Karnataka Times
Trending Stories, Viral News, Gossips & Everything in Kannada

Arecanut Plantation: ಈ 3 ತಪ್ಪು ಮಾಡಿದರೆ ನಾಶವಾಗಲಿದೆ ಅಡಿಕೆ ತೋಟ! ತಜ್ಞರ ಮಾಹಿತಿ

advertisement

ಭಾರತದಲ್ಲಿ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುತ್ತದೆ. ಹೆಚ್ಚಿನ ಜನರು ಇಲ್ಲಿ ಕೃಷಿ ಮಾಡಿ ಬದುಕು ನಿಭಾಯಿಸುತ್ತಾರೆ. ಯಾವುದೇ ಕೃಷಿಯಾಗಲಿ ರೈತನು ಅದನ್ನು ಬಹಳ ಕಷ್ಟದಿಂದ ಸಾಕಿ ಸಲಹುತ್ತಾನೆ.ಆದೇ ರೀತಿ ಆ ಬೆಳೆಯಲ್ಲಿ ಹೆಚ್ಚಿನ ಇಳುವರಿ ಬಂದರೆ ರೈತನಿಗೆ ಲಾಭ ಬರುತ್ತದೆ.‌ ಅದೇ ಫಸಲು ಬಂದಿಲ್ಲ, ಉತ್ತಮ ಇಳುವರಿ ಇಲ್ಲ‌ ಎಂದಾಗ ರೈತನಿಗೆ ನಷ್ಟ. ಹಾಗಾಗಿ ಯಾವುದೇ ಕೃಷಿ ಮಾಡುವ ಮುನ್ನ ಕೆಲವೊಂದು ಮುನ್ನಚ್ಚರಿಕೆ ಕ್ರಮಗಳನ್ನು ನಿರ್ವಹಣೆ ಮಾಡುವ ಮೂಲಕ ಕೃಷಿಯಲ್ಲಿ ಉತ್ತಮ ಇಳುವರಿ ಪಡೆಯಬಹುದಾಗಿದೆ.

ಅಡಿಕೆ ತೋಟ:

 

Image Source: PepperHub

 

ಅದರಲ್ಲೂ ಇಂದು ಅಡಿಕೆ ತೋಟಕ್ಕೆ (Arecanut Plantation) ಹೆಚ್ಚಿನ ಜನರು ಅವಲಂಬಿತ ರಾಗಿದ್ದು ಮಾರುಕಟ್ಟೆ ಯಲ್ಲಿ ಉತ್ತಮ ಧಾರಣೆ ಇದೆ. ಅಡಿಕೆ ಜೊತೆಗೆ ಇತರ ಕೃಷಿಯನ್ನು ಮಾಡಿ ಲಾಭ ಗಳಿಸುವ ರೈತರು ಕೂಡ ಇದ್ದಾರೆ.‌ಅದೇ ರೀತಿ ತೋಟದ ಸರಿಯಾದ ನಿರ್ವಹಣೆ ಮಾಡದೇ ನಷ್ಟ ಗೊಂಡವರು ಸಹ ಇದ್ದಾರೆ.

ನಷ್ಟ ಉಂಟಾದ ಬೆಳೆ:

advertisement

ಇಲ್ಲೊಂದು ನಾಲ್ಕು ವರ್ಷದ ಅಡಿಕೆ ತೋಟ (Arecanut Plantation) ದಲ್ಲಿ ಬಹಳಷ್ಟು ನಷ್ಟ ಉಂಟಾಗಿದೆ. ತೋಟದಲ್ಲಿ ನೀರಿನ ಇಂಗಿತವಾಗಿದೆ ಅಡಿಕೆ ಹರಳು ಉದುರುತ್ತಿದ್ದು ಇಳುವರಿ ಇಲ್ಲದಂತಾಗಿದೆ. ಅಡಿಕೆ ಮರದಲ್ಲಿನ ಬುಡದಲ್ಲಿ ಬೇರುಗಳು ಮೇಲೆ ಬಂದಿದ್ದು ಬೇರುಗಳು ಪೋಷಕಾಂಶಗಳನ್ನು ಕಳೆದುಕೊಂಡಿದೆ. ತೋಟವು ಬಹಳಷ್ಟು ಹಾನಿಯಾಗಿದ್ದು ಯಾಕಾಗಿ ಈ ತೋಟ ಹೀಗಾಗಿದೆ ಎಂಬ ಕಾರಣವನ್ನು ರೈತರೊಬ್ಬರು ತಿಳಿಸಿದ್ದಾರೆ ಈ ಬಗ್ಗೆ ಮಾಹಿತಿ ಇಲ್ಲಿದೆ.

ಕಾರಣವೇನು?

ಈ ತೋಟದಲ್ಲಿ ಇತರ ಪರ್ಯಾಯ ಬೆಳೆಯನ್ನು ಸಹ ಮಾಡಿದ್ದು ಅಡಿಕೆ ಗಿಡಗಳಿಗೆ ವಾರದಲ್ಲಿ ಒಂದು ಭಾರಿ ನೀರು ಬಿಟ್ಟರೆ ಇತರ ಧಾನ್ಯಗಳ ಗಿಡಗಳಿಗೆ ವಾರಕ್ಕೆ ಎರಡು ಭಾರಿ ನೀಡು ಬೀಡುತ್ತಿದ್ದು ನೀರಿನ‌ಪ್ರಮಾಣ ಹೆಚ್ಚಾಗಿ ತೋಟದ ಪೋಷಣೆ ಕಡಿಮೆ ಯಾಗಿದೆ. ಅಡಿಕೆ ತೋಟಕ್ಕೆ (Arecanut Plantation) ಬೇಕಾದಷ್ಟು ಪ್ರಮಾಣದ ನೀರು ಬಿಟ್ಟರೆ ಮಾತ್ರ ಮರಗಳು ಉತ್ತಮ ಇಳುವರಿ ನೀಡಲಿದೆ.

  • ಅದೇ ರೀತಿ ತೋಟದಲ್ಲಿ ಹೆಚ್ಚು ಕಳೆ ಬಂದಿದ್ದು ಕಳೆನಾಶಕ ಸಿಂಪಡಣೆ ಮಾಡಿದ್ದಾರೆ. ಕಳೆ ನಾಶಕ ಬಳಕೆ ಹೆಚ್ಚಾಗಿರುವುದರಿಂದ ಇಳುವರಿ ಕುಂಠಿತ ವಾಗಿದೆ.
  • ಅದೇ ರೀತಿ ತೋಟದಲ್ಲಿ ಟ್ರಾಕ್ಟರ್ ಮೂಲಕ ವ್ಯವಸಾಯ ಮಾಡಿದ್ದಾರೆ. ಹಾಗಾಗಿ ಬೇರುಗಳ ಸಮಸ್ಯೆ ಉಂಟಾಗಿದೆ.ಬೇರು ಬೆಳೆಯುವ ಸಂದರ್ಭದಲ್ಲಿ ತೋಟದ ಮಣ್ಣು ಅಗೆಯುದರಿಂದ ಸಮಸ್ಯೆ ಉಂಟಾಗಿದೆ.
  • ಹಾಗಯೇ ಗೊಬ್ಬರದ ಬಳಕೆಯು ಹೆಚ್ಚಾಗಿರುವುದರಿಂದ ಈ ಸಮಸ್ಯೆ ಉಂಟಾಗಿದೆ.ಈ ತೋಟದಲ್ಲಿ ಅತೀವ ನೀರು,ಕಳೆನಾಶಕ ,ಅತೀ ಗೊಬ್ಬರ ಬಳಕೆಯಿಂದ ತೋಟ ನಾಶವಾಗಿದೆ.

ಹಾಗಾಗಿ ರೈತರು ತಮ್ಮ ತೋಟದ ಮಣ್ಣು ಯಾವ ರೀತಿ ಇದೆ.‌ ಯಾವ ರೀತಿ ನಿರ್ವಹಣೆ ಮಾಡಬೇಕು, ಎಷ್ಟು ಭಾರಿ ನೀರು ಬಿಟ್ಟರೆ ಉತ್ತಮ‌ ಎಂಬುದನ್ನು ಕೃಷಿ ಪರಿಣಿತರಿಂದ ತಿಳಿದರೆ ಉತ್ತಮ.

advertisement

Leave A Reply

Your email address will not be published.