Karnataka Times
Trending Stories, Viral News, Gossips & Everything in Kannada

Gold Price: ಇನ್ಮೇಲೆ ಪಾತಾಳಕ್ಕಿಳಿಯಲಿದೆ ಬಂಗಾರದ ಬೆಲೆ! ದೊಡ್ಡ ಸಿಹಿಸುದ್ದಿ

advertisement

ವಿಶ್ವದ ಅತ್ಯಂತ ದುಬಾರಿ ಲೋಹಗಳ ಪೈಕಿ ಚಿನ್ನ ಕೂಡ ಒಂದು. ಚಿನ್ನ ಉತ್ಪಾದನೆ ಅಷ್ಟು ಸುಲಭವಲ್ಲ. ಯಾಕಂದ್ರೆ ಭೂಮಿಯ ಆಳದಲ್ಲಿ ಚಿನ್ನವನ್ನು ಅಗೆದು ತೆಗೆಯಬೇಕು ಹಾಗೂ ಅದರ ಮೂಲ ಸ್ವರೂಪದಲ್ಲಿ ಚಿನ್ನಾಭರಣ ತಯಾರಿಸಲು ಬಳಸಲು ಸಾಧ್ಯವಿಲ್ಲ .ಹಾಗಾಗಿ ಇತ್ತೀಚಿನ ದಿನಗಳಲ್ಲಿ ಚಿನ್ನಾಭರಣದ ಬೆಲೆ ಕೂಡ ಅತ್ಯಂತ ಜಾಸ್ತಿಯಾಗಿದೆ. ಚಿನ್ನದ ದರ (Gold Price) ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ನಾವು ಹೇಗಪ್ಪಾ ಚಿನ್ನ ಖರೀದಿ ಮಾಡುವುದು ಎಂದುಕೊಳ್ಳುವವರಿಗೆ ಇಲ್ಲೊಂದು ಗುಡ್ ನ್ಯೂಸ್ ಇದೆ.

ಹೌದು, ವಿಜ್ಞಾನಿಗಳು ಹೊಸದೊಂದು ಚಿನ್ನ ಉತ್ಪಾದನೆ ಮಾಡುವ ಮಾರ್ಗವನ್ನು ಕಂಡುಹಿಡಿದಿದ್ದಾರೆ ಎನ್ನುವ ಸುದ್ದಿ ಲಭ್ಯವಾಗಿದೆ. ಇದೇನಾದರೂ ಸಕ್ಸಸ್ ಆದರೆ ಅತಿ ಅಗ್ಗ ದ ಬೆಲೆಯಲ್ಲಿ ಚಿನ್ನ (Gold) ಸಿಗಬಹುದು ಪರಿಸರ ಸ್ನೇಹಿ ಆಗಿರುವ ಚಿನ್ನವನ್ನ ತಯಾರಿಸುವ ಮೆಥಡ್ ಅನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ ಅದೇನು ಗೊತ್ತಾ ಹೇಳುತ್ತೇವೆ ಮುಂದೆ ಓದಿ.

ತ್ಯಾಜ್ಯದಿಂದ ಚಿನ್ನ ತಯಾರಿ:

 

 

ಹೌದು ವಿಜ್ಞಾನಿಗಳು ಎಲೆಕ್ಟ್ರಾನಿಕ್ ತ್ಯಾಜ್ಯದಿಂದ ಚಿನ್ನ ತಯಾರಿಸುವುದು ಹಾಗೂ ಮರುಬಳಕೆ ಮಾಡುವ ವಿಧಾನವನ್ನು ಕಂಡುಹಿಡಿದಿದ್ದಾರೆ ಇದರಿಂದಾಗಿ ಪರಿಸರ ಸ್ನೇಹಿಯಾಗಿರುವ ಅತಿ ಅಗ್ಗದ ಚಿನ್ನ ಇನ್ನು ಮುಂದೆ ಜನರ ಕೈ ಸೇರುವ ಸಾಧ್ಯತೆ ಇದೆ. ಎಲೆಕ್ಟ್ರಾನಿಕ್ ತ್ಯಾಜ್ಯದಿಂದ ಹೊರ ತೆಗೆಯುವಂತಹ ಆವಿಷ್ಕಾರ ಗೋಲ್ಡ್ ಬಿಸಿನೆಸ್ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ.

advertisement

ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ನಿಮ್ಮನ್ನು ಕಾಡಬಹುದು. ಸುಮಾರು 20 ಹಳೆಯ ಮದರ್ ಬೋರ್ಡ್ ಗಳಿಂದ 450 ಮಿಲಿ ಗ್ರಾಂ ಚಿನ್ನವನ್ನು ತಯಾರಿಸಲಾಗುತ್ತದೆಯಂತೆ. ಈ ತಂತ್ರಜ್ಞಾನದಿಂದ ಸಾಬೀತಾಗಿರುವ ವಿಷಯ ಏನೆಂದರೆ, ಖರ್ಚು ಮಾಡುವ ಪ್ರತಿ ಡಾಲರ್ ಗೆ 50 ಡಾಲರ್ ಮೌಲ್ಯದ ಚಿನ್ನವನ್ನು ಪಡೆಯಬಹುದು.

ಪ್ರೋಟೀನ್ ಸ್ಪೋನ್ಜ್ (Protein Sponge) ಅನ್ನು ಬಳಸಿ ಇ- ತ್ಯಾಜ್ಯದಿಂದ ಚಿನ್ನವನ್ನು ಸಂಶೋಧಕರು ಹೊರ ತೆಗೆಯುವ ಪ್ರಯತ್ನ ಮಾಡಿದ್ದಾರೆ. ಈ ಸಂಶೋಧನೆಯಲ್ಲಿ ಬಹುತೇಕ ಯಶಸ್ಸನ್ನು ಕಂಡಿರುವ ವಿಜ್ಞಾನಿಗಳು 22 ಕ್ಯಾರೆಟ್ ಚಿನ್ನದ 450 m ಗಟ್ಟಿ ಚಿನ್ನವನ್ನು ತಯಾರಿಸಿದ್ದಾರೆ. ಈಗ ತಯಾರಿಸುತ್ತಿರುವ ಚಿನ್ನಕಿಂತ 50 ಪಟ್ಟು ಕಡಿಮೆ ವೆಚ್ಚದಲ್ಲಿ ಇ-ತ್ಯಾಜ್ಯದಿಂದ ಹೊರತೆಗೆಯಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಸಂಶೋಧನೆಯನ್ನು ಹೇಗೆ ಮಾಡಿದರು?

ವಿಜ್ಞಾನಿಗಳು ಎಲೆಕ್ಟ್ರಾನಿಕ್ ತ್ಯಾಜ್ಯದಿಂದ ಚಿನ್ನವನ್ನು ಹೊರ ತೆಗೆಯಲು ಇ – ತ್ಯಾಜ್ಯವನ್ನು 550 ರಿಂದ 700 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಎರಡರಿಂದ ಮೂರು ಗಂಟೆಗಳ ಕಾಲ ಬಿಸಿ ಮಾಡುತ್ತಾರೆ ನಂತರ ಪ್ರೋಟೀನ್ ಸ್ಪಾಂಜ್ ಆಗಿ ಪರಿವರ್ತಿಸಲು ಆಮ್ಲಿಯ ಸ್ಥಿತಿಯಲ್ಲಿ ಒಣಗಿಸಲಾಗುತ್ತದೆ. ಬಳಿಕ ಪ್ರೋಟೀನ್ ಸ್ಪೋನ್ಜ್ ಅನ್ನು ಬಿಸಿ ಮಾಡಿ ಚಿನ್ನದ ಅಯಾನುಗಳನ್ನು ತುಂಡುಗಳಾಗಿ ಪರಿವರ್ತಿಸಲಾಗುತ್ತದೆ. ಅಧ್ಯಯನದ ಪ್ರಕಾರ ಇದರಲ್ಲಿ ಶೇಕಡ 91% ನಷ್ಟು ಚಿನ್ನ ಇದ್ದು ಅದು 22 ಕ್ಯಾರೆಟ್ ಗಳಿಗೆ ಸಮನಾಗಿದೆ ಎಂದು ಹೇಳಲಾಗಿದೆ ಉಳಿದ 9% ನಷ್ಟು ತಾಮ್ರವಾಗಿದೆ.

ಪ್ರಪಂಚದಲ್ಲಿ 50 ಮಿಲಿಯನ್ ಗಳಿಗಿಂತಲೂ ಹೆಚ್ಚಿನ ಎಲೆಕ್ಟ್ರಾನಿಕ್ ತ್ಯಾಜ್ಯ ಪ್ರತಿವರ್ಷ ಉತ್ಪಾದನೆಯಾಗುತ್ತದೆ. ಹಾಗಾಗಿ ಇದರಿಂದ ಚಿನ್ನ ತಯಾರಿಕೆ ಏನಾದರೂ ಸಂಪೂರ್ಣ ಯಶಸ್ವಿಯಾದರೆ ಪರಿಸರ ಸ್ನೇಹಿ ಚಿನ್ನ ಉತ್ಪಾದನೆ ಆರಂಭವಾಗುವುದು ಮಾತ್ರವಲ್ಲದೆ, ಈ ತ್ಯಾಜ್ಯ ಸದ್ಬಳಕೆ ಆಗುತ್ತದೆ ಹಾಗೂ ಕಡಿಮೆ ವೆಚ್ಚದಲ್ಲಿ ಚಿನ್ನ ಉತ್ಪಾದನೆಯಾಗುತ್ತದೆ.

advertisement

Leave A Reply

Your email address will not be published.