Karnataka Times
Trending Stories, Viral News, Gossips & Everything in Kannada

RBI: ಈ ಫೈನಾನ್ಸ್ ಸಂಸ್ಥೆಗೆ ಚಿನ್ನದ ಸಾಲ ನಿಷೇಧಿಸಿದ ಆರ್ ಬಿ ಐ! ಲೋನ್ ಮಾಡಿದವರು ಕೂಡಲೇ ತಿಳಿದುಕೊಳ್ಳಿ

advertisement

ನಮಗೆ ತುರ್ತು ಪರಿಸ್ಥಿತಿಯಲ್ಲಿ ಹಣದ ಅವಶ್ಯಕತೆ ಇದ್ದಾಗ ಬೇರೆ ಎಲ್ಲಾ ರೀತಿಯ ಸಾಲಕ್ಕಿಂತ ಚಿನ್ನವನ್ನು ಇಟ್ಟು ಸಾಲ ಪಡೆಯುವುದು ಬಹಳ ಸುಲಭ. ಯಾಕೆಂದರೆ, ಬ್ಯಾಂಕುಗಳಲ್ಲಿ ಯಾವುದೇ ರೀತಿಯ ಸಾಲ ಪಡೆಯುವಾಗ ಕ್ರೆಡಿಟ್ ಸ್ಕೋರ್ (Credit Score) ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಅದು ಕಡಿಮೆ ಇದ್ದರೆ ಸಾಲ ಸೌಲಭ್ಯ ಸುಲಭವಾಗಿ ಸಿಗುವುದಿಲ್ಲ ಆದರೆ ಚಿನ್ನ ನಿಮ್ಮ ಬಳಿ ಇದ್ದರೆ ಅದನ್ನೇ ಇಟ್ಟು ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೂ ಕೂಡ ತಕ್ಷಣಕ್ಕೆ ಸಾಲ ಪಡೆಯಬಹುದು.

ಚಿನ್ನದ ಸಾಲ (Gold Loan) ಅಥವಾ ಚಿನ್ನದ ಮೇಲಿನ ಸಾಲ (Loan) ಎಂದು ಕೇವಲ ಬ್ಯಾಂಕ್ ಗಳು ಮಾತ್ರವಲ್ಲದೆ, ಇತರ ಫೈನಾನ್ಸ್ ಕಂಪನಿಗಳು ಕೂಡ ನೀಡುತ್ತವೆ ಆದರೆ ಈಗ ಇಂತಹ ಒಂದು ಫೈನಾನ್ಸ್ ಕಂಪನಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನಿರ್ಬಂಧ ಹೇರಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ಜನರಿಗೆ ಚಿನ್ನದ ಮೇಲಿನ ಸಾಲವನ್ನು ಕೊಡಬಾರದು ಎಂದು ತಿಳಿಸಿದೆ.

IIFL FINANCE LTD ಮೇಲೆ ನಿರ್ಬಂಧ ಹೇರಿದ RBI:

 

 

ಇತ್ತೀಚಿಗೆ ಪೇಟಿಎಂ (Paytm) ಅಪ್ಲಿಕೇಶನ್ ಮೇಲೆ ನಿರ್ಬಂಧವನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ತಿಳಿಸಿದ ಕೆಲವು ನಿಯಮಗಳನ್ನ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಪೇಟಿಎಂ ಮೂಲಕ ಇನ್ನು ಮುಂದೆ ಗ್ರಾಹಕರು ಯಾವುದೇ ವ್ಯವಹಾರವನ್ನು ನಡೆಸದೇ ಇರುವಂತೆ ರಿಸರ್ವ್ ಬ್ಯಾಂಕ್ ತಿಳಿಸಿದೆ. ಅದೇ ರೀತಿ ಈಗ IIFL ಫೈನಾನ್ಸ್ ಕೂಡ ಕೆಲವು ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ದೊಡ್ಡ ನಿರ್ಧಾರವನ್ನು ಆರ್‌ಬಿಐ ಕೈಗೊಂಡಿದ್ದು ಚಿನ್ನದ ಮೇಲೆ ಸಾಲ ನೀಡುವ ಹಕ್ಕನ್ನು ಈ ಫೈನಾನ್ಸ್ ಕಂಪನಿಯಿಂದ ಹಿಂಪಡೆದುಕೊಂಡಿದೆ.

advertisement

ಚಿನ್ನದ ಸಾಲದ ಮೇಲೆ ಮಾತ್ರ ನಿಷೇಧ:

 

 

ಇನ್ನು, IIFL ಫೈನಾನ್ಸ್ ಕಂಪನಿಯ ಚಿನ್ನದ ಮೇಲಿನ ಸಾಲ ಕೊಡುವ ಪ್ರಕ್ರಿಯೆಯ ಮೇಲೆ ಮಾತ್ರ RBI ನಿಷೇಧ ಹೇರಿದೆ. ಅದನ್ನ ಹೊರತುಪಡಿಸಿ ಸಾಮಾನ್ಯ ಠೇವಣಿಗಳು ಇತರ ಸಾಲಗಳು ಹಾಗೂ ಉಳಿದ ಬ್ಯಾಂಕಿಂಗ್ ವ್ಯವಹಾರಗಳಿಗೆ ಸಂಬಂಧಪಟ್ಟ ಎಲ್ಲಾ ಚಟುವಟಿಕೆಗಳನ್ನು ಮುಂದುವರೆಸಲು ಆರ್‌ಬಿಐ ಅನುಮತಿ ನೀಡಿದೆ. ಆದರೆ ಈ ಫೈನಾನ್ಸ್ ನಲ್ಲಿ ಚಿನ್ನದ ಸಾಲದ ವ್ಯವಹಾರಗಳು ಮಾತ್ರ ನಿರ್ಬಂಧಿಸಲ್ಪಟ್ಟಿವೆ.

IIFL ಫೈನಾನ್ಸ್ ಕಂಪನಿ ಮೇಲೆ ನಿಷೇಧ ಯಾಕೆ?

RBI ನೀಡಿರುವ ಮಾಹಿತಿಯ ಪ್ರಕಾರ, IIFL ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಾರ್ಚ್ 31, 2023ರ ಕಂಪನಿಯ ಆರ್ಥಿಕ ಪರಿಸ್ಥಿತಿಯ ಪ್ರಕಾರ ಚಿನ್ನದ ಸಾಲ (Gold Loan) ದ ಪೋರ್ಟ್ ಪೋಲಿಯೋ ಮೇಲ್ವಿಚಾರಣೆಯಲ್ಲಿ ಸಮಸ್ಯೆ ಇದೆ. ಚಿನ್ನದ ಮೇಲಿನ ಸಾಲ ಮಂಜೂರಾತಿ ಅದಕ್ಕೆ ತೆಗೆದುಕೊಳ್ಳುವ ಸಮಯ ಡೀಫಾಲ್ಟ್ ಆಗಿದ್ದರೆ, ಚಿನ್ನದ ಶುದ್ಧತೆ ಮತ್ತು ತೂಕದ ಪರಿಶೀಲನೆ ಚಿನ್ನದ ಹರಾಜಿನ ಸಮಯದಲ್ಲಿ ಆಗುವ ಸಮಸ್ಯೆಗಳು ಹಾಗೂ ಅಕ್ರಮಗಳು, ಈ ಫೈನಾನ್ಸ್ ಕಂಪನಿಯ ಮೇಲೆ ಆರ್ ಬಿ ಐ ನಿರ್ಬಂಧ ಸೇರುವಂತೆ ಮಾಡಿವೆ.

ಗ್ರಾಹಕರ ಹಿತಾಸಕ್ತಿ ಕಾಯ್ದುಕೊಳ್ಳುವ ಸಲುವಾಗಿ ಆರ್‌ಬಿಐ ಈ ನಿಷೇಧ ಮಾಡಿದೆ ಎನ್ನಬಹುದು. ಹೀಗಾಗಿ ಇನ್ನು ಮುಂದೆ ಯಾವುದೇ ಫೈನಾನ್ಸ್ ಕಂಪನಿ ಅಥವಾ ಬ್ಯಾಂಕ್ ಗ್ರಾಹಕರಿಗೆ ತೊಂದರೆ ಉಂಟು ಮಾಡುವಂತೆ ಅಥವಾ ಆರ್ ಬಿ ಐ ನಿಯಮ ಉಲ್ಲಂಘನೆ ಆಗುವಂತೆ ನಡೆದುಕೊಂಡರೆ ಅಂತಹ ಕಂಪನಿಗಳ ಮೇಲೆ ಕೇಂದ್ರ ಬ್ಯಾಂಕ್ ನಿರ್ಬಂಧ ಹೇರಲಿದೆ.

advertisement

Leave A Reply

Your email address will not be published.