Karnataka Times
Trending Stories, Viral News, Gossips & Everything in Kannada

Radhika Merchant: ಅನಂತ್ ಅಂಬಾನಿ ಕೈ ಹಿಡಿಯಲಿರುವ ಲಕ್ಕಿ ಸ್ಟಾರ್ ರಾಧಿಕಾ ಮರ್ಚೆಂಟ್ ನಿಜಕ್ಕೂ ಯಾರು ಗೊತ್ತಾ?

advertisement

ಬಾಲಿವುಡ್ ಸೆಲೆಬ್ರಿಟಿಗಳೆಲ್ಲ ಸದ್ಯ ಅಂಬಾನಿ ಮನೆತನದ ಕಾರ್ಯಕ್ರಮದಲ್ಲಿ ಠಿಕಾಣಿ ಹೂಡಿದ್ದಾರೆ. ಕಳೆದ ಮೂರು ದಿನಗಳಿಂದ ಅದ್ದೂರಿಯಾಗಿ ಅನಂತ ಅಂಬಾನಿ ಹಾಗೂ ಅವರ ಭಾವಿ ಪತ್ನಿ ರಾಧಿಕಾ ಮರ್ಚೆಂಟ್ ಅವರ ಪ್ರೀ-ವೆಡ್ಡಿಂಗ್ ಸಂಗೀತ ಕಾರ್ಯಕ್ರಮ ಹಾಗೂ ಮತ್ತಿತರ ಸಮಾರಂಭಗಳು ನಡೆದು, ಈ ಐತಿಹಾಸಿಕ ಸಂಭ್ರಮಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು ಸಾಕ್ಷಿಯಾಗಿದ್ದಾರೆ.

“ನಾನು ನಿಜವಾಗಿ ತುಂಬಾನೇ ಲಕ್ಕಿ ರಾಧಿಕಾ ನನಗೆ ಹೇಗೆ ಸಿಕ್ಕಿದಳು ಎಂದು ನನಗೆ ಗೊತ್ತಿಲ್ಲ. ಏಳು ವರ್ಷಗಳ ಹಿಂದೆ ಭೇಟಿಯಾದ ಈ ಸಂಬಂಧ ನಿನ್ನೆ ಆರಂಭವಾಗಿದೆ ಎನ್ನುವಂತೆ ಇದೆ. ದಿನದಿಂದ ದಿನಕ್ಕೆ ನನ್ನ ಪ್ರೀತಿ ಆಳವಾಗಿ ಬೆಳೆಯುತ್ತಿದೆ” ಪ್ರಿ ವೆಡ್ಡಿಂಗ್ ಸಂದರ್ಭದಲ್ಲಿ ಭಾವಿ ಪತ್ನಿ ರಾಧಿಕಾ ಮರ್ಚೆಂಟ್ (Radhika Merchant) ಅವರ ಬಗ್ಗೆ ಅನಂತ ಅಂಬಾನಿ (Anant Ambani) ಅವರ ಮನದಾಳದ ಮಾತುಗಳು ಇವು. ಸಾವಿರಾರು ಜನ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಇತ್ತೀಚಿಗೆ ವಿವಾಹ ಪೂರ್ವ ಸಮಾರಂಭವನ್ನು ಗುಜರಾತ್ ನ ಜಾಮ್ ನಗರದಲ್ಲಿ ಅದ್ದೂರಿಯಾಗಿ ನೆರವೇರಿಸಲಾಗಿತ್ತು.

ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ (Mukesh Ambani) ಅವರ ಕಿರಿಯ ಪುತ್ರ ಅನಂತ ಅಂಬಾನಿ ಅವರ ವಿವಾಹಪೂರ್ವ ಸಮಾರಂಭದಲ್ಲಿ ಜಾಗತಿಕ ಮಟ್ಟದ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಈ ಸಮಯದಲ್ಲಿ ಜಾಗತಿಕ ಟೆಕ್ ಕಂಪನಿಗಳ ಸಿಇಓ ಗಳು, ಪಾಪ್ ಸ್ಟಾರ್ ರೆಹನಾ (Rihanna) ಮತ್ತು Ivanka Trump (Daughter of former US President Donald Trump) ಕೂಡ ಅನಂತ ಅಂಬಾನಿ ಅವರ ವಿವಾಹ ಪೂರ್ವ ಸಮಾರಂಭಕ್ಕೆ ಆಗಮಿಸಿದ್ದರು.

ಸಮಾರಂಭದ ಹೈಲೈಟ್ಸ್:

 

 

ರಾಧಿಕಾ ಮರ್ಚೆಂಟ್ (Radhika Merchant) ಮತ್ತು ಅನಂತ್ ಅಂಬಾನಿ (Anant Ambani) ಇಬ್ಬರು 2022 ರಲ್ಲಿ ಜಿಯೋ ಓಲ್ಡ್ ಸೆಂಟರ್ ನಲ್ಲಿ ನಡೆದ Arangetram ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಒಂದು ವರ್ಷದ ಶಾಸ್ತ್ರೀಯ ಕಲೆಯ ತರಬೇತಿಯ ನಂತರ ಮೊದಲ ಸಾರ್ವಜನಿಕ ಪ್ರದರ್ಶನಕ್ಕೆ Arangetram ಎಂದು ಹೇಳಲಾಗುತ್ತದೆ.

 

advertisement

 

ಅನಂತ್ ಅಂಬಾನಿ ಅವರ ಕೈಹಿಡಿಯಲು ಸಜ್ಜಾಗಿರುವ ರಾಧಿಕಾ ಮರ್ಚೆಂಟ್ ಅವರು ಭರತನಾಟ್ಯ ಕಲಾವಿದೆ. ಹಾಗಾಗಿ ಅವರ ಮೊದಲ ಪ್ರದರ್ಶನಕ್ಕೆ ನೀತಾ ಅಂಬಾನಿ ಹಾಗೂ ಮುಕೇಶ್ ಅಂಬಾನಿ ಕೂಡ ಭಾಗವಹಿಸಿದ್ದರು. ನೀತ ಅಂಬಾನಿ ಅವರು ಶಾಸ್ತ್ರೀಯ ನೃತ್ಯಗಾರ್ತಿಯು ಆಗಿರುವುದರಿಂದ ರಾಧಿಕಾ ಮರ್ಚಂಟ್ ಅವರ ಸಮಾರಂಭದಲ್ಲಿ ಹೆಚ್ಚು ಉತ್ಸಾಹದಿಂದ ಪಾಲ್ಗೊಂಡಿದ್ದರು ಎನ್ನಬಹುದು.

ಈ ಸಂದರ್ಭದಲ್ಲಿ ಮಾತನಾಡಿದ್ದ ನೀತಾ ಅಂಬಾನಿ (Nita Ambani) ರಾಧಿಕಾ ಅವರನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಿ, “ನಾನು ಮೊದಲ ಬಾರಿಗೆ ರಾಧಿಕಾ ಅವರನ್ನು ಭೇಟಿ ಆದಾಗ ಅನಂತ್ಗೆ ಉತ್ತಮ ಜೀವನ ಸಂಗಾತಿ ಎಂದು ಅನಿಸಿತ್ತು, ನನ್ನಂತೆ ನೃತ್ಯವನ್ನು ಇಷ್ಟ ಪಡುವ ಮಗಳು ನಮ್ಮ ಕುಟುಂಬವನ್ನು ಸೇರುತ್ತಿದ್ದಾಳೆ ಎಂದು ಖುಷಿಯಾಗಿತ್ತು. ಅಂಬಾನಿ ಕುಟುಂಬಕ್ಕೆ ರಾಧಿಕಾ ಅವರನ್ನು ಮಗಳಾಗಿ ಪ್ರೀತಿ ತುಂಬಿದ ಹೃದಯದಿಂದ ಸ್ವಾಗತಿಸುತ್ತೇನೆ” ಎಂದು ತಮ್ಮ ಮನದಾಳದ ಮಾತುಗಳನ್ನ ನೀತ ಅಂಬಾನಿ ಹೇಳಿದ್ದು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.

ಇಷ್ಟಕ್ಕೂ ರಾಧಿಕಾ ಮರ್ಚೆಂಟ್ ಯಾರು?

 

 

ಕೋಟ್ಯಾಧಿಪತಿ ಅನಂತ ಅಂಬಾನಿ ಅವರ ಜೊತೆಗೆ ಸಪ್ತಪದಿ ತುಳಿಯಲು ಮುಂದಾಗಿರುವ ರಾಧಿಕಾ ಮರ್ಚೆಂಟ್ ನಿಜಕ್ಕೂ ಯಾರು ಗೊತ್ತಾ? ರಾಧಿಕಾ (Radhika Merchant) ಅವರಿಗೆ ಈಗ 29 ವರ್ಷ ವಯಸ್ಸು ಅವರು ಜಾಗತಿಕ ಔಷಧ ತಯಾರಿಕಾ ಕಂಪನಿ ಎನ್ಕೋರ್ ಹೆಲ್ತ್ ಕೇರ್ ಸಿ ಇ ಓ (Encore Healthcare CEO) ಆಗಿರುವ ವೀರೇನ್ ಮರ್ಚೆಂಟ್ (Shri Viren Merchant) ಹಾಗೂ ಶೈಲಾ ಮರ್ಚೆಂಟ್ (Shaila Merchant) ಅವರ ಪುತ್ರಿ. ರಾಧಿಕಾ ಮರ್ಚೆಂಟ್ ಅವರು ಕ್ಯಾತೆಡ್ರಲ್ ಮತ್ತು ಜಾನ್ ಕಾನನ್ ಸ್ಕೂಲ್ನಲ್ಲಿ ಹಾಗೂ ಏಕೊಲ್ ವರ್ಡ್ ಸ್ಕೂಲ್ ಮುಂಬೈನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಅಷ್ಟೇ ಅಲ್ಲ ನ್ಯೂ ಯಾರ್ಕ್ ಯುನಿವರ್ಸಿಟಿಯಲ್ಲಿ ರಾಜಕೀಯ ವಿಜ್ಞಾನ ಪದವಿ ಪಡೆದಿದ್ದಾರೆ.

ಈಗಾಗಲೇ ರಾಧಿಕಾ ಮರ್ಚೆಂಟ್ ಪ್ರತಿಷ್ಠಿತ ಕಂಪನಿಗಳಲ್ಲಿ ಅಡ್ವೈಸರ್ ಆಗಿ ಕೆಲಸ ನಿರ್ವಹಿಸಿದ್ದಾರೆ. ವ್ಯಾಪಾರದ ಹೊರತಾಗಿ ಆರ್ಥಿಕ ಸಬಲೀಕರಣ, ಶಿಕ್ಷಣ, ಆರೋಗ್ಯ, ಕಲೆ ಮೊದಲಾದ ಕ್ಷೇತ್ರಗಳಲ್ಲಿಯೂ ರಾಧಿಕಾ ಆಸಕ್ತಿ ಹೊಂದಿದ್ದಾರೆ. ಇನ್ನು ರಾಧಿಕಾ ವಿವಾಹ ಪೂರ್ವದ ಸಮಾರಂಭದಲ್ಲಿ ಮಾತನಾಡಿ ಅನಂತ ಅಂಬಾನಿ ಹಾಗೂ ನಾನು ಜಾಮ್ ನಗರದಲ್ಲಿಯೆ ಭೇಟಿಯಾಗಿದ್ದು ಇದು ನಾನು ಬೆಳೆದ ಸ್ಥಳ ನಾವಿಬ್ಬರು ಸ್ನೇಹಿತರಾಗಿ ಪ್ರೀತಿಸಿದ ಸ್ಥಳ ನಮ್ಮ ಸಂಬಂಧ ಬಲಗೊಂಡಿದ್ದು ಇಲ್ಲೇ ನನಗೆ ಅನಂತ ಬಗ್ಗೆ ಸಾಕಷ್ಟು ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಐತಿಹಾಸಿಕ ವಿವಾಹ ಮಹೋತ್ಸವ ಇನ್ನು ಒಂದೆರಡು ತಿಂಗಳುಗಳಲ್ಲಿ ಜರುಗಲಿದೆ.

advertisement

Leave A Reply

Your email address will not be published.