Karnataka Times
Trending Stories, Viral News, Gossips & Everything in Kannada

Aadhaar Card: ಒಂದು ಮೊಬೈಲ್ ಸಂಖ್ಯೆ ಜೊತೆ ಎಷ್ಟು ಆಧಾರ್ ಕಾರ್ಡ್ ಲಿಂಕ್ ಮಾಡಬಹುದು ಗೊತ್ತಾ?

advertisement

ವ್ಯಕ್ತಿಯ ಬಯೋಮೆಟ್ರಿಕ್ ಆಧಾರವಾಗಿರುವ ವಿಶಿಷ್ಟ ಗುರುತಿನ ಚೀಟಿ ಆಧಾರ್ ಕಾರ್ಡ್ (Aadhaar Card) ಆಗಿದೆ. ದೇಶದಲ್ಲಿ ಪ್ರತಿಯೊಬ್ಬನಿಗೂ ಕೊಡಲಾಗಿರುವ ಪ್ರಮುಖ ಗುರುತಿನ ಚೀಟಿ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ ಯುಐಡಿಎಐ ನಾಗರಿಕರಿಗೆ ಆಧಾರ್ ಕಾರ್ಡ್ ನೀಡುತ್ತದೆ.

ಆಧಾರ್ ಕಾರ್ಡ್ ನ ಉಪಯೋಗಗಳು ಹಲವು. ಯಾವುದೇ ಹಣಕಾಸಿನ ವ್ಯವಹಾರಕ್ಕೆ, ಹೂಡಿಕೆ ಮಾಡುವುದಕ್ಕೆ, ಮಕ್ಕಳಿಗೆ ಶಾಲಾ ಕಾಲೇಜುಗಳಿಗೆ ಹೆಸರು ಸೇರಿಸಲು ಕೂಡ ಆಧಾರ್ ಕಾರ್ಡ್ ಬೇಕು. ಅಷ್ಟೇ ಯಾಕೆ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಮದುವೆ ಸರ್ಟಿಫಿಕೇಟ್ ಮಾಡಿಸಲು ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ (Driving License) ಮೊದಲಾದ ಗುರುತಿನ ಚೀಟಿ ಮಾಡಿಸಲು ಕೂಡ ಆಧಾರ್ ಬೇಕೇ ಬೇಕು.

ಮೊಬೈಲ್ ಸಂಖ್ಯೆಗೆ ಆಧಾರ್ ಕಾರ್ಡ್ ಲಿಂಕ್!

ನಮ್ಮ ಬಳಿ ಇರುವ ಮೊಬೈಲ್ ಸಂಖ್ಯೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಬೇಕು. ನೀವು ಯಾವುದೇ ಆಧಾರ್ ಕಾರ್ಡ್ ಗೆ ಸಂಬಂಧಪಟ್ಟ ವ್ಯವಹಾರ ಮಾಡುವಾಗ ಆನ್ಲೈನ್ ನಲ್ಲಿ ಓಟಿಪಿ ಮೂಲಕ ವ್ಯವಹಾರ ಮಾಡಬೇಕಾಗುತ್ತದೆ. ಹಾಗಾಗಿ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಓಟಿಪಿ ಕಳುಹಿಸಲಾಗುತ್ತದೆ. ಮೊಬೈಲ್ ಸಂಖ್ಯೆಗೂ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು.

ನಿಮ್ಮ ಮೊಬೈಲ್ ಸಂಖ್ಯೆಗೆ ಎಷ್ಟು ಆಧಾರ್ ಕಾರ್ಡ್ ಲಿಂಕ್ ಆಗಿರಬಹುದು ಎನ್ನುವುದು ನಿಮಗೆ ಗೊತ್ತಾ?

advertisement

ಒಂದು ಮೊಬೈಲ್ ಸಂಖ್ಯೆ ಎಷ್ಟು ಆಧಾರ್ ಕಾರ್ಡ್ (Aadhaar Card) ಬೇಕಾದರೂ ಲಿಂಕ್ ಮಾಡಬಹುದು. ಇದಕ್ಕೆ ಯಾವುದೇ ನಿರ್ಬಂಧ ಇಲ್ಲ. ಒಂದು ಮೊಬೈಲ್ ಸಂಖ್ಯೆಗೆ ಬಹು ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಸಾಧ್ಯವಿದೆ.

ಮೊಬೈಲ್ ಸಂಖ್ಯೆ ಆಧಾರ್ ಲಿಂಕ್ ಮಾಡಿಸುವುದು ಹೇಗೆ?

ನೀವು ಆನ್ಲೈನ್ ಮೂಲಕ ಅಥವಾ ಹತ್ತಿರದ ಆಧಾರ ಕೇಂದ್ರಕ್ಕೆ ಹೋಗಿ ಮೊಬೈಲ್ ಸಂಖ್ಯೆಗೆ ಆಧಾರ್ ಲಿಂಕ್ ಮಾಡಿಸಬಹುದು. ಆಧಾರ್ ಕೇಂದ್ರದಲ್ಲಿ ನಿಮಗೆ ಒಂದು ಅರ್ಜಿ ಫಾರಂ ಕೊಡಲಾಗುತ್ತದೆ. ಅದನ್ನು ಭರ್ತಿ ಮಾಡಿ ನೀವು ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಕೊಳ್ಳಬಹುದು. ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ನವೀಕರಿಸಲು 50 ರೂಪಾಯಿಗಳ ಶುಲ್ಕ ಪಾವತಿಸಬೇಕು. ಈ ಕೆಲಸವನ್ನು ನೀವು ಹತ್ತಿರದ ಸೈಬರ್ ಸೆಂಟರ್ ನಲ್ಲಿಯೂ ಕೂಡ ಮಾಡಿಸಿಕೊಳ್ಳಬಹುದು.

ಈ ರೀತಿ ಮೊಬೈಲ್ ಸಂಖ್ಯೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಅಪ್ಲೈ ಮಾಡಿದ ನಂತರ ಕೆಲವು ದಿನಗಳಲ್ಲಿ ಲಿಂಕ್ ಆಗಿರುವ ಬಗ್ಗೆ ನಿಮಗೆ ಅಧಿಕೃತ ಮೆಸೇಜ್ ಕಳುಹಿಸಲಾಗುತ್ತದೆ. ಈ ರೀತಿಯಾಗಿ ನೀವಿನ್ನು ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಲಿಂಕ್ ಮಾಡದೆ ಇದ್ರೆ ಅಥವಾ ಹಳೆ ಸಂಖ್ಯೆಯನ್ನು ತೆಗೆದು ಹೊಸ ಸಂಖ್ಯೆಯನ್ನು ಲಿಂಕ್ ಮಾಡಲು ಬಯಸಿದರೆ ತಕ್ಷಣವೇ ಅಪ್ಡೇಟ್ ಮಾಡಿಕೊಳ್ಳಿ.

advertisement

Leave A Reply

Your email address will not be published.