Karnataka Times
Trending Stories, Viral News, Gossips & Everything in Kannada

T20 World Cup 2024: ಈ ಬಾರಿಯ ಟಿ 20 ವಿಶ್ವಕಪ್ ನಲ್ಲಿ ಏಕಾಂಗಿಯಾಗಿ ಭಾರತಕ್ಕೆ ಕಪ್ ಗೆಲ್ಲಿಸಿಕೊಡಲಿದ್ದಾನೆ ಈ ಆಟಗಾರ

advertisement

ಇನ್ನೇನು ಟಿ20 ವಿಶ್ವಕಪ್ ಸದ್ಯದಲ್ಲೇ ಆರಂಭ ಆಗಲಿದೆ. ಭಾರತೀಯ ತಂಡದಲ್ಲಿ ಭಾರತದ ಹೊಸ ಫಿನಿಷರ್ ಎಂದೇ ಕರೆಸಿಕೊಳ್ಳುತ್ತಿರುವ ರಿಂಕು ಸಿಂಗ್ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದಾರೆ ಎಂಬ ವರದಿಗಳು ಕೇಳಿ ಬರುತ್ತಿವೆ. ಈ ಸುದ್ದಿ ಹೌದು ಎಂದಾದಲ್ಲಿ ಯುವ ಆಟಗಾರನ ಶ್ರಮಕ್ಕೆ ಸಿಕ್ಕ ಬೆಲೆ ಎಂದೇ ಹೇಳಬಹುದು.

ಟೀಮ್ ಇಂಡಿಯಾದ ಹೊಸ ಫಿನಿಷರ್ ಎಂದೇ ಕರೆಸಿಕೊಳ್ಳುತ್ತಿರುವ ರಿಂಕು ಸಿಂಗ್ (Rinku Singh) ದೇಶಿಯ ಕ್ರಿಕೆಟ್ ಮತ್ತು IPL ಎರಡರಲ್ಲೂ ಅತ್ಯುತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇವರು 2023ರಲ್ಲಿ ಭಾರತ ತಂಡಕ್ಕೆ ಸೇರಿಕೊಂಡು ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ ಈಗ ಮುಂಬರುವ ವಿಶ್ವಕಪ್ ನಲ್ಲಿ ಕೂಡ ಇವರ ಹೆಸರು ಇದೆ ಎಂದು ವರದಿಗಳು ಹೇಳುತ್ತಿವೆ.

ರಿಂಕು ಸಿಂಗ್ ಹುಟ್ಟಿ ಬೆಳೆದಿದ್ದು ಉತ್ತರ ಪ್ರದೇಶದ ಆಲಿಘಡದಲ್ಲಿ. ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ರಿಂಕು ಸಿಂಗ್ ಆರಂಭದಲ್ಲಿ ಎಲ್ ಪಿ ಜಿ ಡಿಸ್ಟ್ರಿಬ್ಯೂಷನ್ ಕಂಪನಿಯಲ್ಲಿ ಕೂಡ ಕೆಲಸ ಮಾಡಿದ್ದರು. ಇದಾದ ನಂತರ ಉತ್ತರ ಪ್ರದೇಶದ ಪರವಾಗಿ ಕ್ರಿಕೆಟ್ ಆರಂಭ ಮಾಡಲು ಆರಂಭಿಸಿದ ರಿಂಕು ಸಿಂಗ್ (Rinku Singh) ಅವರ ಸಾಧನೆಗೆ ದೇಶದೆಲ್ಲೆಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು.

2018-19ರ ರಣಜಿ ಟ್ರೋಫಿ ಸೀಸನ್ ನಲ್ಲಿ ಉತ್ತರ ಪ್ರದೇಶದ ಪರವಾಗಿ ರಿಂಕು ಸಿಂಗ್ ಅವರು ಅತಿ ಹೆಚ್ಚು ರನ್ ಗಳಿಸಿದ್ದರು. ಅವರು ಆ ಸೀಸನ್ ಒಟ್ಟು 10 ಪಂದ್ಯಗಳಲ್ಲಿ 953 ರನ್ ಗಳನ್ನು ಕಲೆ ಹಾಕಿದ್ದರು. 2017ರಲ್ಲಿ ಕಿಂಗ್ಸ್ ಇಲೆವೆನ್ ತಂಡ ರಿಂಕು ಸಿಂಗ್ ಅವರನ್ನು IPL ಗಾಗಿ ಖರೀದಿಸಿತ್ತು. 2018ರ ರಣಜಿ ಟ್ರೋಫಿ ಸೀಸನ್ ನ ಬಳಿಕ ಕೋಲ್ಕತ್ತಾ ನೈಟ್ ರೈಡರ್ಸ್ ರಿಂಕು ಸಿಂಗ್ ಅವರನ್ನು 80 ಲಕ್ಷಕ್ಕೆ ಖರೀದಿಸಿತ್ತು.

 

advertisement

 

ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಪರ ಮೊದಲು ಆಟವಾಡಿದ್ದು 2023 ರಲ್ಲಿ ಹಾಗೂ ಇದು ಐರ್ಲೆಂಡ್ ವಿರುದ್ಧವಾಗಿತ್ತು. ಮೊದಲ ಪಂದ್ಯದಲ್ಲೇ ರಿಂಕು ಸಿಂಗ್ ಅವರಿಗೆ ರವೀಂದ್ರ ಜಡೇಜಾ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಯಂತಹ ಘಟಾನುಘಟಿ ಆಟಗಾರರೊಂದಿಗೆ ಆಡುವ ಅವಕಾಶ ಸಿಕ್ಕಿತ್ತು. ಇದರ ಬಳಿಕ ಈಗ ಟಿ ಟ್ವೆಂಟಿ ವಿಶ್ವ ಕಪ್ ನಲ್ಲಿ ಕೂಡ ಭಾರತದ ಪರ ಆಡುವ ಕನಸು ನನಸಾಗಲಿದೆ ಎನ್ನಲಾಗಿದೆ.

ಈ ಬಾರಿ ಟಿ ಟ್ವೆಂಟಿ ವಿಶ್ವಕಪ್ ಅನ್ನು USA ಮತ್ತು West Indies ಜಂಟಿಯಾಗಿ ಆಯೋಜನೆ ಮಾಡುತ್ತಿದೆ. 2 ಜೂನ್ ನಿಂದ ಆರಂಭವಾಗುವ ಟೂರ್ನಮೆಂಟ್ ನಲ್ಲಿ ಐರ್ಲ್ಯಾಂಡ್ ವಿರುದ್ಧ 5 ಜೂನ್ ನಂದು ಮೊದಲ ಪಂದ್ಯವನ್ನು ಆಡುವ ಮೂಲಕ ಭಾರತ ತನ್ನ ಅಭಿಯಾನವನ್ನು ಆರಂಭಿಸಲಿದೆ. ಎಲ್ಲಾ ಟೂರ್ನಮೆಂಟ್ ಗಳ ಮಹತ್ವದ ಪಂದ್ಯ ಎನ್ನಬಹುದಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಬಹು ನಿರೀಕ್ಷಿತ ಪಂದ್ಯ ಜೂನ್ 9ರಂದು ನ್ಯೂಯಾರ್ಕ್ ನಲ್ಲಿ ನಡೆಯಲಿದೆ.

ಟಿ20 ಪಂದ್ಯಗಳಲ್ಲಿ 15 ಪಂದ್ಯಗಳಲ್ಲಿ 176.24ರ ಸ್ಟ್ರೈಕ್ ರೇಟ್ ನೊಂದಿಗೆ 356 ರನ್ ಗಳನ್ನು ರಿಂಕು ಸಿಂಗ್ (Rinku Singh) ಗಳಿಸಿದ್ದಾರೆ. ಇವರ ಸರಾಸರಿ 89 ಆಗಿದೆ. ಈ ಅಂಕಿ ಅಂಶಗಳನ್ನು ನೋಡಿದಾಗ ಇವರಿಗೆ ಆಡುವ 11 ಜನಗಳ ಟೀಮ್ ನಲ್ಲಿ ಸ್ಥಾನ ಲಭಿಸುವುದು ಬಹುತೇಕ ಖಚಿತ ಎನ್ನಬಹುದು. ಆದರೆ ಭಾರತದಲ್ಲಿ ಇನ್ನೂ ಹಲವಾರು ಯುವ ತಾರೆಗಳು ಇರಬೇಕಾದರೆ ಕೊನೆಯದಾಗಿ ಆಡುವ ಅವಕಾಶ ಯಾವ 11 ಜನರಿಗೆ ಸಿಗಲಿದೆ ಎಂದು ಕಾದು ನೋಡಬೇಕು.

advertisement

Leave A Reply

Your email address will not be published.