Karnataka Times
Trending Stories, Viral News, Gossips & Everything in Kannada

Drought Relief Fund: ಬರಪರಿಹಾರದ ಹಣಕ್ಕೆ ಕಾಯುತ್ತಿದ್ದವರಿಗೆ ಬಂಪರ್ ಗುಡ್ ನ್ಯೂಸ್! ಈ ದಿನದಂದೆ ಹಣ

advertisement

ಕೃಷಿಯು ನಮ್ಮ ದೇಶದ ಆರ್ಥಿಕತೆಯ ಮೂಲ ಆದಾಯ ವಾಗಿದ್ದು ರೈತರು ಕಷ್ಟಪಟ್ಟು ಶ್ರಮ ವಹಿಸಿ ಕೃಷಿ ಮಾಡುತ್ತಾರೆ.ಆದರೆ ಮಾಡಿದ ಕೃಷಿಯಲ್ಲಿ ಇಳುವರಿ ಇಲ್ಲ ಅಂದಾಗ ರೈತರಿಗೆ ಬೇಸರ ಉಂಟಾಗುವುದು ಸಹಜ.ಆದರಲ್ಲೂ ಈ ಭಾರಿ ಮಳೆ ಇಲ್ಲದೆ ಬಿಸಿಲಿನ ಉಷ್ಣತೆ ಹೆಚ್ಚಾಗಿ ಬಹಳಷ್ಟು ಕಡೆ ಬರ ಉಂಟಾಗಿದ್ದು ಕೃಷಿ ನಷ್ಟವಾಗಿದೆ. ಈ ನಿಟ್ಟಿನಲ್ಲಿ ರೈತರಿಗೆ ಪರಿಹಾರ ಒದಗಿಸಲು ಸರಕಾರ ಮುಂದಾಗಿದೆ

ರಿಟ್ ಅರ್ಜಿ ಸಲ್ಲಿಕೆ:

ರಾಜ್ಯಕ್ಕೆ ಬರ ಪರಿಹಾರ  (Drought Relief Fund) ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಂಡರು ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡಿಲ್ಲ ಎಂದು ಕೇಂದ್ರ ಸರಕಾರ ವಿರುದ್ಧ ಸುಪ್ರೀಂ ಕೋರ್ಟ್​ನಲ್ಲಿ ಆರ್ಟಿಕಲ್ 32ರ ಅಡಿಯಲ್ಲಿ ರಾಜ್ಯ ಸರಕಾರ ರಿಟ್ ಅರ್ಜಿ ಸಲ್ಲಿಸಿತ್ತು.

ಬರ ಪರಿಹಾರ:

 

Image Source: The Goan

 

ಈಗಾಗಲೇ ರಾಜ್ಯದಲ್ಲಿ 223 ತಾಲೂಕುಗಳು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದು ಇದರಲ್ಲಿ 196 ತಾಲೂಕುಗಳು ತೀವ್ರ ಬರಗಾಲದಿಂದ ಕೂಡಿದ್ದು ಬಹಳಷ್ಟು ರೈತರ ಕೃಷಿ ಹಾನಿಯಾಗಿದೆ. ಅದೇ ರೀತಿ ಈ ಭಾರಿ ಬರಗಾಲದಿಂದ 48 ಲಕ್ಷ ಹೆಕ್ಟೇರ್ ಪ್ರದೇಶ ಕೃಷಿ ಹಾನಿ ಉಂಟಾಗಿದೆ.

advertisement

ಅರ್ಜಿ ಸಲ್ಲಿಕೆ:

ಕರ್ನಾಟಕದಲ್ಲಿ ಬರಗಾಲದ ಪರಿಸ್ಥಿತಿ ಹೆಚ್ಚಾಗಿದ್ದು ರೈತರಿಗೆ ಬಹಳಷ್ಟು ನಷ್ಟವಾಗಿದೆ. ಈ ನಿಟ್ಟಿನಲ್ಲಿ ಬರ ಪರಿಹಾರ ನೀಡುವ ಕುರಿತಾಗಿ ಸುಪ್ರಿಂ ಕೋರ್ಟ್ (Supreme Court) ಅರ್ಜಿ ವಿಚಾರಣೆ ಮಾಡಿದ್ದು ಈ ಕುರಿತು ಸುಪ್ರೀಂ ಕೋರ್ಟ್‌ ಕೇಂದ್ರ ಸರ್ಕಾರದ ಮಾಹಿತಿ ಪಡೆದಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಅಡಿಯಲ್ಲಿ ಕರ್ನಾಟಕಕ್ಕೆ ಪರಿಹಾರ ನೀಡು ವಂತೆ ಕೇಂದ್ರ ಸರ್ಕಾರ ಆದೇಶಿಸಬೇಕು ಎಂದು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ಮಾಡಿದೆ.

ಕ್ರಮ ತೆಗೆದುಕೊಳ್ಳುವ ಸೂಚನೆ:

ಈ ಬಗ್ಗೆ ಒಂದು ವಾರದಲ್ಲಿಯೇ ಬರ ಪರಿಹಾರ ರೈತರಿಗೆ ಕೊಡುವ ಬಗ್ಗೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯೆ ಎಂದಿಗೂ ಇಂತಹ ಸ್ಪರ್ಧೆ ಇರಬಾರದು. ಕೇಂದ್ರ ಸರ್ಕಾರವು ಈ ತತ್ವಗಳನ್ನು ಪಾಲಿಸಬೇಕು. ಎರಡು ವಾರಗಳಲ್ಲಿ ಬರ ಪರಿಹಾರದ ಕುರಿತು ಉತ್ತರ ನೀಡಬೇಕು ಎಂದು ಕೋರ್ಟ್ ತಿಳಿಸಿದೆ.

ಮೊದಲ ಕಂತಿನ ಹಣ ಬಿಡುಗಡೆ:

 

Image Source: Down To Earth

 

ಈಗಾಗಲೇ ಬೆಳೆ ಹಾನಿ ಉಂಟಾದ ರೈತರಿಗೆ ಮೊದಲ ಹಂತದಲ್ಲಿ 2 ಸಾವಿರ ರೂ.ವರೆಗೂ ಪರಿಹಾರ ನೀಡಲಾಗಿದ್ದು ಮಧ್ಯಂತರ ವಿಮೆ ಪರಿಹಾರಕ್ಕೆ ರಾಜ್ಯ ಸರ್ಕಾರವು ಈಗಾಗಲೇ 6.5 ಲಕ್ಷ ರೈತರಿಗೆ 460 ಕೋಟಿ ಬಿಡುಗಡೆ ಮಾಡಿದ್ದು ಕೆಲವು ರೈತರಿಗೆ ಮೊದಲ ಕಂತಿನ ಹಣ (Drought Relief Fund) ಬಂದಿದೆ. ಇನ್ನು ಕೇಂದ್ರ ಸರಕಾರದ ಹಣವೂ ಶೀಘ್ರವಾಗಿ ಬಿಡುಗಡೆ ಯಾಗಬಹುದು.

advertisement

Leave A Reply

Your email address will not be published.