Karnataka Times
Trending Stories, Viral News, Gossips & Everything in Kannada

iPhone: ದುಬೈ ನಲ್ಲಿ ಎಷ್ಟು ಅಗ್ಗದ ಬೆಲೆಗೆ ಐಫೋನ್ ಸಿಗುತ್ತೆ ಗೊತ್ತಾ? ಭಾರತಕ್ಕಿಂತ ಸಿಕ್ಕಾಪಟ್ಟೆ ಕಡಿಮೆ ಬೆಲೆ!

advertisement

ದಿನದಿಂದ ದಿನಕ್ಕೆ ಸ್ಮಾರ್ಟ್ ಫೋನ್ (Smartphone) ಗಳಲ್ಲಿ ಸಾಕಷ್ಟು ವೈಶಿಷ್ಟ್ಯತೆಗಳನ್ನು ಹೊಂದಿರುವ ಹೊಸ ಹೊಸ ಫೋನ್ ಗಳು ಬಿಡುಗಡೆ ಆಗುತ್ತಿರುತ್ತವೆ. ಇದರ ಜೊತೆಗೆ ಐಫೋನ್ (iPhone) ಬೇಡಿಕೆ ಕೂಡ ಭಾರತದಲ್ಲಿ ಹೆಚ್ಚಾಗಿದೆ.

ಹೌದು, ಭಾರತದಲ್ಲಿ ಐಫೋನ್ (iPhone) ಕ್ರೇಜ್ ಸ್ವಲ್ಪ ಜಾಸ್ತಿ ಆಗಿದೆ ಎನ್ನಬಹುದು. ಅದರಲ್ಲೂ ಯುವಕ ಯುವತಿಯರು ಐಫೋನ್ ಖರೀದಿಗೆ ಮುಗಿಬಿದ್ದಿದ್ದಾರೆ. ಆದರೆ ಐಫೋನ್ ಬೆಲೆ ತುಸು ದುಬಾರಿ ಎನ್ನುವುದು ಎಲ್ಲರಿಗೂ ಗೊತ್ತು. ಇತ್ತೀಚಿಗೆ ಐಪೋನ್ 15 (iPhone 15) ಕೂಡ ಬಿಡುಗಡೆ ಆಗಿದೆ. ಐಫೋನ್ ಬೆಲೆ ಯುರೋಪ್, ಅಮೆರಿಕ (America) ಹಾಗೂ ದುಬೈ (Dubai) ಗಳಂತಹ ರಾಷ್ಟ್ರಗಳಲ್ಲಿ ಭಾರತಕ್ಕೆ ಹೋಲಿಸಿದರೆ ಸಾಕಷ್ಟು ಕಡಿಮೆ ಎನ್ನಬಹುದು. ಇದೇ ಕಾರಣಕ್ಕೆ ಸಾಕಷ್ಟು ಜನ ದುಬೈಗೆ ಪ್ರವಾಸ ಮಾಡುವಾಗ ಐಫೋನ್ ಖರೀದಿ ಮಾಡಿಕೊಂಡು ಬರುತ್ತಾರೆ.

 

 

ಭಾರತದಲ್ಲಿ ಅತ್ಯಂತ ದುಬಾರಿ ಆಗಿರುವ ಐಫೋನ್ (iPhone), ದುಬೈನಲ್ಲಿ 40 ರಿಂದ 50 ಸಾವಿರ ರೂಪಾಯಿಗಳಷ್ಟು ಕಡಿಮೆ ಬೆಲೆಗೆ ಸಿಗುತ್ತದೆ ಎಂದರೆ ಎಲ್ಲರಿಗೂ ಆಶ್ಚರ್ಯ ಆಗಲೇಬೇಕು. ಉದಾಹರಣೆಗೆ ಐಫೋನ್ 15 ಬೆಲೆ ಭಾರತದಲ್ಲಿ ಎರಡು ಲಕ್ಷ ರೂಪಾಯಿ ಆದರೆ ನೀವು ದುಬೈನಲ್ಲಿ ಇದೇ ಫೋನ್ ಖರೀದಿಸಿದರೆ 1,54,000ಗಳಿಗೆ ಖರೀದಿ ಮಾಡಬಹುದು. ಅಂದರೆ ಸುಮಾರು 50 ಸಾವಿರದಷ್ಟು ಕಡಿಮೆ ಬೆಲೆಗೆ ಐಫೋನ್ 15, ನಿಮಗೆ ದುಬೈನಲ್ಲಿ ಸಿಗುತ್ತದೆ.

advertisement

ದುಬೈ ನಲ್ಲಿ ಫೋನ್ ಬೆಲೆ ಎಷ್ಟು:

 

 

ಇತ್ತೀಚಿಗೆ ಬಿಡುಗಡೆ ಆಗಿರುವ ಐಫೋನ್ 15 ದುಬೈನಲ್ಲಿ 3,399 ದಿರ್ಹಮ್‌ ಗಳಿಗೆ ಲಭ್ಯ. ಭಾರತೀಯ ರೂಪಾಯಿಗೆ ಕನ್ವರ್ಟ್ ಮಾಡಿ ಹೇಳುವುದಾದರೆ ರೂ.76,700ಗಳು. ಅದೇ ರೀತಿ ದುಬೈ ನಲ್ಲಿ iPhone 15 Plus ನ ಆರಂಭಿಕ ಬೆಲೆ 3,799 ದಿರ್ಹಮ್‌ಗಳು. ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ 85,700 ರೂ. ಗಳು.

ಭಾರತೀಯ ಮಾರುಕಟ್ಟೆಯಲ್ಲಿಯೂ ಕೂಡ ಹೆಚ್ಚು ಬೇಡಿಕೆ ಹೊಂದಿರುವ ಐಫೋನ್ 15, ದುಬೈನಲ್ಲಿ ಭಾರತೀಯ ಬೆಲೆಗಿಂತಲೂ ರೂ. 50,000ಗಳಷ್ಟು ಕಡಿಮೆಗೆ ದೊರಕುತ್ತದೆ.

ಇನ್ನು ದುಬೈಗೆ ಹೋಗಿ ಬರುವ ಖರ್ಚು, ವೆಚ್ಚ ನೋಡುವುದಾದರೆ 20 ರಿಂದ 25 ಸಾವಿರ ರೂಪಾಯಿಗಳಿಗೆ ಹೋಗಿ ಬರಬಹುದು ಹಾಗಾಗಿ ಕೇವಲ ಐಫೋನ್ ಖರೀದಿ ಮಾಡುವುದಕ್ಕಾಗಿಯೇ ದುಬೈಗೆ ಹೋಗಿ ಬರುವವರು ಕೂಡ ಇದ್ದಾರೆ. ಅಷ್ಟರಮಟ್ಟಿಗೆ ನೀವು ಐಫೋನ್ ಬೆಲೆ ಮೇಲೆ ಉಳಿತಾಯ ಮಾಡಬಹುದು. ಹಾಗಾದ್ರೆ ಇನ್ಯಾಕೆ ತಡ ನೀವು ಕೂಡ ಐಫೋನ್ ಪ್ಲಾನ್ ಮಾಡುತ್ತಿದ್ದರೆ, ದುಬೈ ಟ್ರಿಪ್ ಗೂ ಕೂಡ ರೆಡಿ ಆಗಬಹುದು ನೋಡಿ!

advertisement

Leave A Reply

Your email address will not be published.