Karnataka Times
Trending Stories, Viral News, Gossips & Everything in Kannada

RBI: ದೇಶದ ಈ ಪ್ರಮುಖ 2 ಬ್ಯಾಂಕ್ ಗಳಲ್ಲಿ ಹಣ ಇಟ್ಟವರಿಗೆ ಮಹತ್ವದ ಮಾಹಿತಿ

advertisement

ಇಂದು ಬ್ಯಾಕಿಂಗ್ ‌ಕ್ಷೇತ್ರದಲ್ಲಿ ಜನರ ಹಣದ ವ್ಯವಹಾರ ,ಚಟುವಟಿಕೆಗಳು ಹೆಚ್ಚಾಗುತ್ತಿವೆ. ಆರ್ಥಿಕತೆಯ ಅಭಿವೃದ್ಧಿ ಗಾಗಿ ಬ್ಯಾಂಕಿಂಗ್‌ ಕ್ಷೇತ್ರದ ವಿಸ್ತರಣೆಗಾಗಿ ಹಾಗೂ ಖಾಸಗಿ ಕ್ಷೇತ್ರದ ಬ್ಯಾಂಕ್‌ಗಳ ಜೊತೆಗೆ ಪ್ರತಿಸ್ಪರ್ಧಿ ನೀಡಲು ಬ್ಯಾಂಕ್‌ಗಳನ್ನು ಒಂದಕ್ಕೊಂದು ವಿಲೀನಗೊಳಿಸಲಾಗಿದೆ.ಕೇಂದ್ರ ಸರಕಾರದ ಮೂಲಕ ಕೆಲವೊಂದು ಬ್ಯಾಂಕ್ ಗಳ ವಿಲೀನವನ್ನು ಕೈಗೊಳ್ಳಲಾಗಿದ್ದು ಮೊದಲು ಎಸ್‌ಬಿಐ ಹಾಗೂ ಅದರ ಸಹವರ್ತ ಬ್ಯಾಂಕುಗಳ ವಿಲೀನ ಮಾಡಲಾಯಿತು. ನಂತರದಲ್ಲಿ ಬ್ಯಾಂಕ್ ಆಫ್ ಬರೋಡಾ (Bank Of Baroda), ಮತ್ತು ವಿಜಯಾ ಬ್ಯಾಂಕುಗಳನ್ನು‌ ಕೂಡ ವಿಲೀನಗೊಳಿಸಿತ್ತು.

ಪರಿಣಾಮವೇನು?

ಬ್ಯಾಂಕ್ ಗಳ ವಿಲೀನದಿಂದ ಈಗಾಗಲೇ ಬ್ಯಾಂಕ್‌ ಶಾಖೆಗಳ ಸಂಖ್ಯೆ ಹೆಚ್ಚಾಗುತ್ತದೆ. ಬ್ಯಾಂಕಿಂಗ್‌ ಸಂಬಂಧಿ ಕೆಲಸಗಳು ಸ್ವಲ್ಪ ಸುಲಭವಾಗಿ ಬಿಟ್ಟಿವೆ. ವಿಲೀನದ ಬಳಿಕ‌ ಠೇವಣಿಗಳು ಮತ್ತು ಬಡ್ಡಿ ದರಗಳಲ್ಲಿ ಬದಲಾವಣೆ ಕೂಡ ಕಂಡು ಬಂದಿದೆ.

RBI ಸೂಚನೆ:

 

 

advertisement

ಇದೀಗ ಎರಡು ಬ್ಯಾಂಕ್‌ಗಳನ್ನು ವಿಲೀನಗೊಳ್ಳಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅನುಮೋದ ನೆಯನ್ನು ನೀಡಿದ್ದು ಬ್ಯಾಂಕಿಂಗ್ ನಿಯಂತ್ರಣ ಕಾಯಿದೆ, 1949 ರ ಸೆಕ್ಷನ್ 44A ನ ಉಪ-ವಿಭಾಗ (4) ಅಡಿಯಲ್ಲಿ ಈ ವಿಲೀಕರಣ ಮಾಡಲು ಸೂಚನೆಯನ್ನು‌ ನೀಡಿದೆ.

ಯಾವ ಬ್ಯಾಂಕ್ ವಿಲೀನ?

ಫಿನ್​ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ‌(Fincare Small Finance Bank) ಮತ್ತು ಎಯು ಸ್ಮಾಲ್ ಫೈನಾನ್ಸ್​ ಬ್ಯಾಂಕ್​ (AU Small Finance Bank) ಈ ಎರಡು ಬ್ಯಾಂಕ್ ವಿಲೀನ ಆಗಲಿವೆ ಎಂದು RBI ತಿಳಿಸಿದೆ. ಏಪ್ರಿಲ್ 1, 2024ರಂದು ಈ ಎರಡೂ ಬ್ಯಾಂಕ್​ಗಳು ವಿಲೀನ ಆಗಲಿದ್ದು Fincare ಮತ್ತು SFB ಯ ಎಲ್ಲಾ ಶಾಖೆಗಳು AU SFB ಯ ಶಾಖೆಗಳಾಗಿ ಕೆಲಸ ಮಾಡಲಿದೆ.

ಈ ಸಮಸ್ಯೆ ಇಲ್ಲ:

ಬ್ಯಾಂಕ್ ಗಳು ವಿಲೀನ ಗೊಂಡರು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿನ ಗ್ರಾಹಕರ ಹಣ, ವಹಿವಾಟುಗಳು ಸುರಕ್ಷಿತವಾಗಿಯೇ ಇರುತ್ತದೆ. ಇದರಿಂದ ಯಾವುದೇ ಸಮಸ್ಯೆ ಇಲ್ಲ, ಇನ್ನು ಬ್ಯಾಂಕುಗಳು ವಿಲೀನವಾದ ನಂತರ ಬರುವ ಹೊಸ ಬ್ಯಾಂಕ್ ನೀಡುವ ಶುಲ್ಕ, ಶುಲ್ಕ ರಹಿತ ಸೇವೆಗಳು, ಠೇವಣಿ ಹಾಗೂ ಸಾಲದ ಬಡ್ಡಿ ದರ ಮುಂತಾದುವುಗಳನ್ನು ಗ್ರಾಹಕರು ತಿಳಿದು ಕೊಳ್ಳಬಹುದು.

advertisement

Leave A Reply

Your email address will not be published.