Karnataka Times
Trending Stories, Viral News, Gossips & Everything in Kannada

PAN Card: ಪ್ಯಾನ್ ಕಾರ್ಡ್ ಹೊಂದಿರುವವರಿಗೆ ಆದಾಯ ತೆರಿಗೆ ಇಲಾಖೆಯಿಂದ 10,000 ದಂಡ, ಯಾಕೆ ಗೊತ್ತೇ?

advertisement

ಭಾರತದ ಆದಾಯ ತೆರಿಗೆ ಇಲಾಖೆಯಿಂದ ಪ್ರತಿಯೊಬ್ಬ ಭಾರತೀಯ ನಾಗರಿಕನಿಗೆ ನೀಡಲಾಗುವ ಗುರುತಿನ ಕಾರ್ಡ್ (Identity Card) ಆಗಿದೆ ಪ್ಯಾನ್ ಕಾರ್ಡ್ (PAN Card), ಆದಾಯ ತೆರಿಗೆ (Income Tax) ಕಾಯ್ದೆಯ ಸೆಕ್ಷನ್ 272ಬಿ ಅಡಿಯಲ್ಲಿ ಪಾನ್ ಕಾರ್ಡ್ ಹೊಂದಿರುವವರಿಗೆ 10,000 ದಂಡ ವಿಧಿಸಲಾಗುತ್ತದೆ. ಪ್ಯಾನ್ ಕಾರ್ಡ್ ಪ್ರಮುಖ ದಾಖಲೆ ಆಗಿದ್ದು ಅದನ್ನು ಹೊಂದಿದ್ದರೆ ದಂಡ ಯಾಕೆ ಪಾವತಿಸಬೇಕು ಎನ್ನುವ ಪ್ರಶ್ನೆ ಮೂಡುವುದು ಸಹಜ. ಪ್ಯಾನ್ ಕಾರ್ಡ್ ಅನ್ನು ಹೊಂದಿರಬೇಕು, ಆದರೆ ಪಾನ್ ಕಾರ್ಡ್ ನಕಲಿ ಆಗಿದ್ದರೆ ಅಥವಾ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಬಳಸುತ್ತಿದ್ದರೆ ಆಗ ದಂಡ ಪಾವತಿಸಬೇಕಾಗುತ್ತದೆ.

ಪ್ರಮುಖ ದಾಖಲೆ ಆಗಿರುವ PAN Card:

ನಾವು ಎಲ್ಲಾ ಕೆಲಸಕ್ಕೂ ಹೇಗೆ ಆಧಾರ್ ಕಾರ್ಡ್ ಬಳಸುತ್ತೇವೆಯೋ ಅಂತೆಯೇ ಎಲ್ಲಾ ಹಣಕಾಸಿನ ವ್ಯವಹಾರಕ್ಕೆ ಕೂಡ ಪಾನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆ ಆಗಿರುತ್ತದೆ. ಆದಾಯ ತೆರಿಗೆ ಸಂಬಂಧಪಟ್ಟ ಯಾವುದೇ ರೀತಿಯ ತೆರಿಗೆ ಪಾವತಿ ಮಾಡುವುದಿದ್ದರೆ ವ್ಯಕ್ತಿಯ ಪ್ಯಾನ್ ಕಾರ್ಡ್ ಬಹಳ ಮುಖ್ಯವಾಗಿರುವ ಗುರುತಿನ ಚೀಟಿಯಾಗಿ ಬಳಸಲ್ಪಡುತ್ತದೆ.

 

advertisement

Fake PAN Card:

ಜನರು ಪ್ಯಾನ್ ಕಾರ್ಡ್ ವಿಚಾರದಲ್ಲಿ ಯಾವುದೇ ರೀತಿಯ ವಂಚನೆ ಮಾಡುವಂತಿಲ್ಲ, ಬೇರೆಯವರ ಹೆಸರಿನಲ್ಲಿ ಪಾನ್ ಕಾರ್ಡ್ ಹೊಂದುವುದು ಅಥವಾ ನಕಲಿ ಪಾನ್ ಕಾರ್ಡ್ (Fake PAN Card) ಹೊಂದಿದ್ದು, ಅದರ ಮೂಲಕ ಹಣಕಾಸಿನ ವ್ಯವಹಾರ ಮಾಡುತ್ತಿದ್ದರೆ ಅಂತವರಿಗೆ ಆದಾಯ ತೆರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಹೊಂದಿರುವುದು:

ಸಾಮಾನ್ಯವಾಗಿ ಎರಡು ಬಾರಿ ಪಾನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ, ಐಟಿ ಇಲಾಖೆಯಿಂದ ಹಾಗೂ ಹೊರಗುತ್ತಿಗೆ ಪಡೆದ ಏಜೆನ್ಸಿಗಳಿಂದ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದು. ಇಂತಹ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಎರಡು ಪಾನ್ ಕಾರ್ಡ್ ಹೊಂದುವ ಸಾಧ್ಯತೆ ಇರುತ್ತದೆ. ಆದರೆ ಹಾಗೇನಾದರೂ ನಿಮ್ಮ ಬಳಿ ಎರಡು ಪ್ಯಾನ್ ಕಾರ್ಡ್ ಇದ್ದು ಎರಡು ಪ್ಯಾನ್ ನಂಬರ್ ಗಳ ಮೂಲಕ ನೀವು ಹಣಕಾಸಿನ ವ್ಯವಹಾರ ಮಾಡುತ್ತಿದ್ದರೆ ಬಾರಿ ದೊಡ್ಡ ನಷ್ಟವನ್ನು ಅನುಭವಿಸಬೇಕಾಗುತ್ತದೆ.

ಈಗಲೇ ರದ್ದುಪಡಿಸಿ:

ನಿಮ್ಮ ಬಳಿ ನಕಲಿ ಪಾನ್ ಕಾರ್ಡ್ ಇದ್ದರೆ ಅಥವಾ ಒಂದಕ್ಕಿಂತ ಹೆಚ್ಚು ಪಾನ್ ಕಾರ್ಡ್ ಬಳಕೆಯಲ್ಲಿ ಇದ್ದರೆ ತಕ್ಷಣ ಒಂದು ಪ್ಯಾನ್ ಕಾರ್ಡ್ ಅನ್ನು ಸಂಬಂಧ ಪಟ್ಟ ಇಲಾಖೆಗೆ ಕೊಟ್ಟು ರದ್ದುಪಡಿಸಿಕೊಳ್ಳಿ. ಇಲ್ಲವಾದರೆ ಆದಾಯ ತೆರಿಗೆ ಇಲಾಖೆಯ ಸೆಕ್ಷನ್ 272 ಅಡಿಯಲ್ಲಿ 10,000 ರೂಪಾಯಿಗಳ ದಂಡವನ್ನು ಪಾವತಿಸಬೇಕು. ಅಷ್ಟೇ ಅಲ್ಲದೆ ಅನುಚಿತ ಸಂದರ್ಭದಲ್ಲಿ ಬಳಕೆಯಾಗಿರುವ ಪಾನ್ ಕಾರ್ಡ್ ನಿಷ್ಕ್ರಿಯಗೊಳಿಸುವ ಸಾಧ್ಯತೆಯು ಇರುತ್ತದೆ. ಹಾಗಾಗಿ ಪ್ಯಾನ್ ಕಾರ್ಡ್ ಬಳಕೆ ವಿಚಾರದಲ್ಲಿ ಬಹಳ ಜಾಗರೂಕತೆಯಿಂದ ಇರುವುದು ಮುಖ್ಯ.

advertisement

Leave A Reply

Your email address will not be published.