Karnataka Times
Trending Stories, Viral News, Gossips & Everything in Kannada

Forest Area: ಅರಣ್ಯ ಪ್ರದೇಶದ ಅಂಚಿನಲ್ಲಿ ಸಾಗುವಳಿ ಮಾಡುತ್ತಿರುವ ಎಲ್ಲಾ ರೈತರಿಗೂ ಸಿಹಿಸುದ್ದಿ

advertisement

ಕಾನೂನಿನಲ್ಲಿ ಅನೇಕ ನಿಯಮಾವಳಿಗಳು ಇದ್ದು ಒಂದಕ್ಕೊಂದು ಸಂಬಂಧ ಉಳ್ಳವೆ ಆಗಿರುತ್ತದೆ. ರೈತರ ಭೂಮಿಯ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಸಣ್ಣ ಪುಟ್ಟ ಸಂಗತಿಗಳು ನಮಗೆ ತಿಳಿದಿರುವುದಿಲ್ಲ. ಇವುಗಳಲ್ಲಿ ಅರಣ್ಯ ಪ್ರದೇಶದ (Forest Area) ಅಂಚಿನಲ್ಲಿ ಇರುವ ಭೂ ಪ್ರದೇಶದ ಪುನಃ ಒತ್ತುವರಿ ಪಡೆಯುವ ವಿಚಾರವಾಗಿ ಅರಣ್ಯ ಇಲಾಖೆಯ ನೀತಿ ನಿರ್ಬಂಧದಲ್ಲಿ ಇರುವ ಒಂದು ಪ್ರಮುಖ ವಿಚಾರ ಕೂಡ ಒಂದಾಗಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ

ಬಹಳ ಹಿಂದಿನ ವ್ಯವಸ್ಥೆ:

ಅರಣ್ಯ ಪ್ರದೇಶದ ಅಂಚಿನಲ್ಲಿ ವಾಸ ಮಾಡಿರುವ ರೈತರು ತಮ್ಮ ಜಮೀನಿನ ಅಕ್ಕ ಪಕ್ಕ ಇರುವ ಅರಣ್ಯ ಭೂಮಿಯನ್ನು ಕೂಡ ಮೊಟಕು ಗೊಳಿಸಿ ಅದನ್ನು ಕೃಷಿ ಭೂಮಿಯಾಗಿ ಪರಿವರ್ತಿಸಿ ಸಾಗುವಳಿ ಮಾಡಿಕೊಂಡು ಬರುತ್ತಿದ್ದಾರೆ. ಅಂತಹ ರೈತರು ಈ ಕೃಷಿ ಭೂಮಿಯನ್ನೇ ಅವಲಂಬಿಸಿದವರು ಕೂಡ ಇದ್ದಾರೆ. ಕಳೆದ ಕೆಲ ವರ್ಷದ ಹಿಂದೆ ಈ ಅಕ್ರಮ ತೆರವು ಕಾರ್ಯಾಚರಣೆ ಬರದಿಂದ ಸಾಗುತ್ತಿದ್ದ ರೈತರು ಅಕ್ರಮವಾಗಿ ಒತ್ತುವರಿ ಮಾಡಿದ್ದ ಜಾಗ ಪುನಃ ಅರಣ್ಯ ಇಲಾಖೆ ವಶ ಪಡಿಸಿಕೊಳ್ಳುತ್ತಿದೆ.

ಕಂದಾಯ ಇಲಾಖೆ ಜೊತೆ ಭಾಗಿ:

 

Image Source: Sahapedia

 

advertisement

ಅರಣ್ಯ ಇಲಾಖೆ ಭೂಮಿ (Forest Department Land) ಹಾಗೂ ಕಂದಾಯ ಇಲಾಖೆಯ ಭೂಮಿ ಕೂಡ ಅಕ್ರಮ ಒತ್ತುವರಿ ಆಗುವ ಪ್ರಮಾಣ ಅಧಿಕವಿದ್ದು ಅದನ್ನು ವಾಪಾಸ್ಸು ಪಡೆಯುವ ಸಲುವಾಗಿ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಸರ್ವೇ ಕಾರ್ಯವನ್ನು ಸಹ ನಡೆಸುತ್ತಿದೆ. ಈ ಮೂಲಕ ಕೃಷಿ ಎಂದು ಒತ್ತುವರಿ ಮಾಡಿ ಕೃಷಿಯೇತರ ಚಟುವಟಿಕೆ ಉದ್ಯಮ ಮಾಡಿದ್ದು ಸಹ ತಿಳಿದು ಬಂದು ಜಾಗವನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ.

ಪ್ರತ್ಯೇಕ ವ್ಯವಸ್ಥೆ ನಿಯಮ:

ಅರಣ್ಯ ಇಲಾಖೆ ಅಂಚಿನಲ್ಲಿ ಇರುವ ರೈತರು ಕೃಷಿ ಭೂಮಿಯಾಗಿ ಅರಣ್ಯ ಭೂಮಿಯನ್ನು ಪರಿವರ್ತನೆ ಮಾಡಿ ಅನೇಕ ವರ್ಷದಿಂದ ಬಳಕೆ ಮಾಡುತ್ತಾ ಬಂದಿರುವುದು ತಿಳಿದು ಬಂದರೆ ಅಂತಹ ಭೂಮಿಯಲ್ಲಿ ಅವರು ಎಷ್ಟು ವರ್ಷಗಳ ಸಾಗುವಳಿ‌ ಮಾಡಿದ್ದಾರೆ ಎಂದು ಪರಿಶೀಲನೆ ಮಾಡಿ ಮೂರು ಎಕರೆಗಿಂತ ಕಮ್ಮಿ ಇದ್ದರೆ ಆ ಭೂಮಿ ಬಿಟ್ಟು ಕೊಡುವ ಅಥವಾ ಅದಕ್ಕೆ ಬೇರೆ ಪ್ರತ್ಯೇಕ ಜಾಗದ ವ್ಯವಸ್ಥೆ ಮಾಡಬೇಕು ಎಂಬ ನಿಯಮ ಕೂಡ ಇದೆ.

ಒಕ್ಕಲು ಎಬ್ಬಿಸುವಂತಿಲ್ಲ:

 

Image Source: Down To Earth

 

ಅರಣ್ಯ ಪ್ರದೇಶದ (Forest Area) ಅಕ್ಕ ಪಕ್ಕ ಸಾಗುವಳಿ ಮಾಡಿದ್ದ ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಕರ್ನಾಟಕ ಸರಕಾರವು 2015ರಲ್ಲಿ ಒಂದು ಆದೇಶ ಹೊರಡಿಸಿದೆ. ಅಂದರೆ ಮೂರು ಎಕರೆ ಒಳಪಟ್ಟು ಸಾಗುವಳಿ‌ ಮಾಡುತ್ತಿದ್ದರೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಅವರನ್ನು ಅಲ್ಲಿಂದ ಒಕ್ಕಲೆಬ್ಬಿಸಬಾರದು ಎಂದು ಆದೇಶದಲ್ಲಿ ಈ ಮೂಲಕ ತಿಳಿಸಿದ್ದಾರೆ. ಹಾಗಾಗಿ ಈ ಕಾನೂನು ಪ್ರಕಾರ ರೈತರಿಗೆ ಪ್ರತ್ಯೇಕ ಜಾಗ ನೀಡಬೇಕು ಇಲ್ಲ ಆ ಸಾಗುವಳಿ ಜಾಗವೇ ಅಧಿಕೃತ ಮಾಡಿಕೊಡಬೇಕು ಎಂಬ ನಿಯಮ ಇದೆ.

advertisement

Leave A Reply

Your email address will not be published.