್ಕೆ ಹೆಚ್ಚಿಸಬೇಕು ಎಂಬುದು ಎಂಬ ಅಭಿಪ್ರಾಯವಾಗಿದೆ.

advertisement

ಬಜೆಟ್ ನಲ್ಲಿ ವಿವರ

ಅದೇ ರೀತಿ ಸರ್ಕಾರಕ್ಕೆ ಒಂದು ವರ್ಷದಲ್ಲಿ ಬರಬಹುದಾದ ಎಲ್ಲಾ ಆದಾಯಗಳ ಮಾಹಿತಿ, ವೆಚ್ಚಗಳ ಪಟ್ಟಿ, ಯಾವ್ಯಾವ ಕ್ಷೇತ್ರಕ್ಕೆ ಎಷ್ಟೆಷ್ಟು ಹಣ ವಿನಿಯೋಗ ಮಾಡಲಾಗುತ್ತದೆ, ಎಂಬ ವಿವರವೂ ಬಜೆಟ್​ನಲ್ಲಿ ಇರಲಿದೆ. ವೇತನದಾರರಿಂದ ಹಿಡಿದು ಮಹಿಳೆಯರು, ರೈತರು, ಯುವಕರು, ಸೇರಿದಂತೆ ಈ ಬಜೆಟ್‌ ಮೇಲೆ ಅಪಾರ ನಿರೀಕ್ಷೆ ಹೊಂದಿದ್ದಾರೆ.

ನಿರೀಕ್ಷೆ ಹೆಚ್ಚಾಗಿದೆ

ಅದೇ ರೀತಿ ಇದು ಚುನಾವಣಾ ವರ್ಷವಾಗಿರುವುದರಿಂದ ಈ ಬಜೆಟ್‌ನಲ್ಲಿ ಸರ್ಕಾರ ತನ್ನ ಓಟ್‌ ಬ್ಯಾಂಕ್‌ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ಘೋಷಣೆಗಳನ್ನು ಮಾಡುವ ನಿರೀಕ್ಷೆಯು ಜನರಲ್ಲಿ ಇದೆ. 2023-24ರ ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿತ್ತು. ಹೆಚ್ಚಿನ ತೆರಿಗೆ ವಿನಾಯಿತಿಯನ್ನು ಘೋಷಿಸಿತ್ತು. ಈ ಬಾರಿ ಏನೆಲ್ಲಾ ಬದಲಾವಣೆ ಇದೆ ಎಂಬುದರ ಬಗ್ಗೆ ಸರಕಾರದಿಂದ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.

advertisement

Leave A Reply

Your email address will not be published.