Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ ಏಳನೇ ಕಂತಿನ ಹಣ ಬಂದಿಲ್ಲವೇ? ಈ ಕೆಲಸ ತಪ್ಪದೆ ಮಾಡಿ

advertisement

ಚುನಾವಣೆ ಪ್ರಣಾಳಿಕೆ ಯಂತೆ ರಾಜ್ಯ ಸರಕಾರದ ಎಲ್ಲ ಗ್ಯಾರಂಟಿ ಯೋಜನೆ ಪ್ರಾರಂಭ ಗೊಂಡಿದ್ದು ಜನರು ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲಿ ಮುಖ್ಯವಾಗಿ ಹೆಚ್ಚು ಪ್ರಚಲಿತದಲ್ಲಿರುವ ಯೋಜನೆ ಗೃಹಲಕ್ಷ್ಮಿ ಯಾಗಿದೆ. ಮಹೀಳೆಯರಿಗೆ ಹೆಚ್ಚು ಒತ್ತು ನೀಡುವಲ್ಲಿ ಮತ್ತು ಆರ್ಥಿಕವಾಗಿ ಮಹೀಳೆಯರನ್ನು ಬೆಂಬಲಿಸುವ ನಿಟ್ಟಿನಲ್ಲಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಜಾರಿಗೆ ತರಲಾಗಿದೆ. ಈ ಯೋಜನೆಗೆ ನೊಂದಣಿ ಮಾಡಿದ ಹೆಚ್ಚಿನ ‌ಮಹೀಳೆಯರಿಗೆ ಈ ಹಣ ಜಮಾ ವಾಗಿದ್ದು ಅರ್ಜಿ ಸಲ್ಲಿಕೆಯಲ್ಲಿ ಅಡೆತಡೆ ಇದ್ದ ಕೆಲವು ಮಹೀಳೆಯರಿಗೆ ಹಣ ಇನ್ನೂ ಕೂಡ ಜಮೆಯಾಗಿಲ್ಲ. ಈವರೆಗೆ ಒಟ್ಟು ಆರು ಕಂತಿನ ಹಣ ಜಮೆಯಾಗಿದ್ದು ಏಳನೇ ಕಂತಿನ ಹಣ ಕೆಲವು ಮಹೀಳೆಯರಿಗೆ ಇನ್ನಷ್ಟೆ ಖಾತೆಗೆ ಬರಬೇಕಿದೆ.

ಯಾವಾಗ ಹಣ ಜಮೆಯಾಗಲಿದೆ?

 

 

ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ‌ ಸರಿ ಇದ್ದವರಿಗೆ ಮಾತ್ರ ಆರು ಕಂತಿನ ವರೆಗೆ ಹಣ ಜಮೆ ಮಾಡಿದ್ದು ಏಳನೆ ಕಂತಿನ ಹಣ ಕೂಡ ಸರಕಾರ ಬಿಡುಗಡೆ ಮಾಡಿದೆ. ಈಗಾಗಲೇ ಕೆಲವು ಜಿಲ್ಲೆಯ ಮಹೀಳೆಯರಿಗೆ ಏಳನೇ ಕಂತಿನ ಹಣ ಖಾತೆಗೆ ಬಂದಿದ್ದು , ಮಾರ್ಚ್ ಹದಿನೈದರ ಒಳಗೆ ಎಲ್ಲಾ ನೊಂದಣಿ ಮಾಡಿದ ಮಹೀಳೆಯರಿಗೆ ಹಣ ಖಾತೆಗೆ ಬಂದು ತಲುಪಲಿದೆ ಎಂದು ಮಹೀಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಸ್ಪಷ್ಟನೆ ನೀಡಿದ್ದಾರೆ.

advertisement

ಹಣ ಬಾರದೇ ಇದ್ದಲ್ಲಿ ಹೀಗೆ ಮಾಡಿ:

ಒಂದು ವೇಳೆ ನಿಮಗೆ ಒಂದು‌ಕಂತಿನ ಹಣ ಕೂಡ ಬಂದಿಲ್ಲ ಎಂದಾದರೆ ನೀವು ನಿಮ್ಮ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ ಮತ್ತೆ ನೊಂದಣಿ ಮಾಡಬಹುದಾಗಿದೆ. ಬ್ಯಾಂಕ್ ಖಾತೆ ಸಮಸ್ಯೆ ಇದ್ದಲ್ಲಿ ಹೊಸದಾಗಿ ಪೋಸ್ಟ್‌ ಆಫೀಸ್ (Post Office) ನಲ್ಲಿ ಖಾತೆ ತೆರೆಯುವ ಮೂಲಕ ಮತ್ತೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಶಿಬಿರ ಆಯೋಜನೆ:

ಗೃಹಲಕ್ಷ್ಮಿ ಯೋಜನೆಯ ಹಣ (Gruha Lakshmi Money) ಪಡೆಯಲು ಹೆಚ್ಚಿನ ಮಹೀಳೆಯರು ಸಮಸ್ಯೆ ಎದುರಿಸುತ್ತಿರುವುದು ಕಂಡು ಬಂದಿದ್ದು, ಈ ತೊಂದರೆಗಳನ್ನು ಪರಿಹರಿಸಲು ಸರಕಾರ ಕೆಲವೊಂದು ಕ್ರಮಗಳನ್ನು ಕೈಗೊಳ್ಳುತ್ತಿದೆ. ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಫಲಾನುಭವಿಗಳಿಗೆ ಹಣ ಜಮಾವಣೆ ಮಾಡಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಶಿಬಿರ ಕೈಗೊಳ್ಳುವ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನ ಪಡುತ್ತಿದೆ.

advertisement

Leave A Reply

Your email address will not be published.