Karnataka Times
Trending Stories, Viral News, Gossips & Everything in Kannada

LPG Cylinder: ಗ್ಯಾಸ್ ಸಿಲಿಂಡರ್ ಬಳಸೋರಿಗೆ ಇನ್ಮುಂದೆ ಹೊಸ ನಿಯಮ ಜಾರಿಗೆ ತಂದ ಕೇಂದ್ರ ಸರ್ಕಾರ!

advertisement

ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ (LPG Cylinder) ಅನ್ನು ಉಚಿತವಾಗಿ ಬಿಪಿಎಲ್ ಕಾರ್ಡ್ (BPL Card) ಹೊಂದಿರುವ ಅಥವಾ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಕೇಂದ್ರ ಸರ್ಕಾರ ವಿತರಣೆ ಮಾಡಿದೆ, ಇದಕ್ಕಾಗಿಯೇ ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಜಾರಿಗೆ ತರಲಾಗಿದೆ.

ಇಂದು ಲಕ್ಷಾಂತರ ಕುಟುಂಬಗಳು ಉಚಿತವಾಗಿ ಎಲ್ಪಿಜಿ ಗ್ಯಾಸ್ ಕನೆಕ್ಷನ್ ಪಡೆದುಕೊಳ್ಳುವಂತಾಗಿದೆ. ಉಜ್ವಲ ಯೋಜನೆಯ (Ujjwala Scheme) ಅಡಿಯಲ್ಲಿ ಮನೆ ಮನೆಯಲ್ಲಿಯೂ ಇಂದು ಗ್ಯಾಸ್ ಸಿಲಿಂಡರ್ ಬಳಕೆ ಮಾಡುವುದನ್ನು ಕಾಣಬಹುದು.

LPG Cylinder ಬಳಸುವವರಿಗೆ ಹೊಸ ರೂಲ್ಸ್ ಎನು?

 

 

ಸಿಲಿಂಡರ್ ಸುರಕ್ಷತೆಗಾಗಿ ಸರ್ಕಾರ ಈ ಹೊಸ ನಿಯಮವನ್ನು ಮಾಡಿದೆ, ಗ್ಯಾಸ್ ಸಿಲಿಂಡರ್ ಬಳಸುವವರು ಪಂಚವಾರ್ಷಿಕ ಅನಿಲ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸರ್ಕಾರ ತಿಳಿಸಿದೆ. ಇನ್ನು ಮುಂದೆ ಭಾರತ ಗ್ಯಾಸ್ (Bharat Gas) ನಂತಹ ಕಂಪನಿಗಳು ಸುರಕ್ಷತೆ ಹೊಂದಿರುವ ಎಲ್‌ಪಿಜಿ ಕನೆಕ್ಷನ್ (LPG Connection) ಕುಟುಂಬಗಳಿಗೆ ಮಾತ್ರ ಸಿಲಿಂಡರ್ ವಿತರಣೆ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಗ್ಯಾಸ್ ಸಿಲೆಂಡರ್ ಸುರಕ್ಷತೆ ಇಲ್ಲದೆ ಇರುವ ಕುಟುಂಬಗಳಿಗೆ ಇನ್ನು ಮುಂದೆ ಗ್ಯಾಸ್ ವಿತರಣೆಯನ್ನು ಸ್ಥಗಿತಗೊಳಿಸಲಾಗುವುದು.

advertisement

ಏಕೆ ಪಂಚವಾರ್ಷಿಕ ಅನಿಲ ತಪಾಸಣೆ ಕಡ್ಡಾಯ!

ಅನಿಲ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಭಾರತ್ ಸಿಲೆಂಡರ್ (Bharat Gas Cylinder) ಈ ಹೊಸ ಉಪಕ್ರಮ ಕೈಗೊಂಡಿದೆ, ತನ್ನ ಗ್ರಾಹಕರ ಮನೆಗೆ ಸಿಬ್ಬಂದಿಗಳನ್ನು ಕಳುಹಿಸಿ ಪಂಚ ವಾರ್ಷಿಕ ಅನಿಲ ಸುರಕ್ಷತೆ ಬಗ್ಗೆ ಮಾಹಿತಿಯನ್ನು ನೀಡಿ ಗ್ಯಾಸ್ ಸಿಲಿಂಡರ್ ಸುರಕ್ಷತೆ ಪರಿಶೀಲನೆ ನಡೆಸಲಾಗುತ್ತದೆ.

ತನ್ನ ಪ್ರತಿ ಗ್ರಾಹಕರ ಮನೆಗೆ ಹೋಗಿ ಗ್ಯಾಸ್ ಸಿಲಿಂಡರ್ ಸುರಕ್ಷತೆ ಪರೀಕ್ಷೆ ಮಾಡಿ ವರದಿ ಸಲ್ಲಿಸಲಾಗುತ್ತದೆ. ಈ ಸಮಯದಲ್ಲಿ ಗ್ರಾಹಕರು 236 ರೂಪಾಯಿಗಳನ್ನು ಪಾವತಿ ಮಾಡಬೇಕು.ನಿಮ್ಮ ಗ್ಯಾಸ್ ಸಿಲೆಂಡರ್ ಬಳಕೆ ಸುರಕ್ಷಿತವಾಗಿದ್ದರೆ ಅದೇ ರೀತಿ ವರದಿ ನೀಡಲಾಗುತ್ತದೆ ಹಾಗೂ ಬಳಸುತ್ತಿರುವ ಪೈಪ್ ಅಥವಾ ಟ್ಯೂಬ್ ಯಾವುದೇ ಐದು ವರ್ಷಕ್ಕಿಂತ ಹಳೆಯದಾಗಿದ್ದರೆ ಅಥವಾ ಅಪಾಯದ ಮಟ್ಟವನ್ನು ತಲುಪಿದ್ದರೆ ತಕ್ಷಣವೇ ಅದನ್ನು ಬದಲಾಯಿಸಲು ನಿಮಗೆ ಸೂಚನೆ ನೀಡಲಾಗುವುದು. ಭಾರತ್ ಗ್ಯಾಸ್ ಗ್ರಾಹಕರು ನೀವಾಗಿದ್ದರೆ ನಿಮ್ಮ ಮನೆಗೆ ಸಿಬ್ಬಂದಿಗಳು ಬಂದಾಗ ಅವರ ಐಡೆಂಟಿಟಿ ಕಾರ್ಡ್ ಚೆಕ್ (Identity Card) ಮಾಡಿ ನಂತರ ಮನೆಯ ಒಳಗೆ ಬಿಡಿ.. ಇದು ಭಾರತ್ ಗ್ಯಾಸ್ ನೀಡಿರುವ ಸೂಚನೆಯಾಗಿದೆ.

ಗ್ಯಾಸ್ ಸಿಲಿಂಡರ್ ಗೆ ಇ ಕೆ ವೈ ಸಿ (E-kyc) ಕಡ್ಡಾಯ :

ಕೇಂದ್ರ ಸರ್ಕಾರದ ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು ಗ್ಯಾಸ್ ಸಿಲಿಂಡರ್ ಗೆ e-kyc ಯನ್ನ ಕಡ್ಡಾಯವಾಗಿ ಮಾಡಿಸಬೇಕೆಂದು ಘೋಷಿಸಿದೆ. ಈ ಕೆವೈಸಿ ಮಾಡಿಸದಿದ್ದರೆ ಈಗ ದೊರಕುತ್ತಿರುವ ಸಬ್ಸಿಡಿ ಹಣ ನಿಲ್ಲುತ್ತದೆ. ಕೇಂದ್ರ ಸರ್ಕಾರವು E-kyc ಯನ್ನು ಮಾಡಿಸಲು ಈಗಾಗಲೇ ನವಂಬರ್ ಇಂದ ಅವಕಾಶವನ್ನು ನೀಡಿದೆ. ಇದನ್ನು ಮಾಡಿಸದಿದ್ದರೆ ಮುಂದಿನ ದಿನಗಳಲ್ಲಿ ನಿಮಗೆ ಗ್ಯಾಸ್ ಸಿಲಿಂಡರ್ ಮೇಲೆ ದೊರಕುತ್ತಿದ್ದ ಸಬ್ಸಿಡಿಯು ಕಡಿತಗೊಳ್ಳುತ್ತದೆ ಹಾಗಾಗಿ ಆದಷ್ಟು ಬೇಗ ಮಾಡಿಸಿ.

ಇಲ್ಲಿವರೆಗೂ ಕೇವಲ ಅರ್ಧದಷ್ಟು ಜನ ಮಾತ್ರ e-kyc ಯನ್ನು ಮಾಡಿಸಿರುವುದನ್ನು ಸರ್ಕಾರ ಗಮನಿಸಿದೆ ಈ ಕೂಡಲೇ ಬಯೋಮೆಟ್ರಿಕ್ () cಮುಖಾಂತರ E-kyc ಯನ್ನು ಮಾಡಿಸಿಕೊಳ್ಳಿ ಎಂದು ಘೋಷಿಸಿದೆ.

 

advertisement

Leave A Reply

Your email address will not be published.