Karnataka Times
Trending Stories, Viral News, Gossips & Everything in Kannada

Aadhaar Card: ಆಧಾರ್ ಕಾರ್ಡ್ ಇದ್ದವರಿಗೆ ಈ ಕೆಲಸ ಕಡ್ಡಾಯ!

advertisement

ಇದೀಗ ಆಧಾರ್ ಕಾರ್ಡ್ಗೆ (Aadhaar Card) ಎಲ್ಲಿಲ್ಲದ ಮಹತ್ವ ಬಂದಿದೆ. ಎಲ್ಲ ಕೆಲಸಕ್ಕೂ ಆಧಾರ ಕೇಳ್ತಿದ್ದಾರೆ. ನೂತನ ಸರ್ಕಾರದ ಗ್ಯಾರಂಟಿ ಯೋಜನೆಗಳಿಗಂತೂ ಆಧಾರ್ ಕಾರ್ಡೇ ಆಧಾರ! ಗೃಹಲಕ್ಷ್ಮಿ (Gruha Lakshmi) ಸೇರಿದಂತೆ ಅನೇಕ ಯೋಜನೆಗಳ ಲಾಭ ಪಡೆಯಲು ಆಧಾರ್ ಕಡ್ಡಾಯವಾಗಿದೆ. ಆದರೆ ಇತ್ತೀಚೆಗೆ ಅನೇಕರಿಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿ ಅಂತ ಸಂದೇಶಗಳು ಬರ್ತಿವೆ. ಇದಕ್ಕೆ ಕಾರಣ ಆಧಾರ್ ಕಾರ್ಡ್ ನ್ನು ಹತ್ತು ವರ್ಷದಿಂದ ಒಮ್ಮೆಯೂ ಅಪ್ಡೇಟ್ (Aadhaar Update) ಮಾಡದೇ ಇರೋದು. ಹೌದು ಹತ್ತುವರ್ಷ ಮೇಲ್ಪಟ್ಟ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲ ಎಂದಾದರೆ ಆಧಾರ್ ಕಾರ್ಡ್ ರದ್ದಾಗುತ್ತದೆ.

Aadhaar Card ಯಾಕಾಗಿ ಅಪ್ಡೇಟ್ ಮಾಡಬೇಕು?

 

 

ಆಧಾರ ಕಾರ್ಡ್ ಪಡೆದು ಹತ್ತು ವರ್ಷವಾದವರು ಇದೀಗ ಆಧಾರ್ ಕಾರ್ಡ್ ನ್ನು ಮತ್ತೊಮ್ಮೆ ಅಪ್ಡೇಟ್ ಮಾಡಬೇಕಾಗಿದೆ. ಇದಕ್ಕೆ ಕಾರಣ ಆಧಾರ್ ಕಾರ್ಡ್ ಪಡೆದ ವ್ಯಕ್ತಿಯ ಬಗ್ಗೆ ಮಾಹಿತಿ ಯನ್ನು ಅಪ್ಡೇಟ್ ಮಾಡೋದು ಮತ್ತು ದುರುಪಯೋಗ ತಪ್ಪಿಸೋದಾಗಿದೆ. ಹೀಗಾಗಿಯೇ ಆಧಾರ್ ನಿಂದ ಹತ್ತು ವರ್ಷಕ್ಕೂ ಮೇಲ್ಪಟ್ಟ ಅನೇಕರಿಗೆ ನಿಮ್ಮ ಆಧಾರ್ ಕಾರ್ಡ್ ನ್ನು ಅಪ್ಡೇಟ್ ಮಾಡಿ ಅಂತ ಮೇಲಿಂದ ಮೇಲೆ ಸಂದೇಶಗಳು ಬರುತ್ತಿದ್ದರೆ ಬೇಗನೆ ಅಪ್ಡೇಟ್ ಮಾಡಿ.

advertisement

Aadhaar Card ಅಪ್ಡೇಟ್ ಸೇವಾ ಶುಲ್ಕ ಎಷ್ಟು?

ಹೊಸದಾಗಿ ಆಧಾರ್ ನೋಂದಣಿಗೆ ಮತ್ತು 5 ವರ್ಷ ಮೇಲ್ಪಟ್ಟು 7 ವರ್ಷದ ಒಳಗಿನ ಎಲ್ಲಾ ಮಕ್ಕಳ Biometric ನವೀಕರಣವು ಉಚಿತವಾಗಿರುತ್ತದೆ. ಉಳಿದಂತೆ ಹೆಸರು, ಲಿಂಗ, ವಯಸ್ಸು, ವಿಳಾಸ ಹಾಗೂ ಮೊಬೈಲ್ ನಂಬರುಗಳ ವಿವರದ ನವೀಕರಣಕ್ಕೆ 50 ರೂ. ಮತ್ತು ಕಣ್ಣು, ಮುಖ, ಕೈ ಬೆರಳುಗಳ ವಿವರ (Demographic) ನವೀಕರಣಕ್ಕೆ 100 ರೂ.ಗಳ ಸೇವಾ ಶುಲ್ಕ ಇದ್ದು, ಸಾರ್ವಜನಿಕರು ಇದಕ್ಕಿಂತ ಹೆಚ್ಚಿನ ಶುಲ್ಕ ಪಾವತಿ ಮಾಡಬೇಕಿಲ್ಲ.

 

 

ಆಧಾರ್ ಕಾರ್ಡ್ ಇಲ್ಲದೆ ಬ್ಯಾಂಕಿನ ವಹಿವಾಟು ನಡೆಸಲು ಸಾಧ್ಯವಿಲ್ಲ . ಅಲ್ಲದೆ ಇತ್ತೀಚಿಗೆ ಸರ್ಕಾರವು ಬಿಟ್ಟಿದಂತಹ 5 ಯೋಜನೆಗಳಲ್ಲಿ ಪ್ರಮುಖವಾದ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಗಂತೂ ಆಧಾರ್ ಕಾರ್ಡ್ ತುಂಬಾ ಮುಖ್ಯವಾಗಿದೆ. ಬ್ಯಾಂಕುಗಳಿಗೆ ಆಧಾರ್ ಕಾರ್ಡ್ ಅಪ್ಡೇಟ್ ಆಗಿರಲೇಬೇಕು ಎಂದು ಸರ್ಕಾರವು ಕಡ್ಡಾಯವಾಗಿ ಆದೇಶ ನೀಡಿದೆ. ಒಟ್ಟಾರೆ ಆಧಾರ್ ಕಾರ್ಡ್ ಪ್ರತಿಯೊಬ್ಬ ವ್ಯಕ್ತಿಯ ಮುಖ್ಯ ದಾಖಲೆ ಎಂದು ಹೇಳಬಹುದು. ನೀವೇನಾದರೂ ಇವರಿಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದಿದ್ದರೆ ಆದಷ್ಟು ಬೇಗನೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳಿ.

advertisement

Leave A Reply

Your email address will not be published.