Karnataka Times
Trending Stories, Viral News, Gossips & Everything in Kannada

Pension: ಪಿಂಚಣಿ ಹಣ ಪಡೆಯುವ ಫಲಾನುಭವಿಗಳು ಮುಂದಿನ ಕಂತಿನ ಹಣ ಪಡೆಯಬೇಕಿದ್ದರೆ ಈ ಕೆಲಸ ಮಾಡುವುದು ಕಡ್ಡಾಯ!

advertisement

ಬಡವರ್ಗದ ಜನತೆಗೆ ಸಾಮಾಜಿಕ ಭದ್ರತೆಯನ್ನು ನೀಡುದಕ್ಕಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ಹಮ್ಮಿಕೊಂಡಿದ್ದು ಆಯ್ದ ವರ್ಗಕ್ಕೆ ಉಚಿತವಾಗಿ ಹಣದ ನೆರವು ಒದಗಿಸುತ್ತದೆ.ವೃದ್ಧರಿಗೆ ಸಾಮಾಜಿಕ ಭದ್ರತೆ ಒದಗಿಸಲು ವೃದ್ಧಾಪ್ಯ ಪಿಂಚಣಿ (Pension), ಸಂಧ್ಯಾ ಸುರಕ್ಷಾ ಯೋಜನೆ ಇತ್ಯಾದಿ ಇದ್ದು 60 ವರ್ಷ ಮೇಲ್ಪಟ್ಟ ವ್ಯಕ್ತಿಗೆ ವೃದ್ಧಾಪ್ಯ ವೇತನ ದೊರೆಯಲಿದೆ.‌ ಅದೇ ರೀತಿ ವಿಧವ ಮಹೀಳೆಯರಿಗೂ ಪಿಂಚಣಿ ಸೌಲಭ್ಯ ಇದೆ. ವೃದ್ಧಾಪ್ಯ, ವಿಧವಾ, ವಿಕಲಚೇತನ, ಹಿರಿಯ ನಾಗರಿಕರ ಪಿಂಚಣಿಯನ್ನು ಸರಕಾರ ಪ್ರತಿ‌ತಿಂಗಳು ನೀಡುತ್ತದೆ.‌ ಆದರೆ ಇನ್ಮುಂದೆ ಹಣ ಪಡೆಯಬೇಕಿದ್ರೆ ಈ ಕೆಲಸ ಮಾಡುವುದು ಕಡ್ಡಾಯ ವಾಗಿದೆ.

ಜೀವಿತ ಪ್ರಮಾಣ ಪತ್ರ ಸಲ್ಲಿಕೆ:

 

 

ಹೌದು ಪಿಂಚಣಿ ಹಣ (Pension Money) ಪಡೆಯುವವರು ವಾರ್ಷಿಕ ಜೀವಿತ ಪ್ರಮಾಣ ಪತ್ರ‌ (Life Certificate) ಸಲ್ಲಿಕೆ ಮಾಡಬೇಕಾಗುತ್ತದೆ. ಇಲ್ಲದೆ ಇದ್ದಲ್ಲಿ ನಿಮಗೆ ಈ ಪಿಂಚಣಿ ಹಣ ದೊರೆಯುದಿಲ್ಲ. ಇದಕ್ಕಾಗಿ ಜನವರಿ 31 ವರೆಗೆ ಸಮಯ ನೀಡಲಾಗಿದ್ದು ನೀವು ಲೈಫ್ ಸರ್ಟಿಫಿಕೇಟ್ ಸಲ್ಲಿಕೆ ಮಾಡದೇ ಇದ್ದಲ್ಲಿ ತಕ್ಷಣ ಈ ಕೆಲಸ ಮಾಡಿ.

ಯಾಕಾಗಿ ಈ ಪ್ರಮಾಣ ಪತ್ರ:

ನೀವು ಜೀವಂತವಾಗಿದ್ದೀರಿ ಎಂಬುವುದನ್ನು ಸಾಬೀತುಪಡಿಸುವ ಉದ್ದೇಶ ದಿಂದ ಪ್ರತಿ ವರ್ಷಕ್ಕೊಮ್ಮೆ ಈ ಪ್ರಮಾಣ ಪತ್ರವನ್ನು ಪಿಂಚಣಿದಾರರು ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ.

advertisement

ಅನ್ ಲೈನ್ ಮೂಲಕವು ಸಲ್ಲಿಕೆ ಮಾಡಬಹುದು:

ನೀವು ಈ ಜೀವನ ಪ್ರಮಾಣ ಪತ್ರವನ್ನು ಅನ್ ಲೈನ್ ಮೂಲಕವು ಸಲ್ಲಿಸಬಹುದಾಗಿದ್ದು ಅಥವಾ ನಿಮ್ಮ ಮನೆಗೆ ಬರುವ ಏಜೆಂಟ್‌ ಅಥವಾ ಪೋಸ್ಟ್‌ ಮ್ಯಾನ್‌ ಮೂಲಕವೂ ನೀವು ‌ ಜೀವನ ಪ್ರಮಾಣ ಪತ್ರವನ್ನು ನೀಡಬಹುದಾಗಿದೆ.

 

ಇಕೆವೈಸಿ ಸಲ್ಲಿಕೆ:

ಅದೇ ರೀತಿ ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ , ವೃದ್ಧಾಪ್ಯ ವೇತನ, ವಿಧವಾ ವೇತನ ಇತ್ಯಾದಿ ಮಾಸಿಕ ಪಿಂಚಣಿ ಪಡೆಯುವ ಫಲಾನುಭವಿಗಳು ತಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮಾಡುವುದು ಕಡ್ಡಾಯ ವಾಗಿದೆ. ಇಲ್ಲದ್ದಿದ್ದಲ್ಲೂ ಈ ಹಣ ಜಮೆ ಯಾಗುವುದಿಲ್ಲ.

ಈಗಾಗಲೇ ಮಾಸಿಕ ಪಿಂಚಣಿ ಯೋಜನೆಗಳನ್ನು ಪಡೆಯುವ ಆಧಾರ್ ಆಧಾರಿತ ನೇರ ಹಣ ಸಂದಾಯ ಯೋಜನೆಯಡಿ ತರಬೇಕು ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯವು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈಗಾಗಲೇ ತಿಳಿಸಿದೆ.ಹಾಗಾಗಿ ಇನ್ಮುಂದೆ ಈ ಯೋಜನೆಗಳ ಹಣ ಪಡೆಯಲು ಕಟ್ಟುನಿಟ್ಟಿನ ಕ್ರಮ ಜಾರಿಗೆ ತರಬಹುದು.

advertisement

Leave A Reply

Your email address will not be published.