Karnataka Times
Trending Stories, Viral News, Gossips & Everything in Kannada

LPG Cylinder: ತಿಂಗಳ ಮೊದಲ ದಿನವೇ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ, ಯಾವ ರಾಜ್ಯದಲ್ಲಿ ಎಷ್ಟಿದೆ?

advertisement

ಇನ್ನೇನು ಮಧ್ಯಂತರ ಬಜೆಟ್ ಘೋಷಣೆ ಆಗಲಿದೆ. ವಿತ್ತ Minister Nirmala Sitharaman ಇಂದು ಬಜೆಟ್ ಮಂಡಿಸಲಿದ್ದಾರೆ. ಆದರೆ ಬಜೆಟ್ ಮೊದಲೇ ಗ್ರಾಹಕರಿಗೆ ಆಘಾತಕಾರಿ ಸುದ್ದಿ ಸಿಕ್ಕಿದೆ.

ಹೌದು, ಬಜೆಟ್ ಗೂ ಮೊದಲೇ LPG Cylinder ದರಗಳು ಹೆಚ್ಚಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಫೆಬ್ರವರಿ ಒಂದು 2024 ರಂದು ಎಲ್ಪಿಜಿ ಎಟಿಎಫ್ ದರಗಳನ್ನು ನವೀಕರಿಸಿವೆ. ಇಂದು ಅಂದರೆ ಗುರುವಾರ ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 14 ರೂಪಾಯಿಗಳ ಹೆಚ್ಚಳ ಕಂಡಿದೆ.

ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆ:

19 ಕೆಜಿ Commercial Cylinder Price ಏರಿಕೆ ಆಗಿದ್ದು, 14 ರೂಪಾಯಿಗಳ ಹೆಚ್ಚಳ ಕಂಡಿದೆ. ದೆಹಲಿ, ಜೈಪುರ್ ಇಂದೋರ್, ಅಹ್ಮದಾಬಾದ್, ಮೀರತ್, ಆಗ್ರಾ, ಮುಂಬೈ, ಲಕ್ನೋ ಸೇರಿದಂತೆ ಪ್ರಮುಖ ನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ದರ 14 ರೂಪಾಯಿಗಳ ಹೆಚ್ಚಳ ಕಂಡಿದೆ. ಆದರೆ ಎಲ್ಪಿಜಿ ಗೃಹಬಳಕೆಯ ಇಂಧನ ದರದಲ್ಲಿ ಯಾವುದೇ ವ್ಯತ್ಯಾಸ ಇಲ್ಲ.

 

advertisement

ಯಾವ ರಾಜ್ಯದಲ್ಲಿ ಸಿಲೆಂಡರ್ ದರ ಎಷ್ಟಿದೆ?

 • ಆಗ್ರಾದಲ್ಲಿ ವಾಣಿಜ್ಯ ಎಲ್ಪಿಜಿ ಸಿಲೆಂಡರ್ ದರ – 1817.5 ರೂಪಾಯಿ
 • ಜೈಪುರದಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ – 2046 ರೂ.
 • ಲಕ್ನೋ ದಲ್ಲಿ ಎಲ್ ಪಿ ಜಿ ಸಿಲಿಂಡರ್ ದರ – 1883
 • ಅಹ್ಮದಾಬಾದ್ ನಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ – 1866.5 ರೂಪಾಯಿಗಳು
 • ನಾಗಪುರದಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ – 1947.5 ರೂಪಾಯಿಗಳು
 • ಇಂದೋರ್ ನಲ್ಲಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ದರ – 1876 ರೂಪಾಯಿಗಳು
 • ಬೆಂಗಳೂರಿನಲ್ಲಿ ವಾಣಿಜ್ಯ ಎಲ್ಪಿಜಿ ಸಿಲೆಂಡರ್ ದರ – 1865 ರೂ.

ದೇಶಿಯ LPG Cylinder ಬೆಲೆ ಬೇರೆ ಬೇರೆ ರಾಜ್ಯಗಳಲ್ಲಿ ಇಂತಿವೆ:

 • ದೆಹಲಿ – ರೂ. 903
 • ಕೊಲ್ಕತ್ತಾ – ರೂ.929
 • ಮುಂಬೈ – ರೂ.902.50
 • ಚೆನ್ನೈ – ರೂ.918.50

ದೇಶಿಯ LPG Cylinder ಬೆಲೆಯನ್ನು ಆಗಸ್ಟ್ 30, 2023ಕ್ಕೇ ಪರಿಷ್ಕರಿಸಲಾಗಿತ್ತು. ನಂತರದ ದಿನಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಇದೀಗ ಎಲ್‌ಪಿಜಿ ಸಿಲಿಂಡರ್ ದರದಲ್ಲಿ 200 ರೂಪಾಯಿಗಳ ಸಬ್ಸಿಡಿ ನೀಡಲಾಗಿದೆ.

ವಾಣಿಜ್ಯ ಸಿಲಿಂಡರ್ ದರ ಬಹುತೇಕ ಪ್ರತಿ ತಿಂಗಳು ಬದಲಾವಣೆ ಆಗುತ್ತಿರುತ್ತದೆ. ಕೆಲವೊಮ್ಮೆ ಜನರಿಗೆ ಸಮಸ್ಯೆ ಉಂಟಾಗುವಷ್ಟು, ಬೆಲೆ ಏರಿಕೆ ಆದರೆ ಇನ್ನೂ ಕೆಲವೊಮ್ಮೆ ಬೆಲೆ ಇಳಿಕೆ ಆಗಬಹುದು. ಇದೀಗ ಫೆಬ್ರವರಿ 1, 2024ಕ್ಕೆ 19 ಕೆಜಿ ವಾಣಿಜ್ಯ ಸಿಲಿಂಡರ್ ದರ ಏರಿಕೆ ಆಗಿದ್ದು, 2021 ರಿಂದ 50 ಬಾರಿ ಸಿಲೆಂಡರ್ ದರ ಬದಲಾಗಿದೆ.

advertisement

Leave A Reply

Your email address will not be published.