Karnataka Times
Trending Stories, Viral News, Gossips & Everything in Kannada

LPG Cylinder: ಗ್ಯಾಸ್ ಸಿಲಿಂಡರ್ ಇರುವ ಎಲ್ಲಾ ಮನೆಗಳಿಗೂ ಹೊಸ ಸೂಚನೆ! ಕೇಂದ್ರದ ಆದೇಶ

advertisement

ಸ್ನೇಹಿತರೆ, ಭಾರತ ಸರ್ಕಾರವು ಉಜ್ವಲ ಯೋಜನೆ (Ujjwala Yojana) ಯನ್ನು ಜಾರಿಗೊಳಿಸಿ ಗ್ರಾಮೀಣ ಭಾಗದಲ್ಲಿನ ಮಹಿಳೆಯರ ಅಡುಗೆ ಕೆಲಸವನ್ನು ಬಹಳ ಮಾಡಿಕೊಟ್ಟಿದ್ದಾರೆ. ಎಲ್ಪಿಜಿ ಸಿಲಿಂಡರ್ಗಳ(LPG cylinder) ಬಳಕೆಯ ಮುನ್ನ ಎಲ್ಲಾ ಮನೆಯ ಮಹಿಳೆಯರೆಲ್ಲ ಕೂಡ ಸೌದೆ ಒಲೆಯ ಮುಂದೆ ಕುಳಿತು ಮನೆ ತುಂಬಾ ಹೊಗೆಯನ್ನು ಹಬ್ಬಿಸಿ ಅಡುಗೆಯನ್ನು ತಯಾರು ಮಾಡಿ ತಮ್ಮ ಕುಟುಂಬಸ್ಥರಿಗೆಲ್ಲ ಉಣ ಬಡಿಸಬೇಕಿತ್ತು.

ಆದರೆ ಈಗ ಅತಿ ಸ್ವಚ್ಛ ಹಾಗೂ ಬಹಳ ಸುಲಭವಾಗಿ ಉಪಯೋಗಿಸಬಹುದಾದ ಎಲ್ಪಿಜಿ ಸಿಲಿಂಡರ್ ಅನ್ನು ಮನೆಮನೆಗೆ ತಲುಪಿಸಿದ್ದು, ಈ ಯೋಜನೆಯ ಅಡಿಯಲ್ಲಿ 75 ಲಕ್ಷಕ್ಕೂ ಅಧಿಕ ಕುಟುಂಬಗಳು ಎಲ್ಪಿಜಿ ಸೌಲಭ್ಯವನ್ನು ಪಡೆದುಕೊಂಡು ತಮ್ಮ ದೈನಂದಿನ ಜೀವನವನ್ನು (Daily Lifestyle) ಮತ್ತಷ್ಟು ಸುಲಭವಾಗಿಸಿಕೊಂಡಿದ್ದಾರೆ.

ಎಲ್‌ಪಿಜಿ ಸಿಲಿಂಡರ್ ಗಳನ್ನು ಉಪಯೋಗಿಸುವುದರಿಂದ ಎದುರಾಗುವ ಸಮಸ್ಯೆಗಳು:

ಎಲ್ಪಿಜಿ ಸಿಲಿಂಡರ್ (LPG Cylinder) ಬಳಕೆಯು ಪ್ರತಿ ಮಹಿಳೆಯರ ಅಡುಗೆಮನೆ ಕೆಲಸವನ್ನು ಬಹಳ ಸುಲಭವಾಗಿಸಿದೆ ಆದರೆ ಇದರಿಂದ ಎಷ್ಟು ಉಪಯೋಗವೋ ಅಷ್ಟೇ ಅಪಾಯಕಾರಿ ಸಮಸ್ಯೆಗಳು ಎದುರಾಗುತ್ತದೆ. ಹೌದು ಸ್ನೇಹಿತರೆ, ಎಷ್ಟೋ ಜನ ಎಲ್ಪಿಜಿ ಸಿಲಿಂಡರ್ ಬಳಕೆದಾರರಿಗೆ ಈ ಕುರಿತಾದಂತಹ ಮಾಹಿತಿ ತಿಳಿದೇ ಇರುವುದಿಲ್ಲ.

 

Image Source: Zee Business

 

ಇದರಿಂದ ಅಚಾನಕ್ಕಾದ ಅವಗಡಗಳು ಹಾಗೂ ಅದನ್ನು ಸರಿಯಾಗಿ ಬಳಸದೆ ಅದರಿಂದ ಎದುರಾಗುವಂತಹ ಸಮಸ್ಯೆಗೆ ಗುರಿಯಾಗುತ್ತೇವೆ. ಯಾರೆಲ್ಲಾರು ಎಲ್ಪಿಜಿ ಸಿಲಿಂಡರ್ (LPG Cylinder) ಗಳನ್ನು ಉಪಯೋಗಿಸುತ್ತಿರುವಿರೋ ಅದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿ ಹಾಗೂ ಆಗಾಗ ಅದರ ಕನೆಕ್ಷನ್ ಎಲ್ಲವೂ ಸರಿಯಾಗಿ ಇದೆಯೇ ಎಂಬುದನ್ನು ಪರಿಶೀಲಿಸಿ.

advertisement

ಎಲ್ಪಿಜಿ ಸಿಲಿಂಡರ್ ಎಕ್ಸ್ಪರಿ ಡೇಟ್ ಅನ್ನು ಚೆಕ್ ಮಾಡಿ:

 

Image Source: NDTV

 

ಬಹುತೇಕ ಎಲ್ಪಿಜಿ ಗ್ರಾಹಕರಿಗೆ ಸಿಲಿಂಡರ್ ಗಳಿಗೆ ಎಕ್ಸ್ಪರಿ ಡೇಟ್ (LPG Cylinder Expiry Date) ಇರುತ್ತದೆ ಎಂಬ ಮಾಹಿತಿಯೇ ತಿಳಿದಿಲ್ಲ. ನೀವು ಉಪಯೋಗಿಸುತ್ತಿರುವಂತಹ ಸಿಲಿಂಡರ್ ನ ಎಕ್ಸ್ಪರಿ ಡೇಟ್ ಮುಗಿದು ಹೋದರೆ ಬಹು ದೊಡ್ಡ ಸಮಸ್ಯೆಗೆ ಗುರಿಯಾಗುತ್ತೀರ.

ಎಲ್ಪಿಜಿ ಸಿಲಿಂಡರ್ (LPG Cylinder) ಮೇಲೆ ಮೂರು ಬಹುಮುಖ್ಯ ಮಾಹಿತಿಯನ್ನು ಬರೆಯಲಾಗಿರುತ್ತದೆ. ಸಿಲಿಂಡರ್ ಮೇಲೆ ಇರುವಂತಹ ಮೂರು ಸ್ರಿಪ್ಸ್ (Three Strips) ಗಳ ಮೇಲೆ ಆಲ್ಪ ನ್ಯೂಮರಿಕಲ್ ಸಂಖ್ಯೆಯನ್ನು ನಮೂದಿಸಲಾಗಿರುತ್ತದೆ A-23, B-25, C-24, D-23 ಇವು ನಿಮಗೆ ಸಿಲಿಂಡರ್ ನ ಎಕ್ಸ್ಪರಿ ಡೇಟ್ ಕುರಿತಾದ ಮಾಹಿತಿಯನ್ನು ತಿಳಿಸುತ್ತದೆ.

A ಅಂದರೆ ಜನವರಿ – ಮಾರ್ಚ್
B ಅಂದರೆ ಏಪ್ರಿಲ್ – ಜೂನ್
C ಅಂದರೆ ಜುಲೈ‌ – ಸೆಪ್ಟೆಂಬರ್
D ಎಂದರೆ ಅಕ್ಟೋಬರ್ – ಡಿಸೆಂಬರ್.

ಅದರಂತೆ ABCD ಯ ಮುಂಭಾಗದಲ್ಲಿ ಇರುವಂತಹ ನಂಬರ್ಗಳು ಎಕ್ಸ್ಪರಿ ವರ್ಷವನ್ನು (Expiry Year) ನಮೂದಿಸುತ್ತದೆ. ಉದಾಹರಣೆಗೆ B 24 ಎಂದರೆ ನೀವು ಉಪಯೋಗಿಸುತ್ತಿರುವಂತಹ ಎಲ್ಪಿಜಿ ಸಿಲಿಂಡರ್ (LPG Cylinder) ಕೇವಲ ಏಪ್ರಿಲ್ ನಿಂದ ಜೂನ್ 2024 ರವರೆಗೂ ಮಾತ್ರ ಮಾನ್ಯವಾಗಿರುತ್ತದೆ ಎಂದರ್ಥ. ಸಿಲಿಂಡರ್ ಮೇಲಿರುವ ಈ ಸಂಖ್ಯೆಯನ್ನು ತಪ್ಪದೆ ಸರಿಯಾಗಿ ಪರಿಶೀಲಿಸಿ ಆನಂತರ ಉಪಯೋಗಿಸುವುದು ಒಳ್ಳೆಯದು.

advertisement

Leave A Reply

Your email address will not be published.