Karnataka Times
Trending Stories, Viral News, Gossips & Everything in Kannada

Rohit Sharma: ರೋಹಿತ್ ಶರ್ಮಾ ಅವರನ್ನ ಕೇವಲ ನಾಯಕತ್ವದಿಂದ ಮಾತ್ರ ಅಲ್ಲ T20 ತಂಡದಿಂದಲೇ ಹೊರಹಾಕಿ ಎಂದ ಮಾಜಿ ಕ್ರಿಕೆಟಿಗ!

advertisement

ಸ್ನೇಹಿತರೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿಯ t20 ವಿಶ್ವಕಪ್ (T20 World Cup) ಜೂನ್ ತಿಂಗಳಿನಿಂದ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ದೇಶಗಳಲ್ಲಿ ಅದ್ದೂರಿಯಾಗಿ ಪ್ರಾರಂಭವಾಗಲಿದೆ. ವಿಶೇಷವಾಗಿ ಅಮೇರಿಕಾದಲ್ಲಿ ಈಬಾರಿಯ ಟಿ ಟ್ವೆಂಟಿ ವಿಶ್ವ ಕಪ್ ನಡೆಯುತ್ತಿರುವುದು ಕ್ರಿಕೆಟ್ ಅಭಿಮಾನಿಗಳ ಆಚರಿಗೆ ಕಾರಣವಾಗಿದೆ.

ಇದೇ ಕಾರಣಕ್ಕಾಗಿ ಮೇ 1ರ ಒಳಗೆ ಪ್ರತಿಯೊಂದು ನ್ಯಾಷನಲ್ ತಂಡಗಳು ತಮ್ಮ ಆಡುವ 15 ರ ಬಳಗದ ಲಿಸ್ಟ್ ಅನ್ನು ಅಧಿಕೃತವಾಗಿ ಹೊರ ಹಾಕಬೇಕು ಎನ್ನುವಂತಹ ನಿಯಮವನ್ನು ಕೂಡ ಈಗಾಗಲೇ ಐಸಿಸಿ (ICC) ಜಾರಿಗೆ ತಂದಿದೆ.

ಹೀಗಾಗಿ ಈ ಬಾರಿ ಟಿ20 ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಯಾರೆಲ್ಲಾ ಆಡಲಿದ್ದಾರೆ ಎನ್ನುವಂತಹ ಚರ್ಚೆಗಳು ಕೂಡ ಜೋರಾಗಿ ನಡೆಯುತ್ತಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಈಗ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ನಿರ್ದೇಶಕರೊಬ್ಬರು ರೋಹಿತ್ ಶರ್ಮಾ (Rohit Sharma) ಅವರ ಬಗ್ಗೆ ನೀಡಿರುವಂತಹ ಅಭಿಪ್ರಾಯ ಈಗ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಿದೆ.

ನಾಯಕತ್ವ ಮಾತ್ರ ಅಲ್ಲ ಟಿ ಟ್ವೆಂಟಿನಿಂದಲೇ ರೋಹಿತ್ ಶರ್ಮ ಅವರನ್ನು ಹೊರಹಾಕಿ ಎಂದ ಈ ವ್ಯಕ್ತಿ!

 

Image Source: CricXtasy

 

advertisement

ಹೌದು ನಾವು ಮಾತಾಡ್ತಿರೋದು ಕೊಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಮಾಜಿ ಡೈರೆಕ್ಟರ್ ಆಗಿರುವಂತಹ ಜೈ ಭಟ್ಟಾಚಾರ್ಯ ಅವರ ಬಗ್ಗೆ. ರೋಹಿತ್ ಶರ್ಮಾ ಅವರ ಬಗ್ಗೆ ಮಾತನಾಡುತ್ತಾ ಇವ್ರು ಕೇವಲ ನಾಯಕತ್ವ ಮಾತ್ರವಲ್ಲದೆ ಟಿ ಟ್ವೆಂಟಿ ನಲ್ಲಿ ಆಡೋದಕ್ಕೆ ಕೂಡ ರೋಹಿತ್ ಶರ್ಮ (Rohit Sharma) ಸರಿಯಾದ ಆಟಗಾರನಲ್ಲ ಎನ್ನುವ ರೀತಿಯಲ್ಲಿ ಇವರು ಕ್ರಿಕ್ ಬಝ್ ಗೆ ನೀಡಿರುವಂತಹ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ರೋಹಿತ್ ಶರ್ಮಾ ಅವರನ್ನು ನಾಯಕನನ್ನಾಗಿ ಮಾಡಿರುವ ಕಾರಣದಿಂದಾಗಿ ತಂಡದಲ್ಲಿ ಸಮಸ್ಯೆ ಉಂಟಾಗುತ್ತದೆ ಎಂಬುದಾಗಿ ಹೇಳುತ್ತಿದ್ದಾರೆ.

ಈ ಬಾರಿಯ t20 ವಿಶ್ವಕಪ್ ಗೆ ರೋಹಿತ್ ಶರ್ಮಾ (Rohit Sharma) ಅವರನ್ನೇ ನಾಯಕನನ್ನಾಗಿ ಮತ್ತೆ ಆಯ್ಕೆ ಮಾಡಿರುವುದು ತಂಡಕ್ಕೆ ಸಾಕಷ್ಟು ಸಮಸ್ಯೆಗಳನ್ನು ತಂದುಕೊಡಬಹುದು ಹಾಗೂ ಅವರೊಬ್ಬ ಉತ್ತಮ ನಾಯಕನ ಆಯ್ಕೆ ಅಲ್ಲ ಅನ್ನೋದಾಗಿ ಹೇಳಿದ್ದಾರೆ.

 

Image Source: Mint

 

ರೋಹಿತ್ ಶರ್ಮಾ ನಾಯಕನಾಗಿರುವ ಕಾರಣದಿಂದಾಗಿ ಅವರಿಗೆ ಓಪನಿಂಗ್ ಬ್ಯಾಟ್ಸ್ಮನ್ ಆಯ್ಕೆಯನ್ನು ನೀಡಲಾಗುತ್ತಿದೆ ಹೀಗಾಗಿ ಇವರ ಕಾರಣದಿಂದಾಗಿ ವಿರಾಟ್ ಕೊಹ್ಲಿ ಗಿಲ್ ಅಥವಾ ಯಶಸ್ವಿ ರವರ ನಡುವೆ ಒಬ್ಬರು ಹೊರಗೆ ಕುಳಿತುಕೊಳ್ಳಬೇಕಾಗಿ ಬರುತ್ತದೆ ಎಂಬುದಾಗಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರೋಹಿತ್ ಶರ್ಮ ಬದಲು ಬೂಮ್ರ ಅವರನ್ನು ನಾಯಕನನ್ನಾಗಿ ಮಾಡುವುದು ಉತ್ತಮವಾದ ಆಯ್ಕೆ ಎಂಬುದಾಗಿ ಅವರು ಪ್ರತಿಪಾದಿಸಿದ್ದಾರೆ.

ಇನ್ನು ರೋಹಿತ್ ಶರ್ಮ (Rohit Sharma) ಅವರು ನಾಯಕನಾಗಿ ಆಯ್ಕೆ ಆಗಿರುವುದು ಕೂಡ ಅವರು ಇನ್ನೇನು ಕೆಲವೇ ವರ್ಷಗಳಲ್ಲಿ ನಿವೃತ್ತಿಯನ್ನು ಪಡೆದುಕೊಳ್ಳಲಿದ್ದಾರೆ ಹೀಗಾಗಿ ತಮ್ಮ ಕರಿಯರ್ ಅನ್ನು ಕಪ್ ಗೆಲ್ಲುವ ಮೂಲಕ ಗುಡ್ ಅಂಡ್ ನೀಡುವ ಉದ್ದೇಶದಿಂದ ಈ ರೀತಿ ಮಾಡಿದ್ದಾರೆ ಅನ್ನೋದು ಇಲ್ಲಿ ಪ್ರಮುಖವಾಗಿ ಗಮನಿಸಬೇಕಾಗಿರುವ ವಿಚಾರ ಎಂದಿದ್ದಾರೆ. ಬೂಮ್ರ ಇವತ್ತಿಗೂ ಕೂಡ ಟಿ20 ವಿಶ್ವಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗುವುದಕ್ಕೆ ಉತ್ತಮ ಮಾಹಿತಿ ಎಂಬುದಾಗಿ ಜೈ ಭಟ್ಟಾಚಾರ್ಯ ಹೇಳಿದ್ದಾರೆ.

advertisement

Leave A Reply

Your email address will not be published.