Karnataka Times
Trending Stories, Viral News, Gossips & Everything in Kannada

Rohit Sharma: ನಿವೃತ್ತಿ ಹೊಂದಿರುವ ಈ ಆಟಗಾರ ಟಿ-20 ವಿಶ್ವಕಪ್ ಗೆ ಬರಬೇಕು ಅಂತ ಅಂದ ರೋಹಿತ್ ಶರ್ಮ!

advertisement

ಸದ್ಯದ ಮಟ್ಟಿಗೆ ಭಾರತೀಯ ನೆಲದಲ್ಲಿ ಇಡೀ ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವಂತಹ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಅದ್ದೂರಿಯಾಗಿ ನಡೆಯುತ್ತಿದೆ. ಈ ಬಾರಿ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅತ್ಯಂತ ಕಳಪೆ ಪ್ರದರ್ಶನವನ್ನು ತೋರ್ಪಡಿಸುವುದನ್ನ ಮುಂದುವರಿಸಿದೆ. ಅದೆಲ್ಲ ಮರೆತು ಮುಂದಿನ ಕ್ರಿಕೆಟ್ ಅನ್ನು ನೋಡುವುದಾದರೆ ಜೂನ್ ಒಂದನೇ ತಾರೀಖಿನಿಂದ ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ನಲ್ಲಿ ಈ ಬಾರಿಯ T20 ವಿಶ್ವಕಪ್ ಪ್ರಾರಂಭವಾಗಲಿದೆ.

ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಈ ಬಾರಿ ನಡೆಯಲಿರುವಂತಹ ಸಾಧನೆ ಮಾಡಬಹುದು ಎನ್ನುವಂತಹ ನಿರೀಕ್ಷೆ ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಲ್ಲಿದೆ.

ಈ ನಿವೃತ್ತ ಕ್ರಿಕೆಟಿಗ ಬರಲಿ ಎಂದು ಹಾರೈಸಿದ ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ

ಕಳೆದ ಬಾರಿ ಭಾರತದಲ್ಲಿ ಏಕದಿನ ವಿಶ್ವ ಕಪ್ ನಡೆದಾಗ ಇಡೀ ಆಡಿದಂತಹ ಎಲ್ಲಾ ತಂಡಗಳಲ್ಲಿ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಬಲಿಷ್ಠ ತಂಡವಾಗಿತ್ತು ಆದರೂ ಕೂಡ ಫೈನಲ್ ನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಕಪ್ ಗೆದ್ದು ಹೋಯಿತು. ಈ ಬಾರಿ ಈ ತಪ್ಪು ಮರುಕಳಿಸಬಾರದು ಎನ್ನುವಂತಹ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ಮ್ಯಾನೇಜ್ಮೆಂಟ್ ಹಾಗೂ ರೋಹಿತ್ ಶರ್ಮ (Rohit Sharma) ಇಬ್ಬರೂ ಕೂಡ ಕೆಲವೊಂದು ಪ್ರಮುಖ ನಿರ್ಧಾರಗಳನ್ನ ಆಯ್ಕೆಯ ಸಂದರ್ಭದಲ್ಲಿ ಮಾಡಬಹುದಾಗಿದೆ.

advertisement

ಯಾಕೆಂದರೆ ಟಿ ಟ್ವೆಂಟಿ ಫಾರ್ಮೆಟ್ ಅಂದ್ರೆ ಬ್ಯಾಟಿಂಗ್ ವಿಭಾಗದಲ್ಲಿ ಫಿನಿಷರ್ ಜವಾಬ್ದಾರಿಯನ್ನು ನಿರ್ವಹಿಸುವಂತಹ ಪಕ್ಕಾ ಆಟಗಾರ ಇರಲೇಬೇಕು. ಈ ಸ್ಥಾನಕ್ಕಾಗಿ ಈಗ ದಿನೇಶ್ ಕಾರ್ತಿಕ್ (Dinesh Karthik), ರಿಂಕು ಸಿಂಗ್ (Rinku Singh), ಶಿವಂ ದುಬೆ, ಅವರಂತಹ ಆಟಗಾರರ ಪೈಪೋಟಿ ಕೂಡ ಪ್ರಾರಂಭವಾಗಿದೆ.

ಇನ್ನೊಂದು ಕಡೆಯಲ್ಲಿ ರೋಹಿತ್ ಶರ್ಮ ಇತ್ತೀಚಿಗಷ್ಟೇ ಸಂದರ್ಶನ ಒಂದರಲ್ಲಿ ಮಾತನಾಡುತ್ತಾ ನಿವೃತ್ತಿ ಹೊಂದಿರುವಂತಹ ಈ ಆಟಗಾರ ತಂಡಕ್ಕೆ ಬಂದ್ರು ಕೂಡ ನಮಗೆ ಸಂತೋಷ ಅನ್ನೋ ರೀತಿಯಲ್ಲಿ ಮಾತನಾಡಿದ್ದಾರೆ. ಹೌದು ಅವರು ಮಾತನಾಡುತ್ತಿರುವುದು ಬೇರೆ ಯಾರ ಬಗ್ಗೆನೂ ಅಲ್ಲ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಆಕ್ರಮಣಕಾರಿ ಬ್ಯಾಟ್ಸ್ಮನ್ ಆಗಿರುವಂತಹ ಮಹೇಂದ್ರ ಸಿಂಗ್ ಧೋನಿ (MS Dhoni) ಅವರ ಬಗ್ಗೆ.

 

Image Source: Mint

 

ಈ ಬಾರಿ ಐಪಿಎಲ್ ನಲ್ಲಿ ಮಹೇಂದ್ರ ಸಿಂಗ್ ಧೋನಿ (MS Dhoni) ಅವರ ಬ್ಯಾಟಿಂಗ್ ಪ್ರದರ್ಶನ ನಿಮಗೆಲ್ಲರಿಗೂ ಗೊತ್ತೇ ಇದೆ. ಈ ಕಾರಣಕ್ಕಾಗಿ ರೋಹಿತ್ ಶರ್ಮ ಧೋನಿ ಅವರು ಈಗಲೂ ಕೂಡ ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುವಂತಹ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುದಾಗಿ ಮಾತನಾಡಿದ್ದಾರೆ. ಅಭಿಮಾನಿಗಳಲ್ಲಿ ಕೂಡ ಮಹೇಂದ್ರ ಸಿಂಗ್ ಧೋನಿ ಅವರು ನಿವೃತ್ತಿಯಿಂದ ಹೊರಬಂದು ಭಾರತೀಯ ಕ್ರಿಕೆಟ್ ತಂಡದಲ್ಲಿ ಕ್ರಿಕೆಟ್ ಕೀಪರ್ ಬ್ಯಾಟ್ಸ್ಮನ್ ಆಗಿ ಕಾಣಿಸಿಕೊಳ್ಳಬೇಕೆ ಎನ್ನುವಂತಹ ಆಸೆ ಮತ್ತೆ ಜಾಗೃತವಾಗಿದೆ. ಈ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನೋದನ್ನ ಕಾಮೆಂಟ್ ನಲ್ಲಿ ಹಂಚಿಕೊಳ್ಳಬಹುದಾಗಿದೆ.

advertisement

Leave A Reply

Your email address will not be published.