Karnataka Times
Trending Stories, Viral News, Gossips & Everything in Kannada

Cash Transaction: ಪತಿ ಪತ್ನಿ, ತಂದೆ ಮಗನ ನಡುವಿನ ನಗದು ವ್ಯವಹಾರಗಳ ನಿಯಮದಲ್ಲಿ ಹೊಸ ಬದಲಾವಣೆ; ರೂಲ್ಸ್ ತಿಳಿದುಕೊಳ್ಳಿ!

advertisement

ಆದಾಯ ತೆರಿಗೆ ಇಲಾಖೆ (Income Tax Department) ಯ ಪ್ರತಿಯೊಬ್ಬರ ಹಣಕಾಸಿನ ವ್ಯವಹಾರದ ಮೇಲೆ ಕೂಡ ತನ್ನ ದೃಷ್ಟಿ ನೆಟ್ಟಿರುತ್ತದೆ. ಅದರಲ್ಲೂ ಯಾವುದೇ ಸಂಬಂಧಗಳಲ್ಲಿ ಗಂಡ – ಹೆಂಡತಿ (Husband – Wife) ಅಥವಾ ಮಗ – ತಂದೆಯ (Son – Father) ನಡುವಿನ ಹಣಕಾಸು ವ್ಯವಹಾರ ನಗದು (Cash Transaction) ರೂಪದಲ್ಲಿ ಇದ್ದರೆ ಅವುಗಳ ಮೇಲೆ ಕೂಡ ತೆರಿಗೆ ಇಲಾಖೆ ಗಮನ ಇದ್ದೇ ಇರುತ್ತದೆ.

ನಿಮ್ಮ ಹತ್ತಿರದ ಸಂಬಂಧಗಳಲ್ಲಿ ನೀವು ಹಣಕಾಸಿನ ವ್ಯವಹಾರ ಮಾಡುತ್ತಿದ್ದರೆ ಈ ವಿಷಯವನ್ನು ಚೆನ್ನಾಗಿ ತಿಳಿದುಕೊಳ್ಳಿ. ಪತಿ – ಪತ್ನಿ ತಂದೆ – ಮಗ, ನಗದು ಹಣಕಾಸಿನ ವ್ಯವಹಾರ (Cash Transaction) ಮಾಡುತ್ತಿದ್ದರೆ ಈ ಮಾಹಿತಿ ಅಂಥವರಿಗೆ ಬಹಳ ಉಪಯುಕ್ತವಾಗಿದೆ. ಆದಾಯ ತೆರಿಗೆ ಇಲಾಖೆ (Income Tax Department) ಯ ನಿಯಮದ ಪ್ರಕಾರ, ಕುಟುಂಬದಲ್ಲಿ ನೀವು ಎಷ್ಟು ನಗದು ವಹಿವಾಟನ್ನು ಮಾಡಬಹುದು ಎನ್ನುವುದಕ್ಕೂ ಕೂಡ ನಿಯಮಗಳು ಇವೆ. ಹಾಗಾದ್ರೆ ಆದಾಯ ತೆರಿಗೆ ಇಲಾಖೆ ನಗದು ಹಣಕಾಸಿನ ವ್ಯವಹಾರಕ್ಕೆ ವಿಧಿಸಿರುವ ನಿಯಮಗಳು ಯಾವವು ನೋಡೋಣ.

Income Tax Department ನ ನೋಟಿಸ್ ನಿಮ್ಮ ಮನೆಗೆ:

 

 

ಆದಾಯ ತೆರಿಗೆ ನಿಯಮ (Income Tax Department) ದ ಪ್ರಕಾರ ಪ್ರತಿ ತಿಂಗಳು ಮನೆಯ ಖರ್ಚಿಗೆ ದಿನಸಿ ಸಾಮಾನು ಖರೀದಿಸಲು ಹೆಂಡತಿಗೆ, ಪತಿ ಹಣ ನೀಡಿದರೆ, ಅಥವಾ ಉಡುಗೊರೆಯಾಗಿ ಹಣವನ್ನು ಪಡೆದರೆ, ಆ ಹಣಕ್ಕೆ ಯಾವುದೇ ಆದಾಯ ತೆರಿಗೆ ಪಾವತಿಸುವ ಅಗತ್ಯ ಇಲ್ಲ. ಈ ಹಣವನ್ನು, ಪತಿಯ ಆದಾಯ ಎಂದು ಪರಿಗಣಿಸಲಾಗುತ್ತದೆ. ಈ ಮೊತ್ತಕ್ಕೆ ಆದಾಯ ತೆರಿಗೆ ಇಲಾಖೆಯಿಂದ ಪತ್ನಿಗೆ ಯಾವುದೇ ರೀತಿಯ ತೆರಿಗೆ ವಿಧಿಸಲಾಗುವುದಿಲ್ಲ.

advertisement

ಆದರೆ ಆ ಹಣವನ್ನು ಮತ್ತೆ ಮತ್ತೆ ಬಳಸಿಕೊಂಡು ಹೂಡಿಕೆ ಮಾಡಿದರೆ, ಹೂಡಿಕೆಯ ಹಣದಿಂದ ಆದಾಯ ಗಳಿಸಿದರೆ ಆಗ ತೆರಿಗೆ ಪಾವತಿ ಮಾಡಬೇಕಾಗುತ್ತದೆ. ಈ ಹೂಡಿಕೆ ವರ್ಷದಿಂದ ವರ್ಷಕ್ಕೆ, ಲೆಕ್ಕ ಹಾಕಿ ಹೂಡಿಕೆ ಆದಾಯವನ್ನು ಹೆಂಡತಿಯ ಆದಾಯ ಎಂದು ಪರಿಗಣಿಸಲಾಗುವುದು. ಅಂತಹ ಸಂದರ್ಭದಲ್ಲಿ ಈ ಆದಾಯದ ಮೇಲೆ ತೆರಿಗೆ ಪಾವತಿಸಬೇಕಾಗುತ್ತದೆ.

Penalty on Cash Transactions:

 

 

ಆದಾಯ ತೆರಿಗೆಯ ಸೆಕ್ಷನ್ 269SS ಮತ್ತು 269T ಅಡಿಯಲ್ಲಿ 20,000 ಗಳಿಗಿಂತ ಹೆಚ್ಚಿನ ನಗದು ವಹಿವಾಟು (Cash Transaction) ಮಾಡಿದರೆ ಆಗ ಹೆಚ್ಚುವರಿ ದಂಡ ಪಾವತಿಸಬೇಕಾಗುತ್ತದೆ. ಆದರೆ ಸಾಕಷ್ಟು ಸಂದರ್ಭಗಳಲ್ಲಿ ಈ ದಂಡದ ಮೊತ್ತದಲ್ಲಿ ಸಡಿಲಿಕೆ ನೀಡಲಾಗುವುದು.

ಯಾವ ಸಂದರ್ಭದಲ್ಲಿ ಸಿಗಲಿದೆ ವಿನಾಯಿತಿ:

ತಂದೆ – ಮಗ, ಪತಿ – ಪತ್ನಿ ಹೀಗೆ ನಿಕಟ ಸಂಬಂಧಗಳಲ್ಲಿ ಹಣಕಾಸಿನ ವಹಿವಾಟು ಮಾಡಿದ್ರೆ ಯಾವುದೇ ರೀತಿಯ ದಂಡ ವಿಧಿಸಲಾಗುವುದಿಲ್ಲ. ಆದರೆ ಯಾವಾಗ ಈ ಹಣಕಾಸಿನ ವಹಿವಾಟು ಹೂಡಿಕೆಯಾಗಿ ಬದಲಾಗುತ್ತದೆಯೋ ಆಗ ದಂಡ ಪಾವತಿಸಬೇಕು. ಉದಾಹರಣೆಗೆ ಹೆಂಡತಿ ಗಂಡನಿಂದ ಪಡೆದ ಹಣವನ್ನು ಮತ್ತೆ ಮತ್ತೆ ಹೂಡಿಕೆ ಮಾಡಿ ಆದಾಯ ಗಳಿಸಿದರೆ ಆಗ ದಂಡ ಪಾವತಿಸಬೇಕಾಗುತ್ತದೆ. ಹಾಗಾಗಿ ಆದಾಯ ತೆರಿಗೆ ಈ ನಿಯಮಗಳನ್ನು ತಿಳಿದುಕೊಂಡು ಹಣಕಾಸಿನ ವ್ಯವಹಾರ ಮಾಡಿದ್ರೆ ಹೆಚ್ಚು ಸೇಫ್ ಎನ್ನಬಹುದು.

advertisement

Leave A Reply

Your email address will not be published.