Karnataka Times
Trending Stories, Viral News, Gossips & Everything in Kannada

Jio Family Plan: ಅದ್ಭುತ ಫ್ಯಾಮಿಲಿ ಪ್ಲ್ಯಾನ್ ಘೋಷಿಸಿದ ಜಿಯೋ, ಒಂದು ರಿಚಾರ್ಜ್ ಗೆ 4 ಸಿಮ್ ನಡೆಯುತ್ತದೆ, ಕೇವಲ 99ರೂ. ವೆಚ್ಚ!

advertisement

ಇಂದು ಮಾರುಕಟ್ಟೆ ಗೆ ನಾನಾ ರೀತಿಯ ಮೊಬೈಲ್ ಗಳು ಮಾರುಕಟ್ಟೆ ಗೆ ಲಗ್ಗೆ ಇಟ್ಟಿದ್ದು ಮೊಬೈಲ್ ಪ್ರೀಯರನ್ನು ಸಹ ಸೆಳೆಯುತ್ತಲೆ ಬಂದಿದೆ. ಅದರಲ್ಲಿ‌ ಮುಖ್ಯವಾಗಿ ಮೊಬೈಲ್ ಅಂತ ಬಂದಾಗ ಅದಕ್ಕೆ ಬೇಕಾದ ಸಿಮ್ ಕೂಡ‌ ಅಗತ್ಯ ವಾಗಿ ಬೇಕು. ಇಂದು ಹಲವು‌ ಕಂಪನಿಯ ಸಿಮ್ ಕಾರ್ಯ ನಿರ್ವಹಿಸುತ್ತಿದ್ದು ಹೆಚ್ಚಿನ ಜನರು‌ Jio SIM ಗೆ ಆಕರ್ಷಿತ ರಾಗಿದ್ದಾರೆ. ಭಾರತೀಯ ಟೆಲಿಕಾಂ ಕಂಪೆನಿಗಳಲ್ಲಿ ಜಿಯೋ ತನ್ನ ಗ್ರಾಹಕರಿಗೆ ಅಗ್ಗದ ಬೆಲೆಯ ರೀಚಾರ್ಜ್ ಪ್ಲ್ಯಾನ್​ಗಳನ್ನು ಪರಿಚಯಿಸುವ ಮೂಲಕ ಇಂದಿಗೂ ಅಗ್ರಸ್ಥಾನದಲ್ಲಿದೆ.

ಆಕರ್ಷಣೀಯ ಸೌಲಭ್ಯ:

 

 

Jio, ಕೇವಲ INR 299 ರಿಂದ ಪ್ರಾರಂಭವಾಗುವ ಆಕರ್ಷಣೀಯ Postpaid ಯೋಜನೆಗಳ ಸೌಲಭ್ಯ ನೀಡುತ್ತಿದ್ದು ಗ್ರಾಹಕರನ್ನು ಆಕರ್ಷಿಸುತ್ತಲೆ ಬಂದಿದೆ.ಅದೇ ರೀತಿ Jio 1499 ಬೆಲೆಯ ರೀಚಾರ್ಜ್ ಯೋಜನೆಯನ್ನು ಒಳಗೊಂಡಿದ್ದು ಹಲವು ಆಯ್ಕೆಗಳು ಲಭ್ಯವಿದೆ.

advertisement

ಒಂದೇ ರೀಚಾರ್ಜ್, ಮೂರು ಹೆಚ್ಚುವರಿ ಸಿಮ್ ನಿರ್ವಹಣೆ:

ಜಿಯೋದಲ್ಲಿ ಹೊಸ ಸೌಲಭ್ಯ ನೀಡಿದ್ದು ಕೇವಲ 699 ರೂ ರಿಚಾರ್ಜ್ ಮಾಡುವ ಮೂಲಕ‌ ಕೇವಲ 99 ಶುಲ್ಕದೊಂದಿಗೆ ಮೂರು ಹೆಚ್ಚುವರಿ ಸಿಮ್ ಅನ್ನು ನೀವು ನಿಭಾಯಿಸಬಹುದು.ಈ ಯೋಜನೆಯಡಿಯಲ್ಲಿ, ಬಳಕೆದಾರರಿಗೆ 100GB ಇಂಟರ್ನೆಟ್ ಡೇಟಾವನ್ನು ನೀಡಲಾಗುತ್ತದೆ. ಡೇಟಾ ಮಿತಿಯು ಮುಗಿದ ನಂತರ, ಹೆಚ್ಚುವರಿ ಡೇಟಾವು ಪ್ರತಿ GB ಗೆ INR 10 ಕ್ಕೆ ಲಭ್ಯವಿದೆ. ಪ್ರತಿ ಹೆಚ್ಚುವರಿ ಸಿಮ್ ಮಾಸಿಕ 5GB ಹೆಚ್ಚುವರಿ ಪಡೆಯುತ್ತದೆ. ಅರ್ಹ ಬಳಕೆದಾರರು ಅನಿಯಮಿತ 5G ಡೇಟಾವನ್ನು ಸಹ ಪಡೆಯಬಹುದು. ಅದೇ ರೀತಿ ಯೋಜನೆಯು ರಾಷ್ಟ್ರವ್ಯಾಪಿ ಎಲ್ಲಾ ನೆಟ್‌ವರ್ಕ್‌ಗಳಲ್ಲಿ ಅನಿಯಮಿತ ಕರೆಗಳನ್ನು ಮತ್ತು ಪ್ರತಿದಿನ 100 ಉಚಿತ SMS ಅನ್ನು ಒಳಗೊಂಡಿದೆ. ಚಂದಾದಾರರು ನೆಟ್‌ಫ್ಲಿಕ್ಸ್ಅಮೆಜಾನ್ ಪ್ರೈಮ್ ವಿಡಿಯೋ, ಜಿಯೋ ಸಿನಿಮಾಗಳಿಗೆ ಉಚಿತ ಸೌಲಭ್ಯ ಇದೆ.

ಜಿಯೋದ 1499 ಯೋಜನೆ:

ಈ ಯೋಜನೆಯು ಕೂಡ ಆತ್ಯಕರ್ಷಕ ವಾಗಿದ್ದು Jio ನ INR 1499 ಯೋಜನೆಯು 300GB ಇಂಟರ್ನೆಟ್ ಡೇಟಾವನ್ನು ನೀಡಿ ಅನಿಯಮಿತ 5G ಡೇಟಾವನ್ನು ಸಹ ಒದಗಿಸುತ್ತದೆ.ಇದರ ಹೊರತಾಗಿ ಜಿಯೋ ಟಿವಿ ಜಿಯೋ ಸಿನಿಮಾ, ಜಿಯೋನ್ಯೂಸ್ ಮುಂತಾದ ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಸಹ ಜಿಯೋ ಈ ಯೋಜನೆಯಲ್ಲಿ ಪಡೆಯಬಹುದು.

advertisement

Leave A Reply

Your email address will not be published.