Karnataka Times
Trending Stories, Viral News, Gossips & Everything in Kannada

Ayodhya Ram Mandir: ಅಯೋಧ್ಯ ರಾಮಮಂದಿರಕ್ಕೆ ಹೋಗುವ ಕನ್ನಡಿಗರಿಗೆ ಸರ್ಕಾರದಿಂದ ಸಿಕ್ಕಿದೆ ಗುಡ್ ನ್ಯೂಸ್!

advertisement

ಇನ್ನೇನು ಕೆಲವೇ ದಿನಗಳಲ್ಲಿ ಕೋಟ್ಯಾಂತರ ಕನ್ನಡಿಗರು ಕಾದು ಕುಳಿತಿದ್ದ ಕನಸು ನನಸಾಗಲಿದೆ. ಜನವರಿ 22, 2024 ಹಿಂದೆಂದೂ ಕಂಡರಿಯದ ಅದ್ಭುತಕ್ಕೆ ಸಾಕ್ಷಿಯಾಗಲಿದೆ.

ಕೇಂದ್ರ ಬಿಜೆಪಿ ಸರ್ಕಾರ ಅಂತೂ ಇಂತೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವನ್ನು ಸಾಕಾರಗೊಳಿಸಿದೆ. ಇದಕ್ಕೆ ಉತ್ತರ ಪ್ರದೇಶದ ಸರ್ಕಾರ ಸಾಕಷ್ಟು ಮುತುವರ್ಜಿಯಿಂದ ಕೆಲಸ ಮಾಡಿದ್ದು, ಇದೇ ಬರುವ ಜನವರಿ 22, 2024ಕ್ಕೆ ಲಕ್ಷಾಂತರ ಜನರ ಸಮ್ಮುಖದಲ್ಲಿ ಶ್ರೀ ರಾಮನ ಪ್ರಾಣ ಪ್ರತಿಷ್ಠೆ ಅಯೋಧ್ಯ ಮಂದಿರ (Ayodhya Ram Mandir) ದಲ್ಲಿ ನಡೆಯಲಿದೆ. 7000ಕ್ಕೂ ಅಧಿಕ ಚಿತ್ರ ನಟ ನಟಿಯರು ಹಾಗೂ ಗಣ್ಯರನ್ನು ಆಹ್ವಾನಿಸಲಾಗಿದೆ.

ಅತಿಥಿ ಗೃಹಕ್ಕೆ ವ್ಯವಸ್ಥೆ ಮಾಡಿದ ಕರ್ನಾಟಕ ಸರ್ಕಾರ:

 

 

ಉತ್ತರ ಪ್ರದೇಶದಲ್ಲಿ ಶ್ರೀರಾಮ ಮಂದಿರ (Ayodhya Ram Mandir) ನಿರ್ಮಾಣದಿಂದಾಗಿ ಉತ್ತರ ಪ್ರದೇಶದ ಪ್ರವಾಸೋದ್ಯಮ ಇನ್ನಷ್ಟು ಅಭಿವೃದ್ಧಿ ಆಗಲಿದೆ. ಅದರಲ್ಲೂ ಪ್ರಮುಖವಾಗಿ ಬೇರೆ ಬೇರೆ ರಾಜ್ಯಗಳು ಉತ್ತರ ಪ್ರದೇಶದಲ್ಲಿ ತಮ್ಮದೇ ರಾಜ್ಯದ ಪ್ರವಾಸಿಗರಿಗೆ ಅನುಕೂಲವಾಗಲು ಅತಿಥಿ ಗೃಹ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಇಂತಹ ರಾಜ್ಯಗಳಲ್ಲಿ ನಮ್ಮ ಕರ್ನಾಟಕ ರಾಜ್ಯವು ಕೂಡ ಒಂದು.

advertisement

ಅತಿಥಿ ಗೃಹ ನಿರ್ಮಾಣಕ್ಕೆ ಯುಪಿ ಸರ್ಕಾರಕ್ಕೆ 2020ರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ (Former Chief Minister Yediyurappa) ಅವರೇ ಮನವಿ ಪತ್ರ ಸಲ್ಲಿಕೆ ಮಾಡಿದ್ದರು. ಇದೀಗ ಮತ್ತೆ ಕರ್ನಾಟಕ ರಾಜ್ಯದಿಂದ ರಾಮಮಂದಿರ ವೀಕ್ಷಣೆಗಾಗಿ ಹೋಗುವ ಕರ್ನಾಟಕದ ಪ್ರವಾಸಿಗಳಿಗಾಗಿ ಉತ್ತರ ಪ್ರದೇಶದಲ್ಲಿಯೇ ಅತಿಥಿ ಗೃಹ ನಿರ್ಮಾಣ ಮಾಡಲು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅವರು ಮತ್ತೆ ಮನವಿ ಪತ್ರವನ್ನು ಕಳುಹಿಸಿದ್ದಾರೆ.

ಗ್ರೀನ್ ಸಿಗ್ನಲ್ ಕೊಟ್ಟ ಯುಪಿ ಸರ್ಕಾರ:

22ನೇ ತಾರೀಕಿನಂದು ಉದ್ಘಾಟನೆ ಸಮಯವನ್ನು ಹೊರತುಪಡಿಸಿ ಇನ್ನೂ ಮುಂದೆ ಉತ್ತರಪ್ರದೇಶಕ್ಕೆ ಶ್ರೀರಾಮ ಮಂದಿರ ದರ್ಶನಕ್ಕಾಗಿ ಲಕ್ಷಾಂತರ ಜನ ಪ್ರತಿದಿನ ಪ್ರಯಾಣ ಮಾಡಲಿದ್ದಾರೆ. ಹೀಗಾಗಿ ಉತ್ತರ ಪ್ರದೇಶದಲ್ಲಿ ಎಲ್ಲಾ ಭಕ್ತಾದಿಗಳಿಗೂ ಅನುಕೂಲವಾಗುವಷ್ಟು ಅತಿಥಿ ಗೃಹ ಇರಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ತನ್ನ ಪ್ರಜೆಗಳಿಗೆ ಅನುಕೂಲವಾಗುವಂತೆ ಉತ್ತರ ಪ್ರದೇಶದಲ್ಲಿ ಅತಿಥಿ ಗೃಹ ನಿರ್ಮಾಣ ಮಾಡಲಿ ತೀರ್ಮಾನಿಸಿದ್ದು ಇದಕ್ಕೆ ಉತ್ತರ ಪ್ರದೇಶ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ.

 

 

ಇನ್ನು ಒಂದು ವರ್ಷಗಳ ಅವಧಿಯಲ್ಲಿ ಕರ್ನಾಟಕ ರಾಜ್ಯ ಮುಜರಾಯಿ ಇಲಾಖೆಯಿಂದ ಉತ್ತರ ಪ್ರದೇಶದ ರಾಮ ಮಂದಿರದ ಸಮೀಪ 5 ಎಕರೆ ಜಾಗದಲ್ಲಿ 10 ಕೋಟಿ ವೆಚ್ಚದಲ್ಲಿ ಅತಿಥಿ ಗೃಹ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ ತಯಾರಿ ನಡೆಸುತ್ತಿದೆ. ಇದಕ್ಕೆ ಉತ್ತರ ಪ್ರದೇಶದ ಹೌಸಿಂಗ್ ಬೋರ್ಡ್ ಸಂಪೂರ್ಣ ಪರವಾನಿಗೆ ನೀಡಿದೆ.

ಹಾಗಾಗಿ 22 ಜನವರಿ 2024 ರಂದು ಭವ್ಯವಾಗಿರುವ ರಾಮ ಮಂದಿರ ಉದ್ಘಾಟನೆಯ ಬಳಿಕ ಕರ್ನಾಟಕದಿಂದ ಪ್ರತಿ ದಿನ ಉತ್ತರಪ್ರದೇಶಕ್ಕೆ ಪ್ರಯಾಣ ಬೆಳೆಸುವವರು ವಸತಿ ಹಾಗೂ ಊಟಕ್ಕಾಗಿ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಮ್ಮ ಸರ್ಕಾರದಿಂದಲೇ ಅತಿಥಿ ಗೃಹ ಉತ್ತರಪ್ರದೇಶದಲ್ಲಿ ತಲೆಎತ್ತಲಿದೆ.

advertisement

Leave A Reply

Your email address will not be published.