Karnataka Times
Trending Stories, Viral News, Gossips & Everything in Kannada

FASTag KYC: ಫಾಸ್ಟ್ ಟ್ಯಾಗ್ ಕೆ ವೈ ಸಿ ಪ್ರಕ್ರಿಯೆಗೆ ಒಂದು ತಿಂಗಳ ಗಡುವು ವಿಸ್ತರಣೆ, ಈ ದಿನದವರೆಗೆ ಅವಕಾಶ!

advertisement

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಈ ಹಿಂದೆಯೇ ತಿಳಿಸಿದ್ದ ಪ್ರಕಾರ, ಫಾಸ್ಟ್ ಟ್ಯಾಗ್ ಗಳಿಗೆ ಕೆವೈಸಿ (FASTag KYC) ಮಾಡಿಸಿಕೊಳ್ಳುವುದು ಕಡ್ಡಾಯ. ಇದೀಗ ಆರ್ಮ್ ಇಂಡಿಯನ್ ಹೈವೇಸ್ ಮ್ಯಾನೇಜ್ಮೆಂಟ್ ಕಂಪನಿ ಫಸ್ಟ್ಯಾಗ್ ಗಳಿಗೆ KYC ಅನುಸರಣೆ ಮಾಡುವ ಗಡುವನ್ನು ಇನ್ನಷ್ಟು ವಿಸ್ತರಿಸಿದೆ.

ಫಾಸ್ಟ್ ಟ್ಯಾಗ್ ಗಳಿಗೆ ಕೆವೈಸಿ ಕಡ್ಡಾಯ!

ಹೆದ್ದಾರಿಯಲ್ಲಿ ವಾಹನ ಚಲಾಯಿಸುವವರು ತಮ್ಮ ಟೋಲ್ ತೆರಿಗೆ ಪಾವತಿಸುವುದಕ್ಕೆ ಈಗ ಹೆಚ್ಚು ಸಮಯ ಟೋಲ್ ನಲ್ಲಿ ಕಾಯಬೇಕಾಗಿಲ್ಲ. ಕೆಲವೇ ಸೆಕೆಂಡಗಳಲ್ಲಿ ವಾಹನಕ್ಕೆ ಅಳವಡಿಸಲಾಗಿರುವ ಫಾಸ್ಟ್ ಟ್ಯಾಗ್ನಿಂದ ತೆರಿಗೆ ಹಣ ಕಡಿತಗೊಳ್ಳುತ್ತದೆ ಹಾಗೂ ಸುಲಭವಾಗಿ ಪ್ರಯಾಣ ಮುಂದುವರಿಸಬಹುದು. ಆದರೆ ಫಾಸ್ಟ ಟ್ಯಾಗ್ ವಿಚಾರದಲ್ಲಿ ಯಾವುದೇ ರೀತಿಯ ವಂಚನೆ ಆಗಬಾರದು ಎನ್ನುವ ಕಾರಣಕ್ಕೆ KYC ಮಾಡಿಸಿಕೊಳ್ಳುವುದು ಕಡ್ಡಾಯ ಎಂದು NHAI ತಿಳಿಸಿದೆ. ಇದಕ್ಕೆ ಜನವರಿ 31 2024 ಕೊನೆಯ ದಿನಾಂಕ ಎಂದು ಕೂಡ ತಿಳಿಸಲಾಗಿತ್ತು.

ಗುಡುಗು ವಿಸ್ತರಣೆ ಮಾಡಿದೆ NHAI

advertisement

ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಈಗ ಈ ಗಡುವನ್ನು ವಿಸ್ತರಣೆ ಮಾಡಿದೆ. 1.27 ಕೋಟಿ ಫಾಸ್ಟ್ ಟ್ಯಾಗ್ಗಳಲ್ಲಿ ಏಳು ಲಕ್ಷ ಬಹು ಫಾಸ್ಟ್ ಟ್ಯಾಗ್ ಗಳನ್ನು ಈಗಾಗಲೇ ನಿಷ್ಕ್ರಿಯಗೊಳಿಸಲಾಗಿದೆ, ಇದೀಗ ಅನಾಮಧೆಯ ಶರತ್ತಿನ ಮೇಲೆ ಅಧಿಕಾರಿ ಒಬ್ಬರು ನೀಡಿರುವ ಮಾಹಿತಿಯ ಪ್ರಕಾರ ಈ ಗಡುವನ್ನು ಇನ್ನಷ್ಟು ಅಂದರೆ ಒಂದು ತಿಂಗಳು ಹೆಚ್ಚುವರಿ (Feb 29) ಅವಧಿಯವರೆಗೆ ವಿಸ್ತರಿಸಲಾಗಿದೆ.

ಜನವರಿ 31, 2024ರ ಒಳಗೆ ಫಾಸ್ಟ್ ಟ್ಯಾಗ ಕೆ ವೈ ಸಿ ಪ್ರಕ್ರಿಯೆ ಅಪೂರ್ಣಗೊಂಡಿದ್ದರೆ ಅಂತಹ ಫಾಸ್ಟ್ ಟ್ಯಾಗ್ ಅನ್ನು ಬ್ಯಾಂಕುಗಳು ನಿಷ್ಕ್ರಿಯಗೊಳಿಸುತ್ತವೆ ಅಥವಾ ಬ್ಲಾಕ್ ಲಿಸ್ಟ್ ಗೆ ಸೇರಿಸುತ್ತವೆ ಎಂದು ಘೋಷಿಸಲಾಗಿತ್ತು. ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯ ದಕ್ಷತೆಯನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ಜೊತೆಗೆ ಚಲನೆಯನ್ನು ಉತ್ತೇಜಿಸುವ ಸಲುವಾಗಿ NHAI ‘ಒಂದು ವಾಹನ ಒಂದು ಫಾಸ್ಟ್ ಟ್ಯಾಗ್’ ಎನ್ನುವ ಉಪಕ್ರಮವನ್ನು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಒಂದು ವಾಹನಕ್ಕೆ ಒಂದೇ ಫಾಸ್ಟ್ ಬಳಕೆ ಮಾಡಬೇಕು.

ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ (RFID) ತಂತ್ರಜ್ಞಾನವನ್ನು ನೇರವಾಗಿ ಪ್ರಿಪೇಯ್ಡ್ ಅಥವಾ ಉಳಿತಾಯ ಖಾತೆಗೆ ಲಿಂಕ್ ಮಾಡುವ ಮೂಲಕ ಫಾಸ್ಟ್ ಟ್ಯಾಗ್ ಅನ್ನು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿ ಬಳಸಲ್ಪಡುತ್ತಿದೆ. ಫಾಸ್ಟ್ ಟ್ಯಾಗ್ ವ್ಯವಸ್ಥೆಯಿಂದಾಗಿ ದೇಶದಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹದಲ್ಲಿ ಕ್ರಾಂತಿಯೇ ಉಂಟಾಗಿದೆ ಎನ್ನಬಹುದು. ಆದರೆ ಇನ್ನು ಮುಂದೆ ನೀವು ಹೆದ್ದಾರಿಯಲ್ಲಿ ಪ್ರವೇಶಿಸುವಾಗ ಫಾಸ್ಟ್ ಟ್ಯಾಗ್ ಗೆ ಕೆ ವೈ ಸಿ ಆಗದೇ ಇದ್ದರೆ ಅದು ಟೋಲ್ ಪ್ಲಾಜಾದಲ್ಲಿ ಡಿಟೆಕ್ಟ್ ಆಗುವುದಿಲ್ಲ. ಹಾಗೂ ಆ ಫಾಸ್ಟ್ ಟ್ಯಾಗ್ ಇನ್ನು ಮುಂದೆ ವರ್ಕ್ ಆಗುವುದಿಲ್ಲ. ಅದರಿಂದ ನಿಮ್ಮ ಬಳಿ ಇರುವ ಫಾಸ್ಟ್ ಟ್ಯಾಗ್ ಗೆ ತಕ್ಷಣ ಕೆವೈಸಿ ಮಾಡಿಸಿಕೊಳ್ಳಿ.

advertisement

Leave A Reply

Your email address will not be published.