Karnataka Times
Trending Stories, Viral News, Gossips & Everything in Kannada

LPG Cylinder: ಕೇಂದ್ರ ಸರ್ಕಾರದ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಲು ಈ ದಾಖಲೆಗಳೊಂದಿಗೆ ಇಂದೇ ಅರ್ಜಿ ಸಲ್ಲಿಸಿ!

advertisement

ಇಂದು ದಿನ ನಿತ್ಯದ ಬೆಲೆ ಏರಿಕೆಯಲ್ಲಿ ಸಾಮಾನ್ಯ ಮನುಷ್ಯರು ಬದುಕು ಕಟ್ಟಿಕೊಳ್ಳುವುದು ಕಷ್ಟವಾಗಿ ಬಿಟ್ಟಿದೆ. ದಿನಸಿ ವಸ್ತು, ಪೆಟ್ರೋಲ್ (Petrol),ಡಿಸೇಲ್ (Diesel), ಸೇರಿದಂತೆ ಎಲ್ಲ ವಸ್ತುಗಳ ಬೆಲೆಯು ಏರಿಕೆ ಯಾಗಿದೆ. ಅದೇ ರೀತಿ ಇಂದು ಗ್ಯಾಸ್ ಸಂಪರ್ಕ ಕೂಡ ಮೂಲಭೂತ ವಸ್ತುವಾಗಿದ್ದು ಬಡವರ್ಗದ ಜನತೆಗೂ ಈ ಸೌಲಭ್ಯ ದೊರೆಕಬೇಕೆಂದು ಉಜ್ವಲ ಯೋಜನೆ (Ujjwala Yojana) ಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಇದೀಗ ಯೋಜನೆಯ ಲಾಭ ಪಡೆಯಲು ಮನೆಯ ಮಹೀಳೆಯರು ಅರ್ಜಿ ಸಲ್ಲಿಸಬಹುದಾಗಿದ್ದು ಆನ್‌ಲೈನ್‌ನಲ್ಲಿ ಕೂಡ ಅರ್ಜಿ ಸಲ್ಲಿಸಬಹುದು.

Ujjwala Yojana:

 

 

ಪ್ರಧಾನ ಮಂತ್ರಿ ಉಜ್ವಲ ಯೋಜನೆ (PM Ujjwala Yojana) ಮೂಲಕ ಮದ್ಯಮ ವರ್ಗದ ಜನತೆಗೆ ಕೇಂದ್ರ ಸರ್ಕಾರ ಸಹಾಯ ಹಸ್ತ ನೀಡುತ್ತಿದೆ. ಈ ಯೋಜನೆಯ ಮೂಲಕ ಫಲಾನುಭಾವಿಗಳಿಗೆ ಉಚಿತ LPG Cylinder ಸಂಪರ್ಕಗಳನ್ನು ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಉಜ್ವಲಾ ಯೋಜನೆಗೆ 2016 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಚಾಲನೆ ನೀಡಿದ್ದರು. ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಬಡತನ ರೇಖೆಗಿಂತ ಕೆಳಗಿಳಿರುವ ಕುಟುಂಬಗಳ ಮಹಿಳೆಯರ ಹೆಸರಲ್ಲಿ Free LPG Cylinder ಸಂಪರ್ಕ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಬಹುದು:

advertisement

ಇದೀಗ ಯೋಜನೆಯ ಲಾಭ ಪಡೆಯಲು ಮನೆಯ ಮಹೀಳೆಯರು ಅರ್ಜಿ ಸಲ್ಲಿಸಬಹುದಾಗಿದ್ದು ಆನ್‌ಲೈನ್‌ ಅಥವಾ ಆಪ್ ಲೈನ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಮಾಡಲು PMUY ವೆಬ್‌ಸೈಟ್‌ಗೆ ಹೋಗಿ. ಇದರಲ್ಲಿ Apply for New Ujjwala Connection ಗೆ ಕ್ಲಿಕ್ ಮಾಡುವ ಮೂಲಕ ಇಲ್ಲಿ ನೊಂದಣಿ ಮಾಡಬಹುದಾಗಿದೆ.

ಈ ದಾಖಲೆ ಅಗತ್ಯ:

ಉಜ್ವಲ ಯೋಜನೆಯ ಸೌಲಭ್ಯ ಪಡೆಯಲು ಕೆಲವು ಅಗತ್ಯ ದಾಖಲೆ ಬೇಕಿದ್ದು ಆಧಾರ್‌ ಕಾರ್ಡ್‌ (Aadhaar Card), ಪಡಿತರ ಚೀಟಿ (Ration Card), ಹಾಗೂ ಬ್ಯಾಂಕ್‌ ಪಾಸ್‌ಪುಸ್ತಕದ ಜೆರಾಕ್ಸ್ (Bank Passbook Xerox) ಆಪ್ಲೊಡ್ ಮಾಡಬೇಕು.

ಸಬ್ಸಿಡಿ ದರ ಹಂಚಿಕೆ:

ಉಜ್ವಲ ಯೋಜನೆ ಮೂಲಕ ಉಚಿತ ರೀಫಿಲ್ ಮತ್ತು ಫಲಾನುಭವಿಗಳಿಗೆ ಉಚಿತ ಸ್ಟೌವ್ ಒದಗಿಸಲಾಗುತ್ತದೆ. ಈ ಯೋಜನೆಯಡಿ ಮೊದಲು ಗ್ಯಾಸ್ ಸಂಪರ್ಕ ಪಡೆಯುವ ಕುಟುಂಬಕ್ಕೆ ಉಚಿತ ಗ್ಯಾಸ್ ಸ್ಟೌವ್ ನೀಡುದರ ಜೊತೆಗೆ ಹಾಗೇ ಪ್ರತಿ ಸಿಲಿಂಡರ್‌ಗೆ ಒಟ್ಟು 300 ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ.

advertisement

Leave A Reply

Your email address will not be published.