Karnataka Times
Trending Stories, Viral News, Gossips & Everything in Kannada

Arecanut Plantation : ಅಡಿಕೆ ತೋಟಕ್ಕೆ ಹೊರಗಡೆಯಿಂದ ತಂದ ಮಣ್ಣನ್ನು ಹಾಕಬಹುದೇ? ಇಲ್ಲಿದೆ ತಜ್ಞ ಬೆಳೆಗಾರರ ಟಿಪ್ಸ್

advertisement

Arecanut Plantation in India: ಕರಾವಳಿ ಮತ್ತು ಬಹುತೇಕ ಭಾಗದಲ್ಲಿ ಕಂಗು ಅಂದರೆ ಅಡಿಕೆ ಕೃಷಿ ತನ್ನದೇ ಆದ ವೈಶಿಷ್ಟ್ಯ ಹೊಂದಿದೆ. ಇದರ ಸೇವನೆ ಅನೇಕ ವಿಧವಾಗಿದ್ದು ಮಾರುಕಟ್ಟೆಯಲ್ಲಿ ಈ ಬೆಳೆಗೆ ಉತ್ತಮ ಬೇಡಿಕೆ ಇದೆ ಎಂದು ಹೇಳಬಹುದು. ಹಾಗಾಗಿ ಇದರ ಕೃಷಿ ಮಾಡುವಾಗ ಕೂಡ ಮೊದಲೇ ಕೆಲವೊಂದು ಅಗತ್ಯ ಕ್ರಮ ನೀವು ಅನುಸರಿಸಿದೆ ದೀರ್ಘಾವಧಿಯ ಲಾಭ ಪಡೆಯಲು ಅನುಕೂಲ ಆಗಲಿದೆ ಈ ನೆಲೆಯಲ್ಲಿ ಕಂಗಿನ ಕೃಷಿಯ ಉಪಯುಕ್ತ ಸಲಹೆಯನ್ನು ನಾವಿಂದು ನಿಮಗೆ ನೀಡಲಿದ್ದೇವೆ.

ತೋಟಗಾರಿಕೆ ಕೃಷಿಯಲ್ಲಿ ಅಡಿಕೆಗೆ ತನ್ನದೆ ಆದ ಪ್ರಾತಿನಿಧ್ಯ ಇದೆ. ಶುಭ ಸಮಾರಂಭಗಳಿಗೆ ಅಡಿಕೆಗೆ ವಿಶೇಷ ಬೇಡಿಕೆ ಇದ್ದೇ ಇರುತ್ತದೆ. ಅಡಿಕೆ ಬೇಡಿಕೆ ಅಧಿಕ ಇರುವ ಕಾರಣಕ್ಕೆ ಅನೇಕ ರೈತರು ಇದನ್ನು ಬೆಳೆದು ಲಾಭ ಪಡೆಯಲು ಮುಂದಾಗುತ್ತಾರೆ ಆದರೆ ಸರಿಯಾದ ಕ್ರಮ ಅನುಸರಿಸದೆ ಅಧಿಕ ಲಾಭ ಸಿಗಲಾರದು ಹೀಗಾಗಿ ನೀವು ಅಡಿಕೆ ಕೃಷಿ ಮಾಡುವಾಗ ಅದರ ಸೂಕ್ಷ್ಮಾವಲೋಕನ ಮಾಡಿದರೆ ಉತ್ತಮ ಇಳುವರಿ ಪಡೆಯಬಹುದು.

What is the soil and climate for arecanut?What is the best intercrop for arecanut?
How do you increase arecanut yield?
Can we grow arecanut in black soil?
Image Source: India TV

advertisement

ನೈಸರ್ಗಿಕ ವಿಧಾನ ಅನುಸರಿಸಿ
ಅಡಿಕೆ ಕೃಷಿ ಮಾಡುವವರು ಮೊದಲನೇಯದ್ದಾಗಿ ನೈಸರ್ಗಿಕ ಕ್ರಮ ಅನುಸರಿಸಿದರೆ ಬಹಳ ಅನುಕೂಲ ಆಗಲಿದೆ. ನೀವು ಅಡಿಕೆ ಕೃಷಿ ಮಾಡುವಾಗ ರಾಸಾಯನಿಕ ಕ್ರಮ ಅನುಸರಿಸಿದರೆ ಅದು ನಿಮ್ಮ ಭೂಮಿಯ ಮಣ್ಣಿನ ಫಲವತ್ತತೆಗೆ ಹಾನಿ ನೀಡುವ ಸಾಧ್ಯತೆ ಇರಲಿದೆ ಹಾಗಾಗಿ ನೀವು ನೈಸರ್ಗಿಕ ಸಾವಯವ ವಿಧಾನ ಬಳಸಿದರೆ ವರ್ಷಕ್ಕೆ ಅಧಿಕ ಇಳುವರಿ ಪಡೆಯಬಹುದು.

ಬೇರೆ ಕಡೆ ಮಣ್ಣು
ಅನೇಕ ಸಲ ನೀವು ಅಡಿಕೆ ಸಸಿ ಹಾಕಿದ್ದ ಜಾಗದ ಮಣ್ಣು ಸರಿ ಇಲ್ಲ ಎಂದು ಬೇರೆ ಕಡೆ ಫಲವತ್ತತೆ ಇರುವ ಮಣ್ಣನ್ನು ಪೋಷಕಾಂಶಕ್ಕಾಗಿ ನೀಡುವುದು ಕಾಣಬಹುದು ಆದರೆ ಇದು ಸರಿಯಾದ ಕ್ರಮ ಅಲ್ಲ. ಇದ್ದ ಮಣ್ಣನ್ನು ಫಲವತ್ತಾಗಿಸಿದರೆ ಗಿಡ ಹಸನಾಗುವ ಜೊತೆಗೆ ಬೇರೂ ಉತ್ತಮವಾಗಿ ಬೆಳೆಯಲಿದೆ. ಹಾಗಾಗಿ ಮರ ಸೊಗಸಾಗಿ ಬೆಳೆ ಬಿಡಲಿದೆ. ಬೇರು ಹಾನಿಯಾದರೆ ಎಲ್ಲವೂ ಹಾನಿಯೇ ಎನ್ನಬಹುದು. ಎಷ್ಟೋ ಸಲ ನಮ್ಮ ಹೊಲಕ್ಕೆ ಟ್ಯ್ರಾಕ್ಟರ್ ಮಿಶನ್ ತರುವಾಗ ಬೇರಿಗೆ ಹಾನಿ ಆಗಲಿದೆ ಅದರ ಮೇಲೆ ಬೇರೆ ಕಡೆಯ ಮಣ್ಣು ಹಾಕಿದರೆ ಪ್ರಯೋಜನೆ ಇಲ್ಲ ಅದು ಕಾಂಕ್ರೀಟ್ ಹಾಕಿದಂತೆ ಆಗುವುದೆ ವಿನಃ ಉಪಯೋಗ ಇರಲಾರದು.

What is the soil and climate for arecanut?What is the best intercrop for arecanut?
How do you increase arecanut yield?
Can we grow arecanut in black soil?
Image Source: India TV

ಹಿಡಿಮುಂಡಿಗೆ ಸಮಸ್ಯೆ
ಅನೇಕ ಅಡಿಕೆ ಗಿಡಗಳಿಗೆ ಹಿಡಿಮುಂಡಿಗೆ ಸಮಸ್ಯೆ ಬರಲಿದೆ. ಅಂದರೆ ಮೇಲೆ ಬೇರು ಬಿಡುವುದು ಸಮಸ್ಯೆ ಆಗಲಿದೆ ಇದಕ್ಕೆ ಮುಖ್ಯ ಕಾರಣ ನೆಲದ ಮೇಲಿನ ಬೇರಿನ ಆರೈಕೆಗೆ ಒತ್ತು ನೀಡದೇ ಇರುವುದು ಈ ಸಮಸ್ಯೆಗೆ ಮಣ್ಣಿನ ಫಲವತ್ತತೆ ವೃದ್ಧಿ ಆಗಬೇಕು ಅದಕ್ಕಾಗಿ ಸಾವಯವ ವಿಧಾನ ಬಳಸಿ ಮಣ್ಣಿನ ಸೂಕ್ಷ್ಮಾಣು ಜೀವಿಗಳು ವೃದ್ಧಿ ಆಗಬೇಕು. ಆಗ ನಿಮಗೆ ಉತ್ತಮ ಇಳುವರಿ ಹಾಗೂ ಆದಾಯ ಸಿಗುತ್ತದೆ.

advertisement

Leave A Reply

Your email address will not be published.